ಎಲ್‌ಐಸಿಯಿಂದ ಶೀಘ್ರವೇ ಸಾಲ ಹೆಚ್ಚಳ ನಿಧಿ ಘೋಷಣೆ

Update: 2016-06-22 18:29 GMT

ಹೊಸದಿಲ್ಲಿ, ಜೂ.22: ಕಡಿಮೆ ವೆಚ್ಚದಲ್ಲಿ ದೇಶೀಯ ಹಾಗೂ ಸಾಗರೋತ್ತರ ನಿಧಿಯನ್ನು ಪಡೆಯಲು ಮೂಲ ಸೌಕರ್ಯ ವಲಯದ ಕಂಪೆನಿಗಳಿಗೆ ಸಹಾಯ ಮಾಡಲು, ಖಾತ್ರಿ ಒದಗಿಸುವುದಕ್ಕಾಗಿ ಸಾಲ ಹೆಚ್ಚಳ ನಿಧಿಯೊಂದರ ಸ್ಥಾಪನೆಯನ್ನು ಸರಕಾರಿ ಸ್ವಾಮ್ಯದ ಜೀವ ವಿಮಾ ನಿಗಮವು(ಎಲ್‌ಐಸಿ) ಶೀಘ್ರವೇ ಘೋಷಿಸಲಿದೆ.

ಎಲ್‌ಐಸಿ ಅದನ್ನು ಶೀಘ್ರವೇ ಘೋಷಿಸಲಿದೆಯೆಂದು ತಾವು ನಿರೀಕ್ಷಿಸಿದ್ದೇವೆಂದು ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತಾದಾಸ್ ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಈ ಕ್ರಮದ ಪರಿಣಾಮದ ಕುರಿತ ಪ್ರಶ್ನೆಗೆ, ಮೂಲಸೌಕರ್ಯ ವಲಯದ ಕಂಪೆನಿಗಳಿಗೆ ’ಸಾಲ ಹೆಚ್ಚಳ’ ಸೌಲಭ್ಯ ದೊರೆತರೆ ಅದರಿಂದ ಅವರಿಗೆ ಕಡಿಮೆ ವೆಚ್ಚದಲ್ಲಿ ದೇಶೀಯ ಹಾಗೂ ಸಾಗರೋತ್ತರ ಮಾರುಕಟ್ಟೆಗಳಿಂದ ನಿಧಿ ಸಂಗ್ರಹ ಸಾಧ್ಯವಾಗಲಿದೆಯೆಂದು ಅವರುತ್ತರಿಸಿದ್ದಾರೆ.

ಮೂಲಸೌಕರ್ಯ ಯೋಜನೆಗಳಿಗೆ ಸಾಲ ಹೆಚ್ಚಳ ಒದಗಿಸಲು ಮೀಸಲಾದ ನಿಧಿಯೊಂದನ್ನು ಭಾರತೀಯ ಜೀವವಿಮಾ ನಿಗಮ ಸ್ಥಾಪಿಸಲಿದೆಯೆಂದು ವಿತ್ತ ಸಚಿವ ಅರುಣ್ ಜೇಟ್ಲಿ ತನ್ನ ಬಜೆಟ್ ಭಾಷಣದಲ್ಲಿ ಪ್ರಸ್ತಾವಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News