ರಾಹುಲ್ ಗಾಂಧಿಯ ಅಮಲು ಬಿಡಿಸಿದ ಟ್ವಿಟ್ಟರ್

Update: 2016-06-14 06:16 GMT

ಹೊಸದಿಲ್ಲಿ, ಜೂ.14: ಅಧಿಕಾರಕ್ಕೆ ಬಂದರೆ ಪಂಜಾಬ್‌ನ ಡ್ರಗ್ಸ್ ಸಮಸ್ಯೆಯನ್ನು ಕೇವಲ ಒಂದೇ ತಿಂಗಳಲ್ಲಿ ಪರಿಹರಿಸುತ್ತೇನೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ನೀಡಿದ ಹೇಳಿಕೆ ಟ್ವಿಟ್ಟರಿನಲ್ಲಿ ಸ್ವಾರಸ್ಯಕರ ಪ್ರತಿಕ್ರಿಯೆಗೆ ಕಾರಣವಾಗಿದೆ.

‘‘ಇಲ್ಲಿನ ಸರಕಾರಕ್ಕೆ ಡ್ರಗ್ಸ್ ವ್ಯವಹಾರದಿಂದ ಲಾಭವಿರುವುದರಿಂದ ಅದನ್ನು ಅದು ಉತ್ತೇಜಿಸುತ್ತಿದೆ,’’ ಎಂದು ಶಿರೋಮಣಿ ಅಕಾಲಿ ದಳ ನೇತೃತ್ವದ ಪ್ರಕಾಶ್ ಸಿಂಗ್ ಬಾದಲ್ ಸರಕಾರವನ್ನು ಉಲ್ಲೇಖಿಸಿ ಜಲಂಧರ್‌ನಲ್ಲಿ ನಡೆದ ಪ್ರತಿಭಟನೆ ಸಂದರ್ಭ ರಾಹುಲ್ ಹೇಳಿದ್ದರಲ್ಲದೆ, ಸೆನ್ಸಾರ್ ಬೋರ್ಡ್‌ನಿಂದ ಹಲವು ದೃಶ್ಯಗಳಿಗೆ ಕತ್ತರಿ ಹೇರಬೇಕೆಂಬ ಆದೇಶ ಪಡೆದಿರುವ ಉಡ್ತಾ ಪಂಜಾಬ್ ವಿವಾದಕ್ಕೆ ಬಿಜೆಪಿ ಹಾಗೂ ಅಕಾಲಿ ದಳವನ್ನು ರಾಹುಲ್ ದೂಷಿಸಿದ್ದರು.

ರಾಹುಲ್ ಹೇಳಿಕೆಗೆ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿದ ಲೇಖಕಿ ಶೋಭಾ ಡೇ ‘‘ರಾಹುಲ್ ಗಾಂಧಿಯವರ ಬಳಿ ಪಂಜಾಬಿನ ಡ್ರಗ್ಸ್ ಸಮಸ್ಯೆಗೆ ಪರಿಹಾರವಿದೆಯಂತೆ. ಅವರು ಸಮಸ್ಯೆಯನ್ನು ಒಂದು ತಿಂಗಳೊಳಗೆ ಪರಿಹರಿಸುತ್ತಾರೆಂದು ಹೇಳಿದ್ದಾರೆ. ಅವರು ಏನನ್ನು ಸ್ಮೋಕ್ ಮಾಡುತ್ತಾರೆಂಬುದರ ಬಗ್ಗೆ ಯೋಚಿಸುತ್ತಿದ್ದೇನೆ,’’ ಎಂದಿದ್ದಾರೆ.

ಮಾಧವನ್ ನಾರಾಯಣನ್ ಎಂಬವರಂತೂ ‘‘ರಾಹುಲ್ ಗಾಂಧಿ ಡ್ರಗ್ಸ್ ವಿರುದ್ಧ ಸಮರ ಸಾರಿದ್ದಾರೆ,’’ ಎಂದು ಬರೆದಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರ ದೀಪಕ್ ಜವಕೆಯವರು ರಾಹುಲ್‌ಹೇಳಿಕೆಯನ್ನು ಅಣಕಿಸುತ್ತಾ ‘‘ಒಂದು ತಿಂಗಳೊಳಗೆ ಪ್ರಸಾರದಿಂದ ತೆಗೆದು ಹಾಕಲು ಡ್ರಗ್ಸ್ ಸಮಸ್ಯೆಯೇನೂ ಛೋಟಾ ಭೀಮ್ ಟಿವಿ ಧಾರಾವಾಹಿಯಲ್ಲ,’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News