ಫೇಸ್‌ಬುಕ್ ಅವಾಂತರ: ಯುವತಿ ಆತ್ಮಹತ್ಯೆ

Update: 2016-06-28 13:35 GMT

 ಚೆನ್ನೈ,ಜೂ.28: ಫೇಸ್‌ಬುಕ್‌ನಲ್ಲಿ ಯುವಕನೋರ್ವ ತನ್ನ ನಗ್ನ ಚಿತ್ರವನ್ನು ಹಾಕಿದ್ದರಿಂದ ನೊಂದ ತಮಿಳುನಾಡಿನ 21ರ ಹರೆಯದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಸೇಲಂನಲ್ಲಿ ತಂದೆ-ತಾಯಿಯೊಂದಿಗೆ ವಾಸವಾಗಿದ್ದ ವಿನುಪ್ರಿಯಾ ಹೆಸರಿನ ಯುವತಿ ಫೇಸ್‌ಬುಕ್ ಅವಾಂತರಕ್ಕೆ ಬಲಿಯಾಗಿದ್ದಾರೆ.

ನಾನು ಯಾರಿಗೂ ನಗ್ನ ಚಿತ್ರವನ್ನು ಕಳುಹಿಸಿಲ್ಲ ಎಂದು ಹೆತ್ತವರಿಗೆ ಆಕೆ ತಿಳಿಸಿದರೂ ಮಗಳ ಮಾತನ್ನು ಅವರು ನಂಬಲಿಲ್ಲ. ಇದರಿಂದ ನೊಂದ ಯುವತಿ ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.

ಹೆತ್ತವರೇ ನನ್ನ ಮಾತನು ನಂಬದಿರುವಾಗ ನಾನು ಬದುಕಿ ಏನು ಪ್ರಯೋಜನ ಎಂದು ಒಂದು ವರ್ಷದ ಹಿಂದೆ ರಸಾಯನಶಾಸ್ತ್ರದಲ್ಲಿ ಪದವಿ ಪಡೆದಿದ್ದ ವಿನುಪ್ರಿಯಾ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ.

ವಿನುಪ್ರಿಯಾ ಹೆಸರಿನಲ್ಲಿ ಯಾರೋ ಫೇಸ್‌ಬುಕ್‌ನಲ್ಲಿ ಫೋಟೊಗಳನ್ನು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ..........

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News