ಈ ಪುಟ್ಟ ಮಕ್ಕಳ ಸಂಪಾದನೆ ಎಷ್ಟು ಗೊತ್ತೇ?

Update: 2016-06-21 06:25 GMT

ಹೊಸದಿಲ್ಲಿ, ಜೂನ್ 21: ಈ ವಯಸ್ಸಿನಲ್ಲಿ ಮಕ್ಕಳು ಆಟವಾಡಲು ಇಚ್ಛಿಸುತ್ತಾರೆ. ಆದರೆ ಈ ಆಟವಾಡುವ ವಯಸ್ಸಿನಲ್ಲಿ ಸಂಜಯ್ ಹಾಗೂ ಶ್ರವಣ್ ಒಂದು ಆ್ಯಪ್ ಮಾಡಿಬಿಟ್ಟಿದ್ದರು. ಏನಾದರೂ ಬೇರೆ, ಏನಾದರೂ ಹೊಸದು ಮಾಡುವ ಆಕಾಂಕ್ಷೆಯೇ ಇವರನ್ನು ಭಾರತದ ಅತೀ ಕಡಿಮೆ ವಯಸ್ಸಿನ ಸಿಇಒ ಮಾಡಿಬಿಟ್ಟಿದೆ. ಇವರಿಬ್ಬರ ಟ್ಯಾಲೆಂಟ್‌ನ ಮುಂದೆ ಮಾರ್ಕ್ಸ್ ಝುಕರ್‌ಬರ್ಗ್ ಕೂಡಾ ಮಂಡಿಯೂರಿದ್ದಾರೆ.

ಹದಿನಾಲ್ಕು ವಯಸ್ಸಿನ ಶ್ರವಣ್ ಹಾಗೂ ಹನ್ನೆರಡು ವರ್ಷದ ಸಂಜಯ್ ಭಾರತದ ಅತ್ಯಂತ ಚಿಕ್ಕ ಆ್ಯಪ್ ಡಿಸೈನರ್ ಆಗಿದ್ದಾರೆ. ಇಬ್ಬರು ಸೇರಿ 2012ರಲ್ಲಿ ’ಡಿಸೈನ್ ಡೈಮೆನ್ಸನ್ಸ್’ಆ್ಯಪ್‌ನ್ನು ಲಾಂಚ್ ಮಾಡಿದ್ದಾರೆ.ಈ ವರೆಗೂ ಹನ್ನೊಂದು ಆ್ಯಪ್‌ಗಳನ್ನು ಇವರು ಡಿಸೈನ್ ಮಾಡಿದ್ದಾರೆ. ಆ್ಯಪಲ್ ಐಟ್ಯೂನ್ಸ್ ಹಾಗೂ ಗೂಗಲ್ ಪ್ಲೇ ಸ್ಟೋರ್‌ ಗಳಲ್ಲಿ. ಇವರ ಆ್ಯಪ್‌ಗಳಿವೆ. ಇವರ ಕಂಪೆನಿ ಗೋ ಡಿಸೈನ್ ವರ್ಷಕ್ಕೆ 120 ಕೋಟಿ ರೂಪಾಯಿ ಸಂಪಾದಿಸುತ್ತದೆ.

  ಶ್ರವಣ್ ಹಾಗೂ ಸಂಜಯ್ ಚೆನ್ನೈಯಲ್ಲಿ ವಾಸವಿದ್ದಾರೆ. ಇವರಿಬ್ಬರು ಮೊದಲ ಆ್ಯಪ್ ಮಾಡಿದಾಗ ಏಳನೆ ತರಗತಿ ವಿದ್ಯಾರ್ಥಿಗಳಾಗಿದ್ದರು. ಶ್ರವಣ್ ಕಂಪೆನಿಯ ಅಧ್ಯಕ್ಷ, ಸಂಜಯ್ ಸಿಇಒ ಅಗಿದ್ದಾನೆ. ತಮ್ಮ ಟ್ಯಾಲೆಂಟ್‌ನ್ನು ಇಬ್ಬರೂ ಐಐಎಂ-ಬೆಂಗಳೂರು ಹಾಗೂ ಟೆಡೆಕ್ಟ್ ಕಾನ್ಫ್ರೆನ್ಸ್‌ನಲ್ಲಿ ಪ್ರಸ್ತುತ ಪಡಿಸಿದ್ದಾರೆ. ಇಬ್ಬರ ವಯಸ್ಸು ಈಗ ಕಡಿಮೆ ಇರುವುದರಿಂದ ಭಾರತದ ಕಾನೂನು ಪ್ರಕಾರ ಇವರ ಕಂಪೆನಿ ಇವರ ಕುಟುಂಬದ ಇತರ ಸದಸ್ಯನ ಹೆಸರಿನಲ್ಲಿ ರಿಜಿಸ್ಟರ್ಡ್ ಆಗಿದೆ.

ಶ್ರವಣ್ ಮೂರನೆ ತರಗತಿಯಲ್ಲಿದ್ದಾಗ ತಂದೆ ಡೆಸ್ಕ್‌ಟಾಪ್ ತಂದು ಕೊಟ್ಟಿದ್ದರು. ಶ್ರವಣ್ ಪಿಪಿಟಿ ಎಪ್ಲಿಕೇಶ್‌ನ ಕುರಿತು ಓದಿದ ಮತ್ತು ಅರ್ಥ ಮಾಡಿಕೊಂಡ. ಆನಂತರ ಇಬ್ಬರೂ ಸಹೋದರರು ಪಿಪಿಟಿಯ ಕುರಿತು ಶಾಲೆಯ ಟೀಚರ್‌ಗಳಿಂದ ಹೆಚ್ಚಿನ ಮಾಹಿತಿ ತಿಳಿದುಕೊಂಡರು. ನಂತರ ಅವರ ತಂದೆ ಪ್ರೋಗ್ರಾಮಿಂಗ್‌ನ ಮಾಹಿತಿ ನೀಡಿದರು. ನಂತರ ಇಬ್ಬರು ತಮ್ಮ ಕಂಪೆನಿಯನ್ನು ಪ್ರಾರಂಭಿಸಿದರು. ಅವರಿಗೆ ತಮ್ಮ ಕಚೇರಿ ತಮ್ಮ ಬೆಡ್‌ರೂಂ ಆಗಿದೆ. ಅಲ್ಲಿಂದ ಅವರು ತಮ್ಮ ಕೆಲಸ ಮಾಡುತ್ತಾರೆ. ಮಾತ್ರವಲ್ಲ ಆ್ಯಪಲ್‌ ಮೂಲಕ ಭಾರತದ ಅತಿಕಡಿಮೆ ವಯಸ್ಸಿನ ಪ್ರೊಗ್ರಾಮರ್‌ ಎಂಬ ಸ್ಥಾನ ಇವರಿಗೆ ದೊರಕಿದೆ. ಈ ಇಬ್ಬರೂ ಸಹೋದರರು, ಚೀನಾ, ಯುಎಸ್ ಮತ್ತು ಕೆಲವು ಇಂಡಿಯನ್ ಕಂಪೆನಿಯೊಂದಿಗೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ. ಈಗ ಅವರಿಬ್ಬರೂ ಕ್ಯೂ ಬೇಸಿಕ್, ಜಾವಾದ ಕುರಿತು ಮಾಹಿತಿಯನ್ನು ಕಲಿಯುತ್ತಿದ್ದಾರೆ. ಒಮ್ಮೆ ಅವರ ಶಾಲೆಗೆ ಅಬ್ದುಲ್ ಕಲಾಮ್ ಬಂದಿದ್ದಾಗ ಅವರ ಅಪ್ಲಿಕೇಷನ್ ನೋಡಿ ತುಂಬ ಇಷ್ಟಪಟ್ಟಿದ್ದರೆಂದು ಸಂಜಯ್ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News