2019ರ ವೇಳೆಗೆ ಎಲ್ಲ ರೈಲುಗಳಲ್ಲಿ ಜೈವಿಕ ಶೌಚಾಲಯಗಳು:ಮಿತ್ತಲ್

Update: 2016-06-06 17:06 GMT

ಹೊಸದಿಲ್ಲಿ,ಜೂ.6: ಪರಿಸರವನ್ನು ಉತ್ತಮವಾಗಿಸುವ ತನ್ನ ಪ್ರಯತ್ನಗಳಿಗೆ ಹೆಚ್ಚಿನ ಒತ್ತು ನೀಡಿರುವ ಭಾರತೀಯ ರೈಲ್ವೆಯು 2019ರ ವೇಳೆಗೆ ಎಲ್ಲ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸಲಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಎ.ಕೆ.ಮಿತ್ತಲ್ ಅವರು ಸೋಮವಾರ ಇಲ್ಲಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2021ರ ವೇಳೆಗೆ ಎಲ್ಲ ಬೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸುವ ಗುರಿಯನ್ನು ಹೊಂದಲಾಗಿತ್ತಾದರೂ ಈಗ ಆ ಗಡುವನ್ನು 2019ಕ್ಕೆ ಹಿಂದೂಡಿದ್ದೇವೆ ಎಂದು ತಿಳಿಸಿದರು.

ಕ್ರಿಯಾ ಯೋಜನೆಯಂತೆ ರೈಲ್ವೆಯು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 55,000 ಬೋಗಿಗಳಲ್ಲಿ 1.40 ಲಕ್ಷ ಜೈವಿಕ ಶೌಚಾಲಯಗಳನ್ನು ಅಳವಡಿಸಲಿದೆ. ಈ ವರೆಗೆ ಅದು ಸುಮಾರು 37,000 ಜೈವಿಕ ಶೌಚಾಲಯಗಳ ಅಳವಡಿಕೆಯನ್ನು ಪೂರ್ಣಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News