ಸಾಧ್ವಿಯ ಹೇಳಿಕೆಗೆ ಜಮ್ಮುಕಾಶ್ಮೀರ ವಿಧಾನಸಭೆಯಲ್ಲಿ ಗದ್ದಲ!

Update: 2016-06-09 10:13 GMT

ಶ್ರೀನಗರ್, ಜೂನ್ 9: ಸಾಧ್ವಿ ಪ್ರಾಚಿಯ ವಿವಾದಿತ ಹೇಳಿಕೆಯಿಂದಾಗಿ ಜಮ್ಮು ಕಾಶ್ಮೀರದ ವಿಧಾನಸಭೆಯಲ್ಲಿ ಗದ್ದಲ ನಡೆಯಿತು. ಭಾರತದಿಂದ ಕಾಂಗ್ರೆಸ್ ಮುಕ್ತಗೊಳಿಸುವ ಉದ್ದೇಶ ಈಡೇರಿದೆ. ಇನ್ನು ಮುಸ್ಲಿಮ್ ಮುಕ್ತಗೊಳಿಸುವ ಸಮಯವಾಗಿದೆ ಎಂದು ಸಾಧ್ವಿಪ್ರಾಚಿ ಹೇಳಿದ್ದಾರೆ. ಉತ್ತರಖಂಡದ ರೂರ್ಕಿಯಲ್ಲಿ ಕಳೆದ ದಿವಸ ಎರಡು ಕಡೆಯವರೊಳಗೆ ಜಗಳ ನಡೆದಿತ್ತು. ಅಲ್ಲಿಗೆ ಹೋಗಿ ಅಲ್ಪಸಂಖ್ಯಾತ ವಿಭಾಗಗಳ ವಿರುದ್ಧ ಪ್ರಾಚೀನ ಕೋಮುದ್ವೇಷದ ಭಾಷಣವನ್ನು ಮಾಡಿದ್ದರು. ಪ್ರತಿಪಕ್ಷವಾದ ನ್ಯಾಶನಲ್ ಕಾನ್ಫ್ರೆನ್ಸ್ ಸದಸ್ಯ ಶಹನಾಝ್ ಗನಾಯ್ ಘಟನೆಯನ್ನು ಖಂಡಿಸಲು ಸ್ಪೀಕರ್‌ರನ್ನು ವಿನಂತಿಸಿದರು.

ಮುಸ್ಲಿಮರು ಭಾರತದ ಭಾಗವಾಗಿದ್ದಾರೆ, ಮುಸ್ಲಿಮರನ್ನು ದೂರವಿಟ್ಟರೆ ಭಾರತ ಯಾವತ್ತೂ ಪರಿಪೂರ್ಣವಾಗುವುದಿಲ್ಲ ಎಂದು ಶಿಕ್ಷಣ ಸಚಿವ ನಯೀಂ ಅಕ್ತರ್ ಹೇಳಿದರು. ದೇಶದಲ್ಲಿ ವಾಸಿಸಲು ಎಲ್ಲರಿಗೂ ಸಮಾನ ಹಕ್ಕು ಇದೆ. ಇಂತಹ ಹೇಳಿಕೆಗಳು ದೇಶದಲ್ಲಿ ಗಲಭೆಗೆಮಾತ್ರ ಸಹಾಯಕ ಎಂದು ಅವರು ಸ್ಪಷ್ಟ ಪಡಿಸಿದರು. ಈ ಹಿಂದೆ ಸಾಧ್ವಿ ಪ್ರಾಚಿ, ದೇಶದಲ್ಲಿ ಅಸಹಿಷ್ಣುತೆ ಇದೆ ಎಂದ ಶಾರೂಕ್ ಖಾನ್‌ರನ್ನು ಪಾಕ್ ಏಜೆಂಟ್ ಎಂದು ಕರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News