ಕಪ್ಪುಹಣ ಬಹಿರಂಗಕ್ಕೆ ಏಕ ಗವಾಕ್ಷಿ

Update: 2016-06-23 18:23 GMT

 ಹೊಸದಿಲ್ಲಿ, ಜೂ.23: ಗೌಪ್ಯವನ್ನ್ನು ಖಚಿತ ಪಡಿಸುವುದಕ್ಕಾಗಿ ಆದಾಯ ತೆರಿಗೆ ಇಲಾ ಖೆಯು, ಕಪ್ಪು ಹಣ ಉಳ್ಳವರು ತಮಗೆ ಒದಗಿ ಸಲಾಗಿರುವ ಏಕಗವಾಕ್ಷಿ ವ್ಯವಸ್ಥೆ ಮೂಲಕ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಆದಾಯ ಘೋಷಣೆ ಯೋಜನೆ ಯನ್ವಯದ ಈ 4 ತಿಂಗಳ ಕಿಂಡಿಯನ್ನು ಜೂ.1ರಂದು ಆರಂಭಿಸಲಾಗಿದೆ. ಅದು ದೇಶೀಯ ಕಪ್ಪುಹಣ ಇರುವವರಿಗೆ ತಮ್ಮ ಅನ್ಯಾಯಾರ್ಜಿತ ಸಂಪತ್ತನ್ನು ತೆರಿಗೆ ಹಾಗೂ ಒಟ್ಟು ಶೇ.45ರಷ್ಟು ದಂಡ ಪಾವತಿಸುವ ಮೂಲಕ ಘೋಷಿಸಲು ಅವಕಾಶ ಕಲ್ಪಿಸಿದೆ.
ಯೋಜನೆಯ ಬಗ್ಗೆ ತೆರಿಗೆದಾರರಿಗೆ ಮಾಹಿತಿ ಹಾಗೂ ಪರ್ಯಾಪ್ತ ಮಾರ್ಗದರ್ಶ ನವನ್ನು ಖಚಿತಪಡಿಸಲು ‘ಸರ್ವ ಪ್ರಯತ್ನ’ ನಡೆಸುವಂತೆ ಸಿಬಿಡಿಟಿ ಸಹ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಅನಧಿಕೃತ ಸಂಪತ್ತು ಘೋಷಣೆಗೆ ವಿಶೇಷ ಪ್ರಾಧಿಕಾರವಾಗಿ ನ್ಯಾಯಾಂಗ ವ್ಯಾಪ್ತಿಯ ಪ್ರಧಾನ ಆಯುಕ್ತ ಅಥವಾ ಆದಾಯ ತೆರಿಗೆ ಆಯೋಗಕ್ಕೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು(ಸಿಬಿಡಿಟಿ) ಅಧಿಕಾರ ನೀಡಿದೆ.
ಕಚೇರಿಯ ಇತರ ಯಾರೊಂದಿಗೂ ಹೆಚ್ಚುವರಿ ಸಂವಹನದ ಅಗತ್ಯವನ್ನು ನಿವಾರಿಸಲು ಘೋಷಣೆಯ ಸಮಯದಲ್ಲಿ ಎಲ್ಲ ‘ಪ್ರಕ್ರಿಯಾತ್ಮಕ ಸೌಲಭ್ಯ’ ಒದಗಿಸುವಂತೆ ಅದು ವಿಶೇಷ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಧಾನ ಆಯುಕ್ತರು ಇರುವ ಪ್ರತಿ ನಗರದಲ್ಲಿ ಯೋಜನೆಯ ಕುರಿತು ಮಾಹಿತಿ ನೀಡಲು ಹೆಲ್ಪ್‌ಡೆಸ್ಕ್ ಮಾದರಿಯಲ್ಲಿ ‘ಸಹಾಯ ಕೇಂದ್ರವನ್ನು’ ತೆರೆಯುವಂತೆಯೂ ಸಿಬಿಡಿಟಿ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News