ಬಿಜೆಪಿ ಬೆಂಬಲಿತ ಝೀ ಚಾನೆಲ್ ಮಾಲಕನನ್ನು ಗೆಲ್ಲಿಸಿದ ಕಾಂಗ್ರೆಸ್ !

Update: 2016-06-13 06:45 GMT

ನವದೆಹಲಿ: ಶನಿವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹರ್ಯಾಣ ನಾಯಕರೇ ತಮ್ಮ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿ ಬೆಂಬಲಿತ ಝೀ ಚಾನೆಲ್ ಮಾಲಕನ ಗೆಲುವಿಗೆ ಕಾರಣರಾದರು. ಕಾಂಗ್ರೆಸ್ ಸದಸ್ಯರ 14 ಮತಗಳು ಅಮಾನ್ಯಗೊಂಡು ಝೀ ನ್ಯೂಸ್ ಮಾಲಕ ಸುಭಾಶ್ ಚಂದ್ರ ಗೆಲುವು ಪಡೆದರು.
ಅತ್ತ ಸುಭಾಶ್ ಚಂದ್ರ ಅವರನ್ನು ಬಿಜೆಪಿ ಬೆಂಬಲಿಸಿದ್ದರೂ ಫಲಿತಾಂಶಗಳು ಸೂಚಿಸುವಂತೆ ಅವರ ಸೋಲಿಗೆ ಬಿಜೆಪಿ ತನ್ನಿಂದಾದಷ್ಟು ಪ್ರಯತ್ನ ಮಾಡಿತ್ತು. ಆದರೆ ಮತ ಚಲಾವಣೆ ಮಾದರಿಯನ್ನು ಗಮನಿಸಿದಾಗ  ಅಂತಿಮವಾಗಿ ಝೀ ಅಧ್ಯಕ್ಷರ ವಿಜಯಕ್ಕೆ ಬಿಜೆಪಿಯ ಬದಲಾಗಿ ಕಾಂಗ್ರೆಸ್ ಕಾರಣವೆಂದು ತಿಳಿದು ಬರುತ್ತದೆ.
ಆದದ್ದಿಷ್ಟು: ಅಂತಿಮ ಫಲಿತಾಂಶ ಪ್ರಕಟಿಸಿದಾಗ ಕಾಂಗ್ರೆಸ್ ಬೆಂಬಲಿತ  ಆರ್ ಕೆ ಆನಂದ್ 21 ಮತಗಳನ್ನು ಪಡೆದಿದ್ದರೆ ಚಂದ್ರ 29 ಮತಗಳನ್ನು ಪಡೆದಿದ್ದರು.(ಬಿಜೆಪಿ ಅಭ್ಯರ್ಥಿ ವಿರೇಂದರ್ ಸಿಂಗ್ ಗೆ ದೊರೆತ 14 ಹೆಚ್ಚುವರಿ ಮತಗಳನ್ನು  ಎರಡನೇ ಪ್ರಾಶಸ್ತ್ಯದ ಮತಗಳಾಗಿ ಚಂದ್ರ ಆವರಿಗೆ ವರ್ಗಾಯಿಸಿದಾಗ)
ಮೂಲಃತ ಅಭ್ಯರ್ಥಿಗಳು ವಿಜಯಕ್ಕಾಗಿ 31 ಮತಗಳನ್ನು ಪಡೆಯಬೇಕಿದ್ದರೆ, ಕಾಂಗ್ರೆಸ್ ಪಕ್ಷದ 14 ಮತಗಳನ್ನು ಅಮಾನ್ಯಗೊಳಿಸಿದ ನಂತರ ಈ ಸಂಖ್ಯೆಯನ್ನು 26ಕ್ಕೆ ಇಳಿಸಲಾಯಿತು. 40 ಮತಗಳನ್ನು ಪಡೆದ ವಿರೇಂದರ್ ಸಿಂಗ್  ತಮ್ಮ 14 ಮತಗಳನ್ನು ಚಂದ್ರ ಅವರಿಗೆ ವರ್ಗಾಯಿಸಲು ಸಫಲರಾದರು, ವಿರೇಂದರ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದ್ದವರು ಚಂದ್ರ ಅವರಿಗೆ ದ್ವಿತೀಯ ಪ್ರಾಶಸ್ತ್ಯದ ಮತ ನೀಡಿದ್ದರು.  ಇತರ ಇಬ್ಬರು ಅಭ್ಯರ್ಥಿಗಳು ಪ್ರಥಮ ಸುತ್ತಿನಲ್ಲಿ  ತಮ್ಮ ಗುರಿಯಾದ 26 ತಲುಪಲು ವಿಫಲರಾಗಿದ್ದುದರಿಂದ  ಎಲ್ಲಾ ಹೆಚ್ಚುವರಿ ಮತಗಳು ಚಂದ್ರ ಪಾಲಿಗೆ ಬಂತು.
ವಾಸ್ತವವಾಗಿ  ವಿರೇಂದರ್ ಸಿಂಗ್ ಪರವಾಗಿ ಪ್ರಥಮ ಪ್ರಾಶಸ್ತ್ಯದ ಅಷ್ಟೂ ಮತಗಳನ್ನು ಚಲಾಯಿಸಿ ಬಿಜೆಪಿ ವಸ್ತುಶಃ ಚಂದ್ರ ಅವರನ್ನು ತ್ಯಜಿಸಿತ್ತು. ಆದರೆ ಕಾಂಗ್ರೆಸ್ 14 ಮತಗಳನ್ನು ಉದ್ದೇಶಪೂರ್ವಕವಾಗಿ ರದ್ದುಗೊಳಿಸುವ ಮೂಲಕ ಚಂದ್ರ ಅವರ ವಿಜಯಕ್ಕೆ ಕಾರಣವಾಯಿತು. ಆರ್ ಕೆ ಆನಂದ್ ವಿಜಯಕ್ಕೆ ಕೇವಲ 5 ಮತಗಳು ಅಗತ್ಯವಿದ್ದು  ಅವರಿಗೆ  14 ಮತಗಳು ದೊರೆತಿದ್ದರೂ, ಸ್ಥಳೀಯ ಕಾಂಗ್ರೆಸ್ ನಾಯಕರ ಕುತಂತ್ರದಿಂದಾಗಿ ಎಲ್ಲವೂ ರದ್ದುಗೊಂಡಿತ್ತು.
ವಿಜಯದ ಗುರಿ 31 ಆಗಿದ್ದುದರಿಂದ ಆರ್ ಕೆ ಆನಂದ್ ಸುಲಭದಲ್ಲಿ ಜಯ ಸಾಧಿಸಬಹುದಾಗಿದ್ದರೂ  ಅವರಿಗೆ ದೊರೆತ 14 ಮತಗಳು ರದ್ದಾಗಿದ್ದರಿಂದ ಅವರು ಸೋಲನ್ನನುಭವಿಸುವಂತಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News