ಬಾಲ್ಯವಿವಾಹ : ಮುಸ್ಲಿಮರಿಗಿಂತ ಹಿಂದುಗಳಲ್ಲಿ ಹೆಚ್ಚು

Update: 2016-05-31 09:33 GMT

ಹೊಸದಿಲ್ಲಿ, ಮೇ 31: 2011ರ ಜನಸಂಖ್ಯೆ ಆಧರಿತ ವರದಿಯಂತೆ ಭಾರತದ ಪ್ರತೀ ಮೂವರು ವಿವಾಹಿತ ಮಹಿಳೆಯರಲ್ಲಿ ಒಬ್ಬಳ ಮದುವೆ ಹದಿನೆಂಟು ವರ್ಷಕ್ಕಿಂತ ಮೊದಲೇ ನಡೆದಿದೆ. 78.5 ಲಕ್ಷ ಮಂದಿಗೆ ಹತ್ತು ವರ್ಷದ ಬಾಲಕಿಯರಿರುವಾಗ ವಿವಾಹ ನಡೆದಿತ್ತು. ಶೇ.91ರಷ್ಟು ಮಂದಿ ಮಹಿಳೆಯರು 25ವರ್ಷಕ್ಕಿಂತ ಮೊದಲೇ ಮದುವೆಯಾಗಿದ್ದಾರೆ. ಇನ್ನೂ ಅಚ್ಚರಿಯೆಂದರೆೆ ಬಾಲ್ಯ ವಿವಾಹ ಮುಸ್ಲಿಮರಿಗಿಂತ ಹೆಚ್ಚು ಹಿಂದೂ ಧರ್ಮೀಯರಲ್ಲಿ ನಡೆದಿದೆ ಎಂದು ಜನಸತ್ತಾ ವರದಿಮಾಡಿದೆ.

   ಭಾರತದಲ್ಲಿ ಮದುವೆಯ ಕಾನೂನು ಬದ್ಧ ವಯಸ್ಸು ಹುಡುಗಿಗೆ ಹದಿನೆಂಟು ವರ್ಷ ಮತ್ತು ಹುಡುಗನಿಗೆ 21ವರ್ಷವಾಗಿದ್ದರೂ ಅಂಕಿ ಅಂಶಗಳ ಪ್ರಕಾರ ಶೇ.30.2ರಷ್ಟು ಮಹಿಳೆಯರಿಗೆ ಹದಿನೆಂಟು ವರ್ಷ ವಯಸ್ಸಿಗಿಂತ ಮೊದಲೇ ಮದುವೆ ಆಗಿದೆ. ಆದರೆ ಈ ಸಂಖ್ಯೆ 2001ರಲ್ಲಿ ಶೇ. 43.1ರಷ್ಟಿತ್ತು. ಅಂದರೆ ಕಳೆದ ದಶಕದಲ್ಲಿ ಎಳೆಪ್ರಾಯದವರ ಮದುವೆ ಶೇ. 12.9ರಷ್ಟು ಹೆಚ್ಚಿತ್ತು.

ಬಾಲ್ಯವಿವಾಹವು ಎಲ್ಲ ಸಮುದಾಯಗಳಲ್ಲಿಯೂ ಆಚರಣೆಯಲ್ಲಿವೆ. ಅಂಕಿಅಂಶಗಳ ಪ್ರಕಾರ ಹಿಂದೂಗಳಲ್ಲಿ ಶೇ. 31.2ರಷ್ಟು ಮಂದಿಗೆ ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗಿದ್ದರೆ ಮುಸ್ಲಿಮರಲ್ಲಿ ಶೆ. 30.6ರಷ್ಟು ಮಂದಿಗೆ ಇಂತಹ ವಿವಾಹ ನಡೆದಿದೆ. ಅಂದರೆ ಮುಸ್ಲಿಮರಿಗಿಂತ ಶೇ.0.6ರಷ್ಟು ಹೆಚ್ಚು ಹಿಂದೂಗಳಲ್ಲಿ ಇಂತಹ ವಿವಾಹ ನಡೆದಿದೆ

 ಕ್ರೈಸ್ತರಲ್ಲಿ ಶೇ.12ರಷ್ಟು ಮಹಿಳೆಯರಿಗೆ ಹದಿನೆಂಟು ವರ್ಷಕ್ಕಿಂತ ಮೊದಲು ವಿವಾಹವಾಗಿದೆ. 2001ರಲ್ಲಿ ಈ ಪ್ರಮಾಣ ಶೇ.16.ರಷ್ಟು ಇತ್ತು. ಬೌದ್ಧ ಧರ್ಮೀಯರಲ್ಲಿ ಶೆ. 27.8 ಮತ್ತು ಜೈನಧರ್ಮದಲ್ಲಿ ಶೇ.16.2ರಷ್ಟು ಇಂತಹ ವಿವಾಹಗಳು ನಡೆದಿವೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News