ಕೇರಳ: ಕೊನೆಗೂ ಕೊಂಡೋಟ್ಟಿ ಶಾಲೆಗೆ ಬೀಗ ಬಿತ್ತು!

Update: 2016-06-07 07:01 GMT

ಕೊಂಡೋಟ್ಟಿ, ಜೂನ್ 7: ಮಲಪ್ಪುರಂ ಜಿಲ್ಲೆಯ ಕೊಂಡೋಟ್ಟಿ ಮಂಙಾಟ್ಟುಮುರಿ ಎ.ಎಂ.ಎ.ಪಿ ಶಾಲೆಯನ್ನು ಮುಚ್ಚಲಾಯಿತು. ಬೆಳಗ್ಗೆ ಏಳೂವರೆಗಂಟೆಗೆ ಶಾಲೆಗೆ ಬಂದ ಕೊಂಡೋಟ್ಟಿ ಎಇಒ ಆಶಿಷ್ ಪುಲಿಕ್ಕಲ್‌ರ ನೇತೃತ್ವದಲ್ಲಿ ಶಾಲೆಗೆ ಬೀಗ ಹಾಕಲಾಗಿದೆ. ಪ್ರಧಾನ ಕಚೇರಿಯ ಬೀಗ ಮುರಿದು ಒಳಗೆ ಬಂದ ಅಧಿಕಾರಿಗಳು ದಾಖಲೆಗಳನ್ನು ಪಡೆದುಕೊಂಡ ಬಳಿಕ ಬಾಗಿಲು ಮುಚ್ಚಿ ಎಒಒ ಸೀಲು ಹಾಕಿದರು. ಹೈಕೋರ್ಟ್ ನಿರ್ದೇಶದಂತೆ ಶಿಕ್ಷಣ ಇಲಾಖೆ ಶಾಲೆಯನ್ನು ಮುಚ್ಚುವ ಕ್ರಮ ಜಾರಿಗೊಳಿಸಿದೆ.

ಶಾಲೆ ಮುಚ್ಚದಂತೆ ಊರಿನವರು ಹಾಗೂ ಎಸ್‌ಎಫ್‌ಐ ಕಾರ್ಯಕರ್ತರು ಪ್ರಯತ್ನಿಸಿದ್ದರು. ಆದ್ದರಿಂದ ಘರ್ಷಣೆಗೂ ಕಾರಣವಾಗಿತ್ತು. ಪ್ರತಿಭಟನಾಕಾರರನ್ನು ಸ್ಥಳದಲ್ಲಿದ್ದ ಪೊಲೀಸರು ದೂರ ಸರಿಸಿದರು. ಕಳೆದ ಮೇ 29ಕ್ಕೆ ಶಾಲೆಮುಚ್ಚಲು ಎಇಒ ಬಂದಿದ್ದರು. ಊರಿನವರು ಪಿಡಿಎ ಅಧ್ಯಾಪಕ ಸಂಘಟನೆಗಳು ನಡೆಸಿದ ಪ್ರತಿಭಟನೆಯಿಂದಾಗಿ ಕೋರ್ಟ್ ಆದೇಶವನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ.

ಹೊಸದಾಗಿ ಪ್ರವೇಶಾತಿ ಪಡೆದ 19 ಮಕ್ಕಳ ಸಹಿತ 66 ಮಕ್ಕಳು ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಇದನ್ನು 1930ರಲ್ಲಿ ಆರಂಭಸಲಾಗಿತ್ತು. ಶಾಲೆ ಲಾಭಕರವಲ್ಲ ಎಂದು ಹೇಳಿ ಶಾಲೆಯ ಮ್ಯಾನೇಜರ್ 2009ರಲ್ಲಿ ಶಾಲೆ ಮುಚ್ಚಲು ಕೋರ್ಟಿಗೆ ಹೋಗಿದ್ದರು. 2011ರಲ್ಲಿ ಮ್ಯಾನೇಜರ್‌ರಿಗೆ ಅನುಕೂಲಕರವಾಗಿ ತೀರ್ಪು ಬಂದಿತ್ತು. ಮೇಲ್ಕೋರ್ಟು ಸ್ಟೇ ವಿಧಿಸಿತ್ತು. ಮ್ಯಾನೇಜರ್ ಹೈಕೋರ್ಟ್‌ಗೆ ಹೋದ ಹಿನ್ನೆಲೆಯಲ್ಲಿ ಹೈಕೋರ್ಟ್ ಶಾಲೆಯನ್ನು ಮುಚ್ಚಬೇಕೆಂದು ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News