ಒಂದು ದನದ 150 ಕೇಜಿ ಮಾಂಸವನ್ನು ಅಖ್ಲಾಕ್ ಜೊತೆ ಹಂಚಿಕೊಂಡಿದ್ದು ಯಾರು ಎಂದು ತನಿಖೆಯಾಗಲಿ !

Update: 2016-06-07 06:21 GMT

ಹೊಸದಿಲ್ಲಿ, ಜೂ 7 : ದಾದ್ರಿಯ ಬಿಸಾಡ ಗ್ರಾಮದಲ್ಲಿ ಮೊಹಮ್ಮದ್ ಅಖ್ಲಾಕ್ ಅವರ ಮನೆಯ ಹೊರಗೆ ಸಿಕ್ಕಿದೆ ಎನ್ನಲಾದ ಬೀಫ್ ಕುರಿತು ತನಿಖೆ ನಡೆಯಬೇಕೆಂದು ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಆಗ್ರಹಿಸಿದ್ದಾರೆ. ಅವರ ಪ್ರಕಾರ ಈ ಬೀಫ್ ಅನ್ನು ಇನ್ನೂ ಯಾರೆಲ್ಲಾ ತಿಂದಿದ್ದಾರೆ ಎಂದು ತನಿಖೆ ನಡೆಯಬೇಕಾಗಿದೆ. 

"ಈಗ ಅಖ್ಲಾಕ್ ಅವರ ಮನೆಯಲ್ಲಿ ಸಿಕ್ಕಿದ್ದು ಬೀಫ್ ಎಂದು ಫೋರೆನ್ಸಿಕ್ ವರದಿಯ ಮೂಲಕ ಸಾಬೀತಾಗಿದೆ. ಒಂದು ದನ 150 ಕೆಜಿಗಿಂತ ಹೆಚ್ಚು ತೂಕ ಇರುತ್ತದೆ. ಅದರ ಮಾಂಸ ಒಬ್ಬನೇ ತಿನ್ನಲು ಸಾಧ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧವಿದೆ. ಹಾಗಾಗಿ ಈ ಮಾಂಸವನ್ನು ಯಾರು ಯಾರೆಲ್ಲಾ ತಿಂದಿದ್ದಾರೆ ಎಂದು ತನಿಖೆಯ ಮೂಲಕ ಬಹಿರಂಗವಾಗಬೇಕಿದೆ " ಎಂದು ಸಂಜೀವ್ ಹೇಳಿದ್ದಾರೆ. 

ಈ ಹಿಂದೆ ಅಖ್ಲಾಕ್ ಕುಟುಂಬದ ವಿರುದ್ಧ ವಿಚಾರಣೆ ನಡೆಯಬೇಕು ಹಾಗು ಅವರೇ ಪರಿಹಾರ ನೀಡಬೇಕು ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹಾಗು ಶಾಸಕ ಸಂಗೀತ್ ಸೋಮ್ ಅವರು ಹೇಳಿದ್ದರು. ಆದರೆ ಬಿಜೆಪಿಯ ವರಿಷ್ಟರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News