ಪಾಕ್ ತಾಲಿಬಾನ್ ವಿರುದ್ಧವೂ ದಾಳಿ ನಡೆಸಿ: ಅಮೆರಿಕಕ್ಕೆ ಪಾಕ್ ಸೇನಾ ಮುಖ್ಯಸ್ಥ ರಹೀಲ್ ಶರೀಫ್!

Update: 2016-06-12 05:47 GMT

ಇಸ್ಲಾಮಾಬಾದ್,ಜೂನ್ 12: ಪಾಕಿಸ್ತಾನಿ ತಾಲಿಬಾನ್‌ನ ಅಡಗುತಾಣಗಳ ಮೇಲೆ ಅವರ ನಾಯಕ ಮುಲ್ಲಾ ಫಝಲುಲ್ಲಾರನ್ನು ಗುರಿಯಾಗಿಟ್ಟು ದಾಳಿ ನಡೆಸಬೇಕೆಂದು ಪಾಕಿಸ್ತಾನಿ ಸೇನೆಯ ಮುಖ್ಯಸ್ಥ ರಹೀಲ್ ಶರೀಫ್ ಸೂಚಿಸಿದ್ದಾರೆ. ಅಫ್ಘಾನ್ ಹೊಣೆಯಿರುವ ಅಮೆರಿಕದ ಕಮಾಂಡರ್ ಜನರಲ್ ಜಾನ್ ನಿಕೋಲ್ಸನ್ ಹಾಗೂವಿಶೇಷ ಪ್ರತಿನಿಧಿ ರಿಚಾರ್ಡ್‌ಓಲ್ಸನ್ ಇವರಿದ್ದ ಉನ್ನತ ಸಮಿತಿಯನ್ನು ಭೇಟಿಯಾದ ಸಂದರ್ಭದಲ್ಲಿಅವರು ಈ ವಿಷಯವನ್ನು ತಿಳಿಸಿದ್ದಾರೆ. ಆದರೆ ಭಾರತದ ಗುಪ್ತಚರ ಇಲಾಖೆ ರಾ,ಎನ್ಡಿಎಸ್ ಮುಂತಾದುವುಗಳು ಪಾಕಿಸ್ತಾನದ ಮಣ್ಣಿನಲ್ಲಿ ಕಾರ್ಯವೆಸಗಲು ಬಿಡುವುದಿಲ್ಲ ಎಂದು ಭೇಟಿಯ ವೇಳೆ ರಹೀಲ್ ಸ್ಪಷ್ಟಪಡಿಸಿದ್ದಾರೆ.

 ಅಫ್ಘಾನ್ ತಾಲಿಬಾನ್ ನಾಯಕ ಮುಲ್ಲಾ ಮನ್ಸೂರ್‌ರನ್ನು ಅಮೆರಿಕ ಡ್ರೊನ್ ದಾಳಿಯಲ್ಲಿ ಕೊಂದು ಹಾಕಿದ ನಂತರ ಪಾಕಿಸ್ತಾನದ ಅಧಿಕೃತ ಮೂಲಗಳು ಅಮೆರಿಕದ ಉನ್ನತ ಪ್ರತಿನಿಧಿಗಳೊಂದಿಗೆ ನಡೆಸಿದ ಮೊದಲ ಸಮಾಲೋಚನೆ ಇದು. ಅಪ್ಘಾನ್ ತಾಲಿಬಾನ್ ವಿರುದ್ಧ ಅಮೆರಿಕ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನದ ಪರಮಾಧಿಕಾರವನ್ನು ಉಲ್ಲಂಘಿಸಿದ್ದು ಪಾಕ್-ಅಮೆರಿಕ ನಡುವೆ ಸಂಬಂಧದಲ್ಲಿ ಸ್ವಲ್ಪ ಬಿರುಕು ಕಾಣಿಸಿಕೊಂಡಿತ್ತು. ಇದನ್ನು ಪ್ರತಿಭಟಿಸಿ ಪಾಕಿಸ್ತಾನ ರಂಗಪ್ರವೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News