ಪಾಕಿಸ್ತಾನಿಗಳಿಂದ ಪೊಲೀಸ್ ವೆಬ್‌ಹ್ಯಾಕ್?

Update: 2016-06-10 14:52 GMT

ಬೆಂಗಳೂರು, ಜೂ.10: ಪಾಕಿಸ್ತಾನದ ಹ್ಯಾಕರ್ಸ್‌ಗಳು ಕರ್ನಾಟಕದ ಪೊಲೀಸ್ ವೆಬ್‌ಸೈಟ್ ಹ್ಯಾಕ್ ಮಾಡಿ ಪಾಕ್ ಧ್ವಜವನ್ನು ಪೋಸ್ಟ್ ಮಾಡಿದ್ದಾರೆ ಎಂದು ಗೊತ್ತಾಗಿದೆ.ಶುಕ್ರವಾರ ಬೆಳಗ್ಗೆ ಕರ್ನಾಟಕ ಪೊಲೀಸ್ ವೆಬ್‌ಸೈಟ್ www.ksp.gov.inನ್ನು ಹ್ಯಾಕ್ ಮಾಡಿ ಪಾಕ್ ಧ್ವಜ ಹಾರಿಸಿರುವ ಹ್ಯಾಕರ್ಸ್‌ಗಳು, ನಿಮ್ಮ ಸೈಬರ್ ಸೆಕ್ಯುರಿಟಿಗೆ ನಾಚಿಕೆಯಾಗಬೇಕು. ನಾವು ಪಾಕಿಸ್ತಾನದ ಸೈಬರ್ ದಾಳಿಕೋರರು. ಪಾಕಿಸ್ತಾನ ಜಿಂದಾಬಾದ್ ಎನ್ನುವ ಸಂದೇಶಗಳನ್ನು ಇಂಗ್ಲಿಷ್‌ನಲ್ಲಿ ಹಾಕಿದ್ದಾರೆ ಎಂದು ತಿಳಿದುಬಂದಿದೆ.ಈ ಬಗೆ ಇನ್ನು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದೀಗ ವೆಬ್ಸೈಟ್ ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿದ್ದು, ಅಧಿಕಾರಿಗಳಿಂದ ಮಾಹಿತಿ ಪಡೆದು ಸೈಬರ್ ಕ್ರೈಂ ಅಧಿಕಾರಿಗಳಿಂದ ತನಿಖೆ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News