ಮುಂಬೈನ ಮೆಡಿಕಲ್‌ ಸ್ಟೋರ್‌ನಲ್ಲಿ ಅಗ್ನಿ ಆಕಸ್ಮಿಕ ; 8 ಸಾವು

Update: 2016-06-30 04:39 GMT

ಮುಂಬೈ ಜೂ. 30: ಅಂಧೇರಿಯ  ವೈರ್‌ಲೆಸ್‌ ರೋಡ್‌ನ ’ವಫಾ ’ ಮೆಡಿಕಲ್‌ ಸ್ಟೋರ್‌ ಒಂದರಲ್ಲಿ ಅಗ್ನಿ ಆಕಸ್ಮಿಕದಿಂದಾಗಿ ಎಂಟು ಮಂದಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಜೂಹಿ ಗಲಿಯ ಕಟ್ಟಡದ ಮೊದಲ ಅಂತಸ್ತಿನಲ್ಲಿ  ’ವಫಾ ’ ಮೆಡಿಕಲ್‌  ಮೆಡಿಕಲ್‌  ಸ್ಟೋರ‍್ ನಲ್ಲಿ ಬೆಂಕಿ ಕಾಣಿಸಿಕೊಂಡಿತು.ಬಳಿಕ ವ್ಯಾಪಿಸಿತು. ಕಟ್ಟಡದಲ್ಲಿ ನೆಲೆಸಿದ್ದವರ ಪೈಕಿ ಮೂರು ತಿಂಗಳ ಮಗು, ಐದು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ. ಮೆಡಿಕಲ್‌ ಸ್ಟೋರ‍್ ನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News