ಚೀನಾಕ್ಕೆ ದಿಢೀರ್ ಭೇಟಿ ನೀಡಿದ ವಿದೇಶಾಂಗ ಕಾರ್ಯದರ್ಶಿ

Update: 2016-06-19 17:47 GMT

ಹೊಸದಿಲ್ಲಿ, ಜೂ.19: ಪರಮಾಣು ಪೂರೈಕೆದಾರರ ಗುಂಪಿನ(ಎನ್‌ಎಸ್‌ಜಿ) ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಬೆಂಬಲ ಪಡೆಯಲು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಜೂ.16-17ರಂದು ಚೀನಾಕ್ಕೆ ದಿಢೀರ್ ಭೇಟಿ ನೀಡಿದ್ದರು. ಈ ಭೇಟಿಯ ವಿಷಯವನ್ನು ಮುಂಚಿತವಾಗಿ ಪ್ರಕಟಿಸಿರಲಿಲ್ಲ. ಭಾರತವು ಪರಮಾಣು ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕಿಲ್ಲವೆಂಬ ನೆಪವನ್ನೊಡ್ಡಿ ಎನ್‌ಎಸ್‌ಜಿಗೆ ಅದರ ಸದಸ್ಯತ್ವವನ್ನು ಚೀನಾ ವಿರೋಧಿಸುತ್ತಿದೆ. ಜೂ.24ರಂದು ಸಿಯೋಲ್‌ನಲ್ಲಿ 48 ರಾಷ್ಟ್ರಗಳ ಎನ್‌ಎಸ್‌ಜಿಯ ಸರ್ವಸದಸ್ಯರ ಸಭೆಯು ನಡೆಯಲಿದ್ದು,ಭಾರತದ ಸದಸ್ಯತ್ವ ಕುರಿತು ಚರ್ಚೆಯಾಗುವ ಸಾಧ್ಯತೆಯಿದೆ.

ಚೀನಾದ ವಿದೇಶಾಂಗ ಕಾರ್ಯದರ್ಶಿಗಳ ಜೊತೆ ದ್ವಿಪಕ್ಷೀಯ ಸಮಾಲೋಚನೆ ಗಳಿಗಾಗಿ ವಿದೇಶಾಂಗ ಕಾರ್ಯದರ್ಶಿಗಳು ಜೂ.16-17ರಂದು ಆ ರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಎನ್‌ಎಸ್‌ಜಿ ಸದಸ್ಯತ್ವ ಸೇರಿದಂತೆ ಎಲ್ಲ ಪ್ರಮುಖ ವಿ
ಷಯಗಳನ್ನು ಚರ್ಚಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ರವಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಮೆರಿಕವು ಭಾರತದ ಬೆನ್ನಿಗೆ ನಿಂತಿದ್ದು,ಎನ್‌ಎಸ್‌ಜಿ ಸದಸ್ಯತ್ವವನ್ನು ಪಡೆಯುವ ಅದರ ಪ್ರಯತ್ನವನ್ನು ಬೆಂಬಲಿಸುವಂತೆ ವಿವಿಧ ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳನ್ನು ಕೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News