ಸರಕಾರ ಕೇಳಿದರೆ ರಾಜಿನಾಮೆ: ಅಂಜು ಬಾಬಿ ಜಾರ್ಜ್

Update: 2016-06-10 08:56 GMT

  ತಿರುವನಂತಪುರಂ,ಜೂನ್ 10: ಕ್ರೀಡಾಸಚಿವ ಇ.ಪಿ.ಜಯರಾಜ್ ಮತ್ತು ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ಅಧ್ಯಕ್ಷೆ ಅಂಜು ಬಾಬಿ ಜಾರ್ಜ್ ನಡುವೆ ಜಗಳಕ್ಕೆ ಅನಧಿಕೃತ ನೇಮಕಾತಿ ಹಾಗೂ ವಿಮಾನ ಟಿಕೆಟ್‌ನ ಕುರಿತ ವಿವಾದ ಕಾರಣವಾಗಿದೆ. ಅಂಜು ಸಹೋದರ ಅಜಿತ್ ಮಾರ್ಕೋಸ್‌ರಿಗೆ ಕೆಲಸ ನೀಡಿದ್ದು ಮತ್ತು ಬೆಂಗಳೂರಿನಲ್ಲಿ ಖಾಯಂ ವಾಸಿಯಾಗಿರುವ ಅಂಜುಗೆ ತಿರುವನಂತಪುರಂಗೆ ಬರಲು ವಿಮಾನ ಟಿಕೆಟ್‌ಗೆ ಹಣಬಳಕೆ ಸಚಿವರನ್ನು ಕೋಪಿಸಿತ್ತು. ಸಚಿವರಿಗೆ ವಿಶ್ವಾಸ ಇಲ್ಲದಿದ್ದರೆ ಅಧಿಕಾರಕ್ಕೆ ನೇತು ಬೀಳಲುತಾನು ಸಿದ್ಧಳಿಲ್ಲ ಸರಕಾರ ರಾಜಿನಾಮೆ ಕೇಳಿದರೆ ರಾಜಿನಾಮೆ ನೀಡುವೆ ಎಂದು ಅಂಜು ಪತ್ರಿಕೆಗೆ ತಿಳಿಸಿದ್ದಾರೆ. ಕಳೆದ ಜೂನ್ ಆರರಿಂದ ವಾಗ್ವಾದ ಆರಂಭವಾಗಿತ್ತು.

  ಅಂಜು ಹಾಗೂ ಉಪಾಧ್ಯಕ್ಷ ಟಿ.ಕೆ. ಇಬ್ರಾಹೀಂ ಕುಟ್ಟಿ ಸಚಿವರ ಕಚೇರಿಗೆ ಹೋಗಿದ್ದರು. ಇಬ್ಬರಿಂದ ಅಭಿನಂದನೆ ಸ್ವೀಕರಿಸಿದ ಸಚಿವರು ಅಂಜುವಿನ ಮುಂದಿದ್ದ ಇಬ್ರಾಹೀಂ ಕುಟ್ಟಿಯನ್ನು ಅಜಿತ್‌ನ ನೇಮಕಾತಿ ನಡೆಸಿದ್ದಕ್ಕಾಗಿ ಜರೆದಿದ್ದರು. ಹಿಂದಿನ  ಸರಕಾರದ ಕೊನೆಯ ಅವಧಿಯಲ್ಲಿ ಕ್ರೀಡಾ ತಾರೆ ಸಿನಿಮೋಳ್ ಪೌಲೋಸ್‌ನ ಗಂಡ ಕೂಡಾ ಆಗಿರುವ ಅಜಿತ್ ಮಾರ್ಕೋಸ್‌ರಿಗೆ ಸಹಾಯಕ ಕಾರ್ಯದರ್ಶಿ (ಟೆಕ್ನಿಕಲ್) ಹುದ್ದೆ ಅನುಮತಿಸಲಾಗಿತ್ತು, ಈ ಕೆಲಸಕ್ಕೆ ತಿಂಗಳಿಗೆ 80,000 ರೂಪಾಯಿ ಸಂಬಳವಿದೆ. ಅಜಿತ್ ಮಾರ್ಕೋಸ್ ಒಂದುವರ್ಷ ಮೊದಲೇ ಈ ಕೆಲಸಕ್ಕೆ ಅರ್ಜಿ ಹಾಕಿದ್ದರೂ ಅಂದಿನ ಅಧ್ಯಕ್ಷೆ ಪದ್ಮಿನಿ ಥಾಮಸ್ ಅಂತಹ ವಿದ್ಯಾರ್ಹತೆಯಿಲ್ಲ ಎಂದು ಮನಗಂಡು ಅಜಿತ್ ಫೈಲನ್ನು ಮರಳಿಸಿದ್ದರು.

  ಆದರೆ ಅಂಜು ಅಧ್ಯಕ್ಷೆಯಾದ ಬಳಿಕ ಸಹೋದರನ್ನು ಕೌನ್ಸಿಲ್‌ಗೆ ಕರೆದಿದ್ದರು. "ನೀವು ಕೆಲವರು ಸೇರಿ ಅಂಜುವಿನ ಹೆಸರಿಗೆ ಕಳಂಕತರುತ್ತಿದ್ದೀರಾ? ನಾವು ಅಧಿಕಾರಕ್ಕೆ ಬರುವುದಿಲ್ಲ ಎಂದು ಭಾವಿಸಿದ್ದಿರಾ?" ಎಂದು ಸಚಿವರು ಇಬ್ರಾಹೀಂಕುಟ್ಟಿಯನ್ನು ಪ್ರಶ್ನಿಸಿದ್ದರು. ನಂತರ ಅಂಜುವಿಗೆ ವಿಮಾನ ಪ್ರಯಾಣಕ್ಕೆ ಅನುಮತಿಸಲಾದ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಂಜುವಿಗೆ ಒಂದು ಬಾರಿ ತಿರುವನಂತಪುರಂಗೆ ಬಂದು ಹೋಗುವುದಕ್ಕಾಗಿ 40,000 ರೂಪಾಯಿ ಅನುಮತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News