ಜೂನ್ 24 ಕ್ಕೆ ತರಾವೀಹ್ ನಮಾಝಿಗೆ ಮಿಶಾರಿ ನೇತೃತ್ವ

Update: 2016-06-22 17:45 GMT

ದುಬೈ, ಜೂ. 22  : ಕುರ್ ಆನ್ ಅನ್ನು ಅತ್ಯಂತ ಮಧುರ ಕಂಠದಿಂದ ಪಠಿಸುವ ವಿಶ್ವ ವಿಖ್ಯಾತ ಇಮಾಮ್ , ಶೇಖ್ ಮಿಶಾರಿ ರಶೀದ್ ಅಲಫಾಸಿ ಅವರು ಜೂನ್ ೨೪ ರಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎದುರಿರುವ  ರಶೀದಿಯ ಗ್ರ್ಯಾಂಡ್ ಮಸೀದಿಯಲ್ಲಿ ತರಾವೀಹ್ ನಮಾಜ್ಹ್ ನೇತೃತ್ವ ವಹಿಸಲಿದ್ದಾರೆ. ಈ ಬಹುನಿರೀಕ್ಷಿತ ತರಾವೀಹ್ ನಮಾಜ್ಹ್ ಗೆ ಸಾವಿರಾರು ಜನರು ಸೇರುವ ನಿರೀಕ್ಷೆಯಿದೆ. 

ರಮಝಾನ್ ತಿಂಗಳಲ್ಲಿ ನಡೆಯುವ ಕುರ್ ಆನ್ ಪಠಣ ಕಾರ್ಯಕ್ರಮದಲ್ಲೂ 11 ಅತ್ಯಂತ ಖ್ಯಾತ ಇಮಾಮ್ ಗಳು ಭಾಗವಹಿಸಲಿದ್ದು ಬಹುದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಇವರಲ್ಲಿ ಸೌದಿ ಅರೇಬಿಯಾದ ಸಾದ್ ಅಲ್ ಘಾಮಿದಿ , ಆದಿಲ್ ರಯಾನ್, ಶೇಖ್ ಅಬು ಬಕ್ರ್ ಅಲ್ ಶಾತಿರಿ,ಕುವೈಟ್ ನ  ಶೇಖ್ ಮಿಶಾರಿ ರಶೀದ್ ಅಲಫಾಸಿ, ಅಹ್ಮದ್ ಅಲ್ ನಫೀಸ್ , ಬಹರೈನ್ ನ ಮೊಹಮ್ಮದ್ ಮುಬಾರಕ್ , ಲೆಬನಾನ್ ನ  ಅಬ್ದುಲ್ಲಾಹ್ ಅಬ್ದುರ್ರಹ್ಮಾನ್ ಅಲ್ ಉಬೈದಲಿ , ನಬೀಲ್ ಅಲ್ ರಫಾಯಿ ಅವರು ಸೇರಿದ್ದಾರೆ. 

ಶೇಖ್ ಮನ್ಸೂರ್ ಅಲ್ ಝಹರಾನಿ ಹಾಗೂ ನಾಸಿರ್ ಅಲ್ ಖತ್ತಾಮಿ ಅವರು ರಶೀದಿಯ ಗ್ರ್ಯಾಂಡ್ ಮಸೀದಿಯಲ್ಲಿ ತರಾವೀಹ್ ನಮಾಜ್ಹ್ ನೇತೃತ್ವ ವಹಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News