ಒಂದು ವರ್ಷದ ಗಂಡು ಮಗುವಿಗೆ ಲೈಂಗಿಕ ಸಾಮರ್ಥ್ಯ, ಮುಖದಲ್ಲಿ ಕೂದಲು !

Update: 2016-05-31 08:55 GMT

ನವದೆಹಲಿ : ರಾಜಧಾನಿ ದೆಹಲಿಯ ಒಂದು ವರ್ಷದ ಗಂಡು ಮಗುವೊಂದಕ್ಕೆ ಲೈಂಗಿಕ ಸಾಮರ್ಥ್ಯವಿರುವುದು ಪತ್ತೆಯಾಗಿದ್ದು ಮಗುವಿನ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿಕೂಡ ಕೂದಲುಬೆಳೆದಿದ್ದು ಮಗುವಿಗೆ ಈಗ ಶಾಲಿಮಾರ್ ಬಾಘ್ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಿಕೋಶಿಯಸ್ ಅಥವಾ ಅರ್ಲಿ ಪ್ಯೂಬರ್ಟಿ ಎಂಬಅಪರೂಪದ ವೈದ್ಯಕೀಯ ಸಮಸ್ಯೆಯಿಂದ ಮಗು ಬಳಲುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಈ ಮಗುವಿನ ಜನನೇಂದ್ರಿಯಗಳು ಕೂಡ ಪೂರ್ಣ ಪ್ರಮಾಣದಲ್ಲಿ ಬೆಳೆದಿವೆ.

ಈ ಮಗು ಆರು ತಿಂಗಳಿರುವಾಗಲೇ ಆತನ ದೇಹದಲ್ಲಿ ಸಾಕಷ್ಟು ಬದಲವಣೆಗಳು ಗೋಚರಿಸಿತ್ತಲ್ಲದೆ ಆತ ತನ್ನ ವಯಸ್ಸಿನ ಇತರ ಮಕ್ಕಳಿಗಿಂತ ಸಾಕಷ್ಟು ಎತ್ತರವಿದ್ದ ಹಾಗೂ ಜನನಾಂಗಗಳ ಗಾತ್ರವೂ ದೊಡ್ಡದಾಗಿತ್ತು. ಆರಂಭದಲ್ಲಿ ಮಗುವಿನ ಹೆತ್ತವರಿಗೆತಮ್ಮ ಮಗು ಸಾಮಾನ್ಯವಿಲ್ಲವೆಂಬ ಅರಿವಿರಲಿಲ್ಲವಾದರೂ ಆತ ಇತರ ಶಿಶುಗಳಿಗಿಂತ ಸುಮಾರು 10ರಿಂದ 15 ಸೆ.ಮೀ. ಉದ್ದವಿದ್ದ. ಹಿಂದೂಸ್ಥಾನ್ ಟೈಮ್ಸ್ ವರದಿಯೊಂದರ ಪ್ರಕಾರ ಈ ಮಗುವಿನಲ್ಲಿ ಲೈಂಗಿಕ ಬಯಕೆಗಳ ಲಕ್ಷಣವೂ ಕಾಣಿಸುತ್ತಿದೆ.
ಇಂತಹ ಒಂದು ಸಮಸ್ಯೆ ಪ್ರತಿ 5000 ಮಕ್ಕಳಲ್ಲಿ ಒಂದು ಮಗುವಿಗೆ ಹತ್ತು ವರ್ಷ ವಯಸ್ಸಿನ ಮೊದಲು ಕಾಣಿಸಬಹುದಾಗಿದೆ. ಆದರೆ ದೆಹಲಿಯ ಈ ಒಂದು ವರ್ಷದ ಮಗುವಿನ ಸಮಸ್ಯೆ ಹುಟ್ಟುವ ಪ್ರತಿ 1 ಲಕ್ಷ ಶಿಶುಗಳಲ್ಲಿ ಕಾಣಿಸಬಹುದಾಗಿದೆ. ಈ ಮಗುವಿನ ದೇಹದಲ್ಲಿ ಹಾರ್ಮೋನುಗಳು ಹೆಚ್ಚಾಗಲು ಯಾವುದೇ ನಿರ್ದಿಷ್ಟ ಕಾರಣಗಳು ಗೋಚರಿಸುತ್ತಿಲ್ಲವಾಗಿದ್ದು ಈಗ ದೇಹದಲ್ಲಿ ಹೆಚ್ಚುತ್ತಿರುವ ಹಾರ್ಮೋನುಗಳನ್ನು ನಿಯಂತ್ರಿಸಲುಬೇರೊಂದು ಹಾರ್ಮೋನ್ ಥೆರಪಿ ಆತನಿಗೆ ನೀಡಲಾಗುತ್ತಿದೆ.

ಇಂತಹ ಸಮಸ್ಯೆಗೆ ಚಿಕಿತ್ಸೆ ನೀಡದಿದ್ದಲ್ಲಿ ಮಕ್ಕಳಲ್ಲಿ ಮಾನಸಿಕ ತೊಂದರೆಗಳು ಕಾಣಿಸಿಕೊಳ್ಳಬಹುದು ಹಾಗೂ ಅವರು ಹಿಂಸಾತ್ಮಕವಾಗಿ ವರ್ತಿಸಬಹುದೆಂದು ತಜ್ಞರು ಹೇಳುತ್ತಾರೆ. ದೆಹಲಿಯ ಈ ಮಗು ಅದೆಷ್ಟು ಬಲಶಾಲಿಯಾಗಿದ್ದಾನೆಂದರೆ ಕೆಲವೊಮ್ಮೆ ಆತನನ್ನು ನಿಯಂತ್ರಿಸಲು ಆತನ ಹೆತ್ತವರಿಗೂ ಕಷ್ಟವಾಗಿತ್ತು.

ಈ ಮಗುವಿನ ಚಿಕಿತ್ಸೆಗೆ ಆತನ ಹೆತ್ತವರು ತಿಂಗಳಿಗೆ ರೂ 11,000 ವ್ಯಯಿಸಬೇಕಾಗಿದೆ. ಆರೋಗ್ಯ ವಿಮಾ ಪಾಲಿಸಿಯಿದ್ದರೂ ಇದು ಜೀವಕ್ಕೆ ಅಪಾಯ ತರುವಂತಹ ಸಮಸ್ಯೆಯಲ್ಲವೆಂದುಕಂಪೆನಿ ಪರಿಹಾರ ನೀಡಲು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News