ದಾಬೋಲ್ಕರ್‌ ಹತ್ಯಾ ಪ್ರಕರಣ; ಹಿಂದೂ ಜನಜಾಗೃತಿ ಸಮಿತಿಯ ವೈದ್ಯನ ಸೆರೆ

Update: 2016-06-11 08:40 GMT
ದಾಬೋಲ್ಕರ್‌ 


ಮುಂಬೈ, ಜೂ.11: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ   ಸಿಬಿಐ ಶುಕ್ರವಾರ ರಾತ್ರಿ ಜನಜಾಗೃತಿ ಸಮಿತಿಯ ಸದಸ್ಯ ಹಾಗೂ ಸನಾನತನ ಸಂಸ್ಥೆಯ  ಡಾ. ವೀರೇಂದ್ರ ತಾವ್ಡೆ (48)ಎಂಬವರನ್ನು ಬಂಧಿಸಿದೆ.

ಮುಂಬೈ ನ ಪಾನ್ ವೆಲ್ನಲ್ಲಿ ಆರೋಪಿ ತಾವ್ಡೆಯನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಸಂಜೆ ಬಂಧಿಸಿದ್ದಾರೆ,
 ದಾಬೋಲ್ಕರ್ ಅವರನ್ನು 2013ರ ಅಗಸ್ಟ್ 20ರಂದು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಕೊಲೆಗೈದಿದ್ದರು. ಬಾಂಬೆ ಹೈಕೋರ್ಟ್ ಆದೇಶದಂತೆ ಸಿಬಿಐ ಈ ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು. 

ವೃತ್ತಿಯಲ್ಲಿ ಇಎನ್ಟಿ ವೈದ್ಯರಾಗಿರುವ ತಾವ್ಡೆ ಪ್ರಕರಣದ ಪ್ರಮುಖ  ಆರೋಪಿ ಎಂದು ತಿಳಿದು ಬಂದಿದೆ. ಈತನ ಬಂಧನಕ್ಕೆ ಪೊಲೀಸರು ಕಳೆದ ಕೆಲವು ದಿನಗಬಲೆ ಬೀಸಿದ್ದರು. 

ತಾವ್ಡೆ , ಸಾರಂಗ್ ಅಕೋಲ್ಕರ್ ಮತ್ತು ಇನ್ನೊಬ್ಬ ಸನಾತನ ಸಂಸ್ಥೆಯ ಸದಸ್ಯ ಈ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News