ಕೇರಳ ಯುವತಿ ಅತ್ಯಾಚಾರ, ಕೊಲೆ ಪ್ರಕರಣ: ಇನ್ನೊಬ್ಬನ ಬೆರಳಚ್ಚು ಪತ್ತೆ

Update: 2016-06-24 07:06 GMT

ಕೊಚ್ಚಿ, ಜೂನ್ 24: ಜಿಶಾರನ್ನು ಅಮೀರುಲ್ ಇಸ್ಲಾಂ ಒಬ್ಬನೆ ಕೊಂದಿಲ್ಲ ಎಂಬ ನಿಲುವಿಗೆ ಪೊಲೀಸರು ತಲುಪಿದ್ದಾರೆ.ಕೊಲೆ ನಡೆಯುವಾಗ ಮನೆಯೊಳಗೆ ಇನ್ನೊಬ್ಬನೂ ಇದ್ದ ಎಂದು ಖಚಿತಗೊಳ್ಳುವ ಬೆರಳಚ್ಚು ಪೊಲೀಸರು ಪತ್ತೆಹಚ್ಚಿದ್ದು ಕೋಣೆಯೊಳಗೆ ಜಿಶಾ ಮೀನು ಸಾಕಣೆ ಮಾಡಿದ್ದ ಪ್ಲಾಸ್ಟಿಕ್ ಜಾರ್‌ನಲ್ಲಿ ಈ ಬೆರಳಚ್ಚು ಸಿಕ್ಕಿದೆ. ಅಮೀರುಲ್ ಇಸ್ಲಾಂ ಬಂಧನವಾಗುವವರೆಗೆ ಕೊಲೆಗಡುಕನದ್ದೆಂದು ತನಿಖಾ ತಂಡ ಶಂಕಿಸಿದ್ದ ಬೆರಳಚ್ಚು ಅಮೀರನದ್ದಲ್ಲ ಎಂದು ತಪಾಸಣೆಯಲ್ಲಿ ಖಚಿತವಾಗಿದೆ. ಜಿಶಾರಿಗೆ ಚಾಕು ಬೀಸಿದ್ದು ಅಮೀರ್ ಇರಬಹುದಾದರೂ ಮನೆಯೊಳಗೆ ಇದ್ದ ಸಿಮಂಟ್ ಗಟ್ಟಿಯಿಂದ ಜಿಶಾರಿಗೆ ಹೊಡೆದದ್ದು ಮತ್ತೊಬ್ಬ ಇರಬೇಕೆಂದು ಪೊಲೀಸರು ನಿರ್ಧರಿಸಿದ್ದಾರೆ. ಜಿಶಾರ ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ತೆಗೆದ ಪೊಲೀಸರ ಸಹಿತ ಊರವರಾದ 5000 ಪುರುಷರ ಬೆರಳಚ್ಚುಗಳು ಜಾರ್‌ನ ಬೆರಳಚ್ಚಿಗೆ ಹೋಲಿಕೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆರಳಚ್ಚು ಯಾರದೆಂದು ಅಮೀರನ ಸಾಕ್ಷ್ಯದಿಂದ ಗೊತ್ತಾಗಬಹುದೆಂದು ವಿಶ್ವಾಸ ಪೊಲೀಸರಿಗಿದೆ. ಜಿಶಾರ ಮನೆಯಲ್ಲಿ ಅಮೀರ್ ಇದ್ದ ಎಂಬುದಕ್ಕೆ ಸಾಕ್ಷ್ಯವಾಗುವ ಐದು ವೈಜ್ಞಾನಿಕ ಪುರಾವೆಗಳು ಪೊಲೀಸರಿಗೆ ಸಿಕ್ಕಿದೆ. ಜಿಶಾರ ಉಗುರಿನ ಅಡಿಯ ಚರ್ಮದ ಕೋಶ ಆರೋಪಿಯಲ್ಲಿ ಜಿಶಾ ಕಚ್ಚಿದ ಎರಡು ಗಾಯದ ಕಲೆಗಳು ಹೊರಗೆ ಬಟ್ಟೆಯಿಂದ ಶೇಖರಿಸಿದ ಉಗುಳು. ಮನೆಯ ಬಾಗಿಲಿಗೆ ಅಂಟಿದ ಕೊಲೆಗಾರನ ರಕ್ತ ಇವು ಅಮೀರ್‌ನ ಡಿಎನ್‌ಎಗೆ ಹೊಂದಿಕೆ ಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News