ಜಿಶಾ ಕೊಲೆ ಪ್ರಕರಣ: ಕಾಂಗ್ರೆಸ್ ನಾಯಕನ ಪಿ.ಎ.ಯನ್ನು ಪ್ರಶ್ನಿಸಿದ ಪೊಲೀಸರು!

Update: 2016-06-09 04:53 GMT

ಪೆರುಂಬಾವೂರ್, ಜೂನ್ 9: ಜಿಶಾ ಕೊಲೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕನ ಪಾತ್ರವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಅವರ ಪಿಎಯನ್ನು ಪೊಲೀಸ್ ತನಿಖಾ ತಂಡ ಪ್ರಶ್ನಿಸಿದೆ. ಆದರೆ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದ ಸೂಕ್ತ ಮಾಹಿತಿ ಲಭಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  ಸಾರ್ವಜನಿಕ ಕಾರ್ಯಕರ್ತ ಜೋಮೋನ್ ಪುತ್ತನ್‌ಪುರಕ್ಕಲ್ ನೀಡಿದ ದೂರನ್ನು ಪರಿಗಣಿಸಿ ಜಿಶಾ ಕೊಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಾತ್ರವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಅಂಗವಾಗಿ ಕಾಂಗ್ರೆಸ್ ನಾಯಕನ ಪಿಎಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಜಿಶಾ ಹಿರಿಯ ಕಾಂಗ್ರೆಸ್ ನಾಯಕನ ಪುತ್ರಿಯಾಗಿದ್ದು ಕೊಲೆ ಪ್ರಕರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕನ ಪಾತ್ರ ಇದೆ ಎಂದು ಜೋಮೋನ್ ಆರೋಪಿಸಿದ್ದರು. ಈ ತನ್ಮಧ್ಯೆ ಜಿಶಾರ ತಂದೆ ತನ್ನ ಹಾಗೂ ಮಗಳ ಕುರಿತು ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News