ಆಪರೇಶನ್ ಬ್ಲೂಸ್ಟಾರ್ ವಾರ್ಷಿಕ ದಿನ ಮಾಧ್ಯಮಗಳಿಗೆ ನಿಷೇಧವಿಲ್ಲ: ಎಸ್‌ಜಿಪಿಸಿ

Update: 2016-06-05 18:34 GMT

ಅಮೃತಸರ, ಜೂ.5: ಆಪರೇಶನ್ ಬ್ಲೂಸ್ಟಾರ್‌ನ 32ನೆ ವರ್ಷಾಚರಣೆಯು ಜೂ.6ರಂದು ಇಲ್ಲಿನ ಸ್ವರ್ಣ ದೇಗುಲದಲ್ಲಿ ನಡೆಯಲಿದೆ. ಆದರೆ, ಕಾರ್ಯಕ್ರಮ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ನಿಷೇಧ ವಿಸಲಾಗಿದೆಯೆಂಬ ವರದಿಗಳನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯು (ಎಸ್‌ಜಿಪಿಸಿ) ಇಂದು ತಳ್ಳಿ ಹಾಕಿದೆ.
ಮಾಧ್ಯಮಗಳಿಗೆ ಯಾವುದೇ ನಿಷೇಧವಿಲ್ಲ. ಕಾರ್ಯಕ್ರಮಗಳ ವರದಿಗಾರಿಕೆ ಹಾಗೂ ಚಿತ್ರೀಕರಣಕ್ಕೆ ಅವು ಮುಕ್ತವಾಗಿವೆಯೆಂದು ಎಸ್‌ಜಿಪಿಸಿ ಅಧ್ಯಕ್ಷ ಅವತಾರ್ ಸಿಂಗ್ ಮಕ್ಕರ್ ತಿಳಿಸಿದ್ದಾರೆ. ಆದಾಗ್ಯೂ, ಮಾಧ್ಯಮದ ಮಂದಿ ತಮ್ಮ ಕೆಲಸವನ್ನು ಶಿಸ್ತು ಬದ್ಧವಾಗಿ ಮಾಡಬೇಕೆಂಬುದು ತಮ್ಮ ನಿರೀಕ್ಷೆಯಾಗಿದೆಯೆಂದು ಅವರು ಹೇಳಿದ್ದಾರೆ.ಸ್‌ಜಿಪಿಸಿ ಮುಖ್ಯಕಾರ್ಯದರ್ಶಿ ಹರ್ಚರಣ್ ಸಿಂಗ್ ನಿಷೇಧಾಜ್ಞೆ ನೀಡಿದ್ದರೆಂದು ವರದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News