ಶಿಕ್ಷಕರಿಗೆ ಜೀನ್ಸ್ ನಿಷೇಧಿಸಿಲ್ಲ: ಖಟ್ಟರ್ ಸ್ಪಷ್ಟನೆ

Update: 2016-06-11 18:12 GMT

ಚಂಡೀಗಢ,ಜೂ.11: ಕರ್ತವ್ಯದಲ್ಲಿರುವಾಗ ಜೀನ್ಸ್ ಧರಿಸಬಾರದೆಂಬ ತನ್ನ ಸರಕಾರವು ಆದೇಶವೊಂದನ್ನು ಜಾರಿಗೊಳಿಸಿದೆಯೆಂಬ ವರದಿಯನ್ನು ಹರ್ಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಶನಿವಾರ ನಿರಾಕರಿಸಿದ್ದಾರೆ. ‘‘ಅಂತಹ ಯಾವುದೇ ಆದೇಶವನ್ನು ತನ್ನ ಸರಕಾರ ಜಾರಿಗೊಳಿಸಿಲ್ಲ. ಒಂದು ವೇಳೆ, ಯಾರಾದರೂ ಹಾಗೇನಾದರೂ ಹೇಳಿದ್ದರೆ, ನಾವದನ್ನು ಹಿಂದೆಗೆದುಕೊಳ್ಳುತ್ತೇವೆ. ಆದರೆ ಅಂತಹ ಯಾವುದೇ ಸಂಗತಿ ನಡೆದಿಲ್ಲ’’ ಎಂದು ಖಟ್ಟರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
 ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಇತ್ತೀಚೆಗೆ ಜಾರಿಗೊಳಿಸಿದ ಆದೇಶವೊಂದರಲ್ಲಿ, ಶಿಕ್ಷಕರು ಶಾಲೆಗೆ ಅಥವಾ ಶಿಕ್ಷಣ ಇಲಾಖೆಯ ಯಾವುದೇ ಕಚೇರಿಗೆ ತೆರಳುವಾಗ ಜೀನ್ಸ್ ಧರಿಸದಂತೆ ಖಾತರಿಪಡಿಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕರ್ತವ್ಯದಲ್ಲಿರುವಾಗ ಜೀನ್ಸ್ ಧರಿಸುವುದು ಸಮಂಜಸವಲ್ಲ. ಮತ್ತು ಶಿಕ್ಷಕರು ಸಾಮಾನ್ಯವಾದ ಉಡುಪುಗಳನ್ನೇ ಧರಿಸಬೇಕು ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಾಲ್ಕು ಸಾಲಿನ ಆದೇಶದ ಪ್ರತಿಯಲ್ಲಿ ತಿಳಿಸಲಾಗಿತ್ತು. ಆದರೆ ತನ್ನ ನಿಲುವಿನ ಬಗ್ಗೆ ಅದು ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News