ಭಾರತದಲ್ಲಿ ಪ್ರತಿ 5 ನಿಮಿಷಕ್ಕೆ ಓರ್ವ ಗರ್ಭಿಣಿ ಬಲಿ

Update: 2016-06-18 05:33 GMT

ನವದೆಹಲಿ: ಭಾರತದಲ್ಲಿ ಪ್ರತಿ ಐದು ನಿಮಷಗಳಿಗೊಮ್ಮೆ ಕನಿಷ್ಠ ಒಬ್ಬ ಮಹಿಳೆ ಗರ್ಭಧಾರಣೆ ಅಥವಾ ಹೆರಿಗೆ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪುತ್ತಾಳೆಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿದ ಮಾಹಿತಿ ತಿಳಿಸುತ್ತದೆ. ವಿಶ್ವದಾದ್ಯಂತ ಸಂಭವಿಸುವ ಹೆರಿಗೆ ಸಂಬಂಧಿ ಸಾವುಗಳಲ್ಲಿ (5,29,000) ಶೇ 26.7 ಸಾವುಗಳು (1,36,000) ಭಾರತದಲ್ಲಿ ಸಂಭವಿಸುತ್ತವೆ ಎಂದೂ ವಿಶ್ವ ಸಂಸ್ಥೆ ಹೇಳಿದೆ.
ಮೂರನೇ ಎರಡರಷ್ಟು ಹೆರಿಗೆ ಸಂಬಂಧಿ ಸಾವುಗಳು ಹೆರಿಗೆಯ ನಂತರ ಸಂಭವಿಸಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ  ಹೆರಿಗೆ ನಂತರದ ರಕ್ತಸ್ರಾವಗಳಿಂದ ಸಮಸ್ಯೆಗಳು ತಲೆದೋರಿ ಸಾವು ಸಂಭವಿಸುತ್ತವೆ.  ಹೆರಿಗೆಯ ನಂತರ  ತುರ್ತು ಹಿಸ್ಟೆರೆಕ್ಟಮಿಯನ್ನು ಪ್ರತಿ 1 ಲಕ್ಷ ಪ್ರಕರಣಗಳಲ್ಲಿ 83 ಪ್ರಕರಣಗಳಲ್ಲಿ ನಡೆಸಲಾಗುವುದಾದರೆ, ಈ ಶಸ್ತ್ರಕ್ರಿಯೆಯಿಂದ ತಾಯಿಯ ಸಾವಿನ ಪ್ರಮಾಣ 17.7 ಶೇ ಆಗಿದ್ದರೆ ಹೆರಿಗೆ ನಂತರದ ಸಾವಿನ ಪ್ರಮಾಣ 37.5 ಶೇ ಆಗಿದೆ,'' ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯೂ ಬಳಷ್ಟಿದೆಯೆಂದು ಹೇಳಿದ ಸಂಸ್ಥೆ ಒಟ್ಟು ಜನಸಂಖ್ಯೆಯ ಶೇ 1 ರಷ್ಟು ರಕ್ತ ಮೀಸಲಿರಿಸಬೇಕೆಂದು ಹೇಳಲಾಗಿದ್ದರೂ ಭಾರತದಲ್ಲಿ  ಶೇ 25 ರಷ್ಟು ರಕ್ತದ ಕೊರತೆಯಿದೆ.

ಹೆರಿಗೆ ಸಂದರ್ಭ ತಾಯಿಯ ಸಾವಿನ ಪ್ರಮಾಣ ಪ್ರತಿ 1,00,000 ಶಿಶುಗಳ ಜನನಕ್ಕೆ  ಸರಾಸರಿ 167 ಆಗಿದೆಯೆಂದು 2011 ಹಾಗೂ 2013 ರ ನಡುವಿನ ಅಂಕಿ ಸಂಖ್ಯೆಗಳು ಹೇಳುತ್ತವೆ, ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News