ಮೋದಿ ಆಶ್ವಾಸನೆಗಳ ಪೋಸ್ಟರ್ ಬಾಯ್: ಕಾಂಗ್ರೆಸ್

Update: 2016-07-03 18:31 GMT

ಹೊಸದಿಲ್ಲಿ, ಜು.3: ಪ್ರಧಾನಿ ನರೇಂದ್ರ ಮೋದಿ ‘‘ಮುರಿದ ಆಶ್ವಾಸನೆಗಳ ಪೋಸ್ಟರ್ ಬಾಯ್’’ ಆಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ. ಮೋದಿ ಸಾಧನೆಗಳ ವಿಶ್ಲೇಷಣೆ ಮಾಡಿದ ಕಾಂಗ್ರೆಸ್, ಅದನ್ನು ‘ಸುಳ್ಳುಗಳ ಆಡಳಿತ’ ಎಂದು ಟೀಕಿಸಿದೆ.

ಪ್ರಧಾನಿ ಮೋದಿ ಮುರಿದ ಆಶ್ವಾಸನೆಗಳ ಪೋಸ್ಟರ್ ಬಾಯ್ ಆಗಿದ್ದಾರೆ. ಅವರ ಸಂಪೂರ್ಣ ಸರಕಾರ ಹಾಗೂ ರಾಜಕೀಯ ವಂಚನೆ ಹಾಗೂ ಸುಳ್ಳುಗಳ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆಯೆಂದು ಅದು ವಾಗ್ದಾಳಿ ನಡೆಸಿದೆ.ಧಿಕಾರಕ್ಕಾಗಿ ಪ್ರಚಾರ ನಡೆಸುವ ವೇಳೆ ಮೋದಿ ಭಾರತಕ್ಕೆ ಪ್ರಪಂಚವನ್ನೇ ತರುವ ಆಶ್ವಾಸನೆ ನೀಡಿದ್ದರು. ರಾಷ್ಟ್ರಾದ್ಯಂತ ಸತ್ಯದ ಹೆಸರಲ್ಲಿ ಸುಳ್ಳನ್ನೇ ಹರಡಲು ಶಕ್ತರಾದರು. ಆದರೆ, ಮೋದಿಯವರ ಪ್ರತಿಪಾದನೆಗಳೆಲ್ಲ ಎರಡೇ ವರ್ಷಗಳಲ್ಲಿ ಬಯಲಾಗಿವೆಯೆಂದು ವಿಪಕ್ಷವು ಆರೋಪಿಸಿದೆ.

""Hಪ್ರಧಾನಿ ಮೋದಿ ವರ್ಷಕ್ಕೆ 2 ಕೋಟಿ ಉದ್ಯೋಗಗಳ ಭರವಸೆಯನ್ನು ದೇಶಕ್ಕೆ ನೀಡಿದ್ದರು. ತನ್ನ ಸರಕಾರದಲ್ಲಿ ಆರ್ಥಿಕತೆಯು ವೃದ್ಧಿಯಾಗುತ್ತಿದೆಯೆಂದು ಕೆನೆಯುತ್ತಿದ್ದಾರೆ. ಅಷ್ಟಾಗಿಯೂ ಅವರು ಕೇವಲ 1.35 ಲಕ್ಷ ಉದ್ಯೋಗಗಳನ್ನಷ್ಟೇ ಸೃಷ್ಟಿಸಿದ್ದಾರೆ. ಆದರೆ ಯುಪಿಎ ಸರಕಾರವು 2011ರಲ್ಲಿ 9 ಲಕ್ಷ ಉದ್ಯೋಗಗಳನ್ನು ಒದಗಿಸಿತ್ತೆಂದು ಪಕ್ಷದ ಜಾಲತಾಣದಲ್ಲಿ ಪ್ರಕಟಿಸಿರುವ ‘ವೀಕ್ಷಕ ವಿವರಣೆ’ಯೊಂದರಲ್ಲಿ ಕಾಂಗ್ರೆಸ್ ಹೇಳಿದೆ.ಪ್ರಧಾನಿ ಮೋದಿಯವರ ವಿದೇಶ ಪ್ರವಾಸಗಳಿಂದ ದೇಶದ ಗೌರವ ಹೆಚ್ಚಾಗಿದೆಯೆಂದು ಅವರ ಬೆಂಬಲಿಗರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಅವರ ವಿದೇಶ ನೀತಿಯ ಉತ್ಪಾದನೆಯೇನೆಂಬುದು ಅಚ್ಚರಿಯ ವಿಷಯವಾಗಿದೆ. ಗುರುದಾಸಪುರ, ಪಠಾಣ್‌ಕೋಟ್, ಪಾಂಪೋರ್ (ಭಯೋತ್ಪಾದಕ ದಾಳಿ) 1 ಸಾವಿರ ಕದನ ವಿರಾಮ ಉಲ್ಲಂಘನೆಗಳು ಮೋದಿ ರಾಜತಾಂತ್ರಿಕತೆಯ ನೇರ ಫಲಿತಾಂಶವಾಗಿದೆ. ಎನ್‌ಎಸ್‌ಜಿ ಸದಸ್ಯತ್ವದ ವಿಷಯದಲ್ಲಿ ಭಾರತದ ಮಾನ ಕಳೆದಿದ್ದಾರೆ. ಮೋದಿಯವರ ‘ಕುಶಲ’ ರಾಜತಂತ್ರದಿಂದ ಪಾಕಿಸ್ತಾನದ ಮೇಲಿದ್ದ ಶಸ್ತ್ರಾಸ್ತ್ರ ನಿಷೇಧವನ್ನು ರಷ್ಯಾ ಹಿಂಪಡೆದಿದೆ. ಚೀನಾವಂತೂ ಪಾಕಿಸ್ತಾನವನ್ನು ಬೆಂಬಲಿಸಲು ಮುಂಚೂಣಿಯಲ್ಲಿದೆ. ಅಮೆರಿಕವು ಪಾಕಿಸ್ತಾನಕ್ಕೆ ಯುದ್ಧ ವಿಮಾನ ಮಾರಲು ಒಪ್ಪಿದೆ. ಆದಾಗ್ಯೂ, ಪರಿಣತರು ಮೋದಿಯವರ ವಿದೇಶ ನೀತಿಯ ಯಶೋಗಾಥೆಯನ್ನು ಹುಡುಕಲು ಇನ್ನೂ ಪ್ರಯತ್ನಿಸುತ್ತಿದ್ದಾರೆಂದು ಅದು ಟೀಕಿಸಿದೆ.ರುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಅಸಹಿಷ್ಣುತೆ, ಐಸಿಯುನಲ್ಲಿರುವ ರೂಪಾಯಿ, ಸರತಿಯ ಸಾಲಲ್ಲಿರುವ ಯುವಕರು! ಇವು ಮೋದಿ ಭರವಸೆ ನೀಡಿರುವ ‘‘ಅಚ್ಛೇ ದಿನ್‌ಗಳೇ?’’ ಎಂದು ಈ ವೀಕ್ಷಕ ವಿವರಣೆಗೆ ಶಿರೋನಾಮೆಯಿರಿಸಲಾಗಿದೆ.

ಮೋದಿ ಹಾಗೂ ಅವರ ಸರಕಾರ ಬಡವರು ಹಾಗೂ ಮಧ್ಯಮ ವರ್ಗದವರಿಗೆ ‘ವಿಷ’ವಾಗಿದೆ. ಬೇಳೆ ಕಾಳು ಬೆಲೆ ಗಗನ ಮುಟ್ಟಿದೆ. ಆದಾಯ ತೆರಿಗೆ ಮಟ್ಟವನ್ನು ರೂ. 5 ಲಕ್ಷಕ್ಕೇರಿಸುವ ಹಾಗೂ ರೈತರ ಆದಾಯ ದುಪ್ಪಟ್ಟುಗೊಳಿಸುವ ಭರವಸೆಗಳ ಬಗ್ಗೆ ಮೋದಿ ವೌನವಾಗಿದ್ದಾರೆ. ಚುನಾವಣಾ ಆಶ್ವಾಸನೆಗಳ ಗೊಡವೆಯಿಲ್ಲದೆ ಅವರು ವಿದೇಶ ಪ್ರವಾಸ ನಡೆಸುತ್ತಿದ್ದಾರೆ. ನಿರ್ಭಯಾ ಕೇಂದ್ರಗಳನ್ನು ಸಂಪೂರ್ಣ ತಟಸ್ಥಗೊಳಿಸುವ ಮೂಲಕ ಮೋದಿ, ಭಾರತದ ಮಹಿಳೆಯರನ್ನು ‘ಅನುತ್ತೀರ್ಣ’ ಗೊಳಿಸಿದ್ದಾರೆಂದು ಕಾಂಗ್ರೆಸ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News