ಪ್ರಾಮಾಣಿಕ ಅಕಾರಿಗಳ ಪರ ಅರಸು -ಜೆ.ಸಿ.ಲಿನ್

Update: 2016-07-06 07:24 GMT

ನನ್ನ ಕನ್ವಿನ್ಸ್ ಮಾಡಬೇಕು...

ಮಾರ್ಚ್ 1972, ಮಂಡ್ಯದಲ್ಲಿ ಡಿಸಿಯಾಗಿದ್ದೆ. ಕೆಲಸದ ನಿಮಿತ್ತ ಮಳವಳ್ಳಿಗೆ ಹೋಗಿಬರುವಷ್ಟರಲ್ಲಿ, ಸರಕಾರದ ಅಂದಿನ ಮುಖ್ಯ ಕಾರ್ಯದರ್ಶಿಗಳಾದ, ನನ್ನ ಹಿರಿಯ ಅಕಾರಿಯೂ ಆದ ರೆಬೆಲೋ ಸಾಹೇಬರು ೆನ್ ಮಾಡಿದ್ದರು. ವಿಷಯ ತಿಳಿದು ಅವರಿಗೆ ತಿರುಗಿ ೆನ್ ಮಾಡಿದಾಗ, ‘‘ಪ್ಯಾಕ್ ಮಾಡಿಕೊಂಡು ತಕ್ಷಣ ಹೊರಟು ಬನ್ನಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಹುದ್ದೆಗೆ ದೇವರಾಜ ಅರಸು ನೀವೇ ಬೇಕೆಂದಿದ್ದಾರೆ’’ ಎಂದರು. ಈ ಮುಂಚೆ ನಾನು ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ಎರಡೂವರೆ ವರ್ಷ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ. ಮರುಮಾತನಾಡದೆ, ಮಾರ್ಚ್ 25, 1972 ಕಾರ್ಯದರ್ಶಿಯಾಗಿ ಡ್ಯೂಟಿಗೆ ಹಾಜರಾದೆ.

ರೆಬೆಲೋ ಸಾಹೇಬರು, ‘ಹೋಗಿ ಮುಖ್ಯಮಂತ್ರಿಗಳನ್ನು ಕಂಡು ಬನ್ನಿ’ ಎಂದರು. ಸಿಎಂ ಕಚೇರಿಯಲ್ಲಿ ಅರಸು ಕೂತಿದ್ದರು. ಹೋದೆ, ಹೋದರೆ, ಒಂದಾದಮೇಲೆ ಒಂದು ಬಿಡುವಿಲ್ಲದಂತೆ ೆನ್‌ಗಳು, ನಡುವೆ ಅವರಿವರು ಬಂದುಹೋಗುವುದು, ನನ್ನತ್ತ ನೋಡಲೇ ಇಲ್ಲ. ನನಗೆ ಕೊಂಚ ಅಸಮಾಧಾನವಾಯಿತು. ಬಂದು ರೆಬೆಲೋ ಸಾಹೇಬರಿಗೆ ವರದಿ ಒಪ್ಪಿಸಿದೆ. ಅವರು ‘‘ಇರಿ, ಅಷ್ಟಕ್ಕೆಲ್ಲ ಅಪ್‌ಸೆಟ್ ಆಗಬೇಡಿ’ ಎಂದು ಸಮಾಧಾನ ಪಡಿಸಿದರು. ಆನಂತರ ಅರಸರೇ ನನ್ನನ್ನು ಕರೆದು ಮಾತನಾಡಿಸಿದರು. ನನ್ನ ಜೊತೆ ಅವರು ಹೆಚ್ಚಾಗಿ ಇಂಗ್ಲಿಷ್‌ನಲ್ಲಿಯೇ ಮಾತನಾಡುತ್ತಿದ್ದರು. ಏನನ್ನೋ ಜ್ಞಾಪಿಸಿಕೊಂಡವರಂತೆ, ‘‘ಮಿ. ಲಿನ್, ೈಲ್ಸ್ ವಿಪರೀತ ಪೆಂಡಿಂಗ್ ಇವೆ, ಕ್ಲಿಯರ್ ಮಾಡಬೇಕು... ನೀವೊಂದು ಕೆಲಸ ಮಾಡಿ, ಬೆಳಗ್ಗೆ 5.30ಕ್ಕೆ ಮನೆಗೇ ಬಂದುಬಿಡಿ’’ ಎಂದರು. ‘ಅರ್ಲಿ ಮಾರ್ನಿಂಗ್ 5.30?’ ಎಂದು ಪ್ರಶ್ನಾರ್ಥಕವಾಗಿ ನೋಡಿದೆ. ‘‘ಹೂಂ’’ ಎಂದರು ಕೂಲಾಗಿ. ನನಗೆ ಗಾಬರಿಯಾಯಿತು. ಹಾಗೆ ನಿಂತೇ ಇದ್ದೆ. ‘‘5.30ಕ್ಕೆ ಬಂದುಬಿಡಿ, ಡಿಸ್ಕಸ್ ಮಾಡಿ, ಎಲ್ಲ ೈಲ್ಸ್ ಕ್ಲಿಯರ್ ಮಾಡಿಬಿಡೋಣ’’ ಎಂದರು. ನಾನು ಬೇರೆ ಮಾತಾಡದೆ ಆಯಿತು ಸರ್ ಅಂದೆ. ಸಮಯಕ್ಕೆ ಸರಿಯಾಗಿ ಹೋದೆ. ಅವರು ರೆಡಿಯಾಗಿದ್ದರು. ೈಲ್‌ಗಳನ್ನು ಅವರ ಮುಂದಿಟ್ಟೆ. ಒಂದೊಂದಾಗಿ ನೋಡತೊಡಗಿದರು. ೈಲ್ಸ್ ಕೈಗೆತ್ತಿಕೊಂಡ ತಕ್ಷಣ ಅವರ ಹೆಂಡತಿ ಬಂದು ಕಾಫಿ ಕೊಡೋರು, ಸಹೋದರ ಕೆಂಪರಾಜ್ ಅರಸು ಬಂದಿದ್ದಾರೆ, ಸ್ವಲ್ಪ ಮಾತಾಡಿ ಕಳುಹಿಸುತ್ತೇನೆ ಅನ್ನೋರು. ಜೊತೆಗೆ ೈಲ್ಸ್ ತೆಗೆದುಕೊಂಡು ನೋಡುವುದು ಕೂಡ ನಿಧಾನ. ನನಗೆ ಇಲ್ಲಿ ೈಲ್ಸ್ ಕ್ಲಿಯರ್ ಮಾಡಿ, 9 ಗಂಟೆಯೊಳಗೆ ವಿಧಾನಸೌಧಕ್ಕೆ ಹೋಗಬೇಕು. ಬೆಳಗ್ಗೆ 9ಕ್ಕೆ ಹೋದರೆ ಸಂಜೆ 6-7 ಗಂಟೆಯಾದರೂ ಕೆಲಸ ಮುಗಿಯುತ್ತಿರಲಿಲ್ಲ. ನನಗಿದು ಬಗೆಹರಿಯದ ಸಮಸ್ಯೆಯಂತೆ ಕಾಣತೊಡಗಿತು. ಈ ನಡುವೆ ೈಲ್ಸ್ ಕ್ಲಿಯರ್ ಮಾಡಲಿಕ್ಕಾಗಿ- ಕೆಮ್ಮಣ್ಣು ಗುಂಡಿ, ಭದ್ರಾವತಿ, ಅರಮನೆ ಮೈದಾನದ ಅವರ ಗೆಸ್ಟ್ ಹೌಸ್‌ನ ಜಾಗಗಳು ಬದಲಾದವು. ಕೊನೆಗೆ, ‘‘ಸರ್, ನಾನು ೈಲ್‌ನ ರೀಡ್ ಮಾಡಿ, ಆ್ ದ ರೆಕಾರ್ಡ್ ನೋಟ್ ಬರೆದು, ಮಾರ್ಕ್ ಮಾಡಿ ಕಳುಹಿಸುತ್ತೇನೆ. ನೀವು ಆ ನೋಟ್ ನೋಡಿ ಸರಿ ಇದ್ರೆ ಸಹಿ ಮಾಡಿ, ಇಲ್ಲಾಂದ್ರೆ ನನ್ನ ಕರೆದು ಕೇಳಿ, ವಿವರಿಸುತ್ತೇನೆ’’ ಎಂದೆ. ಅದಕ್ಕವರು ‘‘ಮಿ. ಲಿನ್, ದಿಸ್ ಈಸ್ ಗುಡ್ ಐಡಿಯಾ’’ ಎಂದರು. ಹಾಗೆ ಮಾಡುವಾಗ ಯಾವುದೋ ೈಲ್‌ಗೆ ಸಂಬಂಸಿದಂತೆ ತಕರಾರು ಬಂತು. ನಾನು ವಿವರಿಸಿದೆ. ಆಗ ಅರಸರು, ‘‘ನನ್ನನ್ನು ನೀವು ಕನ್ವಿನ್ಸ್ ಮಾಡಿ, ನಿಮ್ಮನ್ನು ನಾನು ಕನ್ವಿನ್ಸ್ ಮಾಡುತ್ತೇನೆ... ಐ ಯಾಮ್ ನಾಟ್ ಓವರ್ ರೂಲಿಂಗ್ ಆನ್ ಯೂ’’ ಎಂದರು. ಅಷ್ಟೆ. ನಾನು ಅವರನ್ನು ನಂಬಿದೆ, ಅವರು ನನ್ನನ್ನು ನಂಬಿದರು. ಹಾಗಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯ ಬರಲೇ ಇಲ್ಲ. ಇದು ಸತತವಾಗಿ 7 ವರ್ಷಗಳ ಕಾಲ ನಡೆಯಿತು. ಹಾನೆಸ್ಟ್ ಅಕಾರಿಗಳ ಪರ ಅರಸು

ೈಲ್ಸ್ ರೀಡ್ ಮಾಡುವುದು, ನೋಟ್ಸ್ ಮಾಡುವುದು, ಸಮ್ಮರಿ ಬರೆಯುವುದು... ಹೀಗೆ ಒಬ್ಬರಿಗೆ ಹೆವಿ ಎನ್ನಿಸುವಷ್ಟು ಕೆಲಸವಿತ್ತು. ಅದನ್ನು ಗಮನಿಸಿದ ರೆಬೆಲೊ ಸಾಹೇಬರು, ಪಿಎಸ್ ಟು ಸಿಎಂ ಪೋಸ್ಟನ್ನು ರಿಡಿಸೈನ್ ಮಾಡಿ, ಸೆಕ್ರೆಟರಿ ಟು ಸಿಎಂ ಅಂತ ಮಾಡಿದರು. ಆ ಸೆಕ್ರೆಟರಿಗೆ ಕೆಲಸದ ಹೊರೆ ಹೆಚ್ಚು ಅನ್ನುವ ಕಾರಣಕ್ಕೆ ಡೆಪ್ಯುಟಿ ಸೆಕ್ರೆಟರಿ ಹುದ್ದೆಯನ್ನು ಕ್ರಿಯೇಟ್ ಮಾಡಿದರು. ಆ ಪೋಸ್ಟಿಗೆ ಎಸ್.ಕೆ.ಹಾಜರ ಎಂಬ ವೆರಿ ಎಫಿಷಿಯಂಟ್, ಹಾನೆಸ್ಟ್ ಆಫೀಸರ್ ಬಂದರು. ಆದರೆ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಏನೋ ಸಮಸ್ಯೆ ಆಗಿ ಕೆಲವು ಮಂತ್ರಿಗಳು ಅವರ ಮೇಲೆ ಚಾಡಿ ಹೇಳಿ, ವರ್ಗಾ ಮಾಡಿಸಲು ಅರಸರ ಮೇಲೆ ಒತ್ತಡ ಹಾಕಿದರು. ಅರಸರು, ‘‘ಏನು, ಹಾಜರ ಮೇಲೆ ಎಲ್ಲರೂ ಕಂಪ್ಲೆಂಟ್ ಮಾಡ್ತಿದ್ದಾರಲ್ಲ’’ ಎಂದು ನನ್ನನ್ನು ಪ್ರಶ್ನಿಸಿದರು. ನಾನು ‘‘ಇಲ್ಲ ಸರ್, ಅವರದ್ದೇನು ತಪ್ಪಿಲ್ಲ, ಹಿ ಹಿಸ್ ವೆರಿಗುಡ್ ಆಫೀಸರ್, ಮ್ಯಾನ್ ಾರ್ ದ ಪೀಪಲ್’’ ಎಂದೆ. ‘‘ಹೌದಾ, ಡಿಸ್ಟರ್ಬ್ ಮಾಡಬೇಡಿ, ಕಂಟಿನ್ಯೂ ಮಾಡಲಿಕ್ಕೇಳಿ’’ ಎಂದರು. ಮಂತ್ರಿಗಳ ದೂರಿಗೆ ಅರಸು ಸೊಪ್ಪು ಹಾಕದೆ ಎಸ್.ಕೆ. ಹಾಜರ ಪರ ನಿಂತರು. ಅದರಿಂದ ನಮಗೆ, ಸಿಎಂ ಕಚೇರಿಯಲ್ಲಿ ಸಲೀಸಾಗಿ ಕೆಲಸ ನಿರ್ವಹಿಸಲು ಅನುಕೂಲವಾಯಿತು.


ಹಾಜರ ವರ್ಗವಾದರು. ಆಗ ಅರಸು, ಆ ಜಾಗಕ್ಕೆ ಚಿರಂಜೀವಿ ಸಿಂಗ್ ಬರಲಿ ಎಂದರು. ಅವರೂ ಕೂಡ ತುಂಬಾ ದಕ್ಷ, ಪ್ರಾಮಾಣಿಕ ಅಕಾರಿ. ಆನಂತರ ಎಸ್.ಕೆ.ದಾಸ್ ಬಂದರು. ರೆಬೆಲೋ, ಹಾಜರ, ಸಿಂಗ್, ದಾಸ್ ಮತ್ತು ನಾನು- ಎಲ್ಲರೂ ಮುಖ್ಯಮಂತ್ರಿಗಳ ಮನಸ್ಸನ್ನು ಅರ್ಥ ಮಾಡಿಕೊಂಡ ಅಕಾರಿಗಳು. ಇನ್ನೂ ಒಂದು ಮುಖ್ಯ ಸಂಗತಿ ಎಂದರೆ ನಾವೆಲ್ಲರೂ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಸಮುದಾಯಗಳಿಗೆ ಸೇರಿದವರು. ಅರಸರ ಸೋಷಿಯಲ್ ಜಸ್ಟೀಸ್ ಇಲ್ಲೂ ಜಾರಿಯಾಗಿತ್ತು- ಯಾರಿಗೂ ಗೊತ್ತಾಗದಂತೆ. ಅರಸರಲ್ಲಿ ಅಹಂ ಇರಲಿಲ್ಲ

ಮುಖ್ಯಮಂತ್ರಿಯಾದ ಹೊಸತರಲ್ಲಿ ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿ ಅವರ ಮನೆ ಇತ್ತು. ಅದು ಅರಸರಿಗೆ ಹಿಡಿಸಲಿಲ್ಲ. ಮಹಾರಾಜರಲ್ಲವೆ, ನನ್ನನ್ನು ಕರೆದು, ‘‘ನೋಡಿ, ನಮ್ಮ ಪಿಡಬ್ಲೂಡಿ ಇಂಜಿನಿಯರ್‌ಗಳು ಹೇಗೆ ಕಟ್ಟಿದ್ದಾರೆ, ಚಿಕ್ಕ ಕಿಟಕಿಗಳು, ವರಾಂಡವೇ ಇಲ್ಲ. ಗಾಳಿ ಬೆಳಕು ಬರಲ್ಲ ಎಂದು ಇಂಜಿನಿಯರ್‌ಗಳ ಕಾರ್ಯಕ್ಷಮತೆ ಬಗ್ಗೆ, ಅಪ್‌ಡೇಟ್ ಆಗದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಆನಂತರ ವಿಶಾಲವಾದ ಬಾಲಬ್ರೂಯಿ ಗೆಸ್ಟ್‌ಹೌಸ್‌ಗೆ ವಾಸ್ತವ್ಯ ಬದಲಿಸಿದರು. ಆಗ ಅರಸರು, ‘‘ಮಿ. ಲಿನ್, ನೀವೂ ಬಂದುಬಿಡಿ, ಅಲ್ಲಿಗೇ’’ ಎಂದರು. ಮನೆಗೆ ಪೂಜೆ ಮಾಡಿದ ದಿನ ನಾನು ನನ್ನ ಮಡದಿಯನ್ನು ಕರೆದುಕೊಂಡು ಬಾಲಬ್ರೂಯಿಗೆ ಹೋಗಿದ್ದೆ. ಅಲ್ಲಿ ನನ್ನ ಮಡದಿ ಅರಸರೊಂದಿಗೆ ಅರ್ಧಂಬರ್ಧ ಕನ್ನಡದಲ್ಲಿ, ಏಕವಚನ-ಬಹುವಚನಗಳನ್ನು ನೋಡದೆ ಮಾತನಾಡುತ್ತಿದ್ದರು. ಆದರೆ ಅರಸು ಅದಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ, ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನೂ ಮರೆತು ನಮ್ಮನ್ನು ಅವರ ಮನೆಯವರಂತೆ ಕಂಡು ಉಪಚರಿಸಿದರು. ನನ್ನ ಮಡದಿಯ ಲಘು ಪ್ರಶ್ನೆಗಳಿಗೆ ಬೇಸರಿಸಿಕೊಳ್ಳದೆ ಉತ್ತರಿಸುತ್ತ್ತಾ, ಆಕೆಯ ಕೈ ಹಿಡಿದು ಅಡುಗೆ ಮನೆಗೆ ಕರೆದು ಕೊಂಡು ಹೋಗಿ, ‘‘ಇದು ನೋಡಿ ನಮ್ಮ ಅಡುಗೆ ಮನೆ’’ ಎಂದೆಲ್ಲ ತೋರಿಸಿ ಸಂಭ್ರಮಿಸಿದ್ದರು. ಕುಷ್ಠರೋಗಿಗಳ ನಡುವೆ ಅರಸು

  ಬಾಲಬ್ರೂಯಿಯಿಂದ ವಿಧಾನಸೌಧಕ್ಕೆ ಒಮ್ಮೆ ಕಾರಿನಲ್ಲಿ ಬರುತ್ತಿರುವಾಗ, ಈಗ ಅರಸು ಪ್ರತಿಮೆ ಇದೆಯಲ್ಲ, ಆ ಜಾಗದಲ್ಲಿ ಒಂದಷ್ಟು ಕುಷ್ಠರೋಗಿಗಳು ಗುಂಪುಗೂಡಿಕೊಂಡು ಕೂತಿದ್ದರು. ಅವರನ್ನು ನೋಡಿದ ಮುಖ್ಯಮಂತ್ರಿ ಅರಸು, ಕಾರ್ ನಿಲ್ಲಿಸು ಎಂದರು. ಕಾರಿನಿಂದ ಇಳಿದು ಒಬ್ಬರೇ ನಡೆದುಕೊಂಡು ಅವರ ಬಳಿಗೆ ಹೋಗಿ, ಅವರ ನಡುವೆ ನಿಂತು, ‘‘ಏನು ನಿಮ್ಮ ಸಮಸ್ಯೆ’’ ಎಂದರು. ಅವರು, ‘‘ನಾವು ಕುಷ್ಠರೋಗಿಗಳು ನಿಜ, ನಮಗೂ ಮಕ್ಕಳಿದಾವೆ, ಜೀವನ ಕಷ್ಟವಿದೆ, ನಮಗಿರುವ ದುಡಿಮೆಯ ದಾರಿ ಎಂದರೆ ಭಿಕ್ಷೆ ಬೇಡುವುದು, ನಿಮ್ಮ ಅಕಾರಿಗಳಿಂದ ನಮಗೆ ತೊಂದರೆಯಾಗುತ್ತಿದೆ, ದಯವಿಟ್ಟು ಭಿಕ್ಷೆ ಬೇಡಲು ಅವಕಾಶ ಕಲ್ಪಿಸಿಕೊಡಿ’’ ಎಂದು ಬೇಡಿಕೊಂಡರು. ‘‘ಹೌದಾ, ನಾನು ವ್ಯವಸ್ಥೆ ಮಾಡುತ್ತೇನೆ’’ ಎಂದು ಹೇಳಿ ಕಳುಹಿಸಿದರು. ವಾಪಸ್ ಕಾರಿಗೆ ಬಂದ ಅರಸು, ‘‘ನೀವು ಕುಷ್ಠರೋಗಿಗಳಿಗೆ ಏನಾದ್ರು ಮಾಡಬೇಕು’’ ಅಂದರು. ನನ್ನ ಗಮನವೆಲ್ಲ ಆ ಕುಷ್ಠರೋಗಿಗಳ ಕಡೆಗಿದ್ದು, ಅರಸು ಅವರು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಂಡಿರಲ್ಲಿಲ್ಲ. ಕುಷ್ಠರೋಗಿಗಳ ಹತ್ತಿರ ಹೋಗಲು ಎಂತಹವರು ಅಸಹ್ಯ ಪಟ್ಟುಕೊಳ್ಳುತ್ತಾರೆ. ಅಂಥದ್ದರಲ್ಲಿ ಅರಸರು ಅವರ ನಡುವೆಯೇ ನಿಂತು, ಅವರ ಕಷ್ಟಗಳನ್ನು ಕೇಳುತ್ತಿದ್ದರಲ್ಲ, ಎಂತಹ ಮಾನವೀಯ ಗುಣ ಅರಸರದು ಎಂದು ಯೋಚಿಸತೊಡಗಿದೆ. ಮಾರನೆ ದಿನ ಎಲ್ಲ ಪೇಪರ್‌ಗಳಲ್ಲಿ ದೊಡ್ಡ ಸುದ್ದಿ. ‘‘ಕುಷ್ಠರೋಗಿಗಳ ಕಷ್ಟಕೋಟಲೆಗಳನ್ನು ಆಲಿಸಿದ ಮುಖ್ಯಮಂತ್ರಿಗಳು, ನನ್ನ ಸೆಕ್ರೆಟರಿಗೆ ಎಲ್ಲವನ್ನು ಹೇಳಿದ್ದೇನೆ, ಅವರು ವ್ಯವಸ್ಥೆ ಮಾಡುತ್ತಾರೆ’’ ಎಂಬ ವರದಿ ಪ್ರಕಟವಾಗಿತ್ತು.

ಇದನ್ನು ನನ್ನ ಮಡದಿ ಓದಿ ನನಗೆ ತೋರಿಸಿ, ‘‘ಏನು ಮಾಡ್ತೀರ್ರಿ’’ ಎಂದರು. ನನಗೆ ಶಾಕ್. ಮುಖ್ಯಮಂತ್ರಿಗಳು ನನಗೆ ಹೇಳಲೇ ಇಲ್ಲವಲ್ಲ. ನೇರವಾಗಿ ಅರಸರ ಬಳಿ ಹೋಗಿ, ‘‘ಏನ್ಸಾರ್ ಇದು’’ ಎಂದೆ. ಅವರು ಅಷ್ಟೇ ಕೂಲಾಗಿ, ‘‘ಏನಾದರೂ ವ್ಯವಸ್ಥೆ ಮಾಡಿ, ಬಡವರು, ನಾವೇ ಮಾಡದಿದ್ದರೆ ಬೇರೆ ಯಾರು ಮಾಡುತ್ತಾರೆ’’ ಎಂದರು. ಅವರಿಗೆ ಊಟ, ವಸತಿ, ಆರೈಕೆ, ಆರೋಗ್ಯ ಸುಧಾರಣೆಯ ಬಗ್ಗೆ ವ್ಯವಸ್ಥೆ ಮಾಡುವುದು, ಭಿಕ್ಷೆ ಬೇಡಲು ಅನುಮತಿಗಾಗಿ ಅಕಾರಿಗಳಿಗೆ ತಿಳಿಸುವುದು... ಇದೆಲ್ಲ ಮುಖ್ಯಮಂತ್ರಿ ಅರಸು ಕುಷ್ಠರೋಗಿಗಳಿಗೆ ಹೇಳಿಬಂದಷ್ಟು ಸುಲಭವಾಗಿರಲಿಲ್ಲ. ಅದಕ್ಕೆ ಸರಕಾರಿ ರೀತಿ-ರಿವಾಜುಗಳಿವೆ, ಕಾಯ್ದೆ ಕಾನೂನುಗಳ ಅಗತ್ಯವಿದೆ. ಅದನ್ನೆಲ್ಲ ಅರಸರಿಗೆ ಮನವರಿಕೆ ಮಾಡಿಕೊಟ್ಟೆ. ಆಮೇಲೆ, ‘‘ನೀವೊಂದು ಕೆಲಸ ಮಾಡಿ, ಆರೋಗ್ಯಸ್ವಾಮಿಗೆ ೆನ್ ಮಾಡಿ’’ ಎಂದರು. ಮಾಡಿ ಕೊಟ್ಟೆ, ಮಾತನಾಡಿದರು. ‘ಅವರಿಗೆ ಹೇಳಿದ್ದೇನೆ, ನೀವು-ಅವರು ಸೇರಿ ಏನಾದ್ರು ಮಾಡಿ’ ಎಂದರು. ನಂತರ ಸುಮನಹಳ್ಳಿಯಲ್ಲಿ ಸ್ವಲ್ಪ ಭೂಮಿಯನ್ನು ಲೀಸ್ ಮೇಲೆ ಪಡೆದು ಪುನರ್ವಸತಿ ಕೇಂದ್ರ ಸ್ಥಾಪಿಸಿದ್ದಾಯಿತು. ಅದೇ ಇವತ್ತಿನ 165 ಎಕರೆ ವಿಸ್ತೀರ್ಣದ ಬೆಗ್ಗರ್ಸ್‌ ಕಾಲನಿ. ಅದು ಅರಸರ ಕೊಡುಗೆ.

ಎಂಪಿಎಂ ನಮ್ಮದು...
ನಿರ್ಗತಿಕರಾದ ಕುಷ್ಠರೋಗಿಗಳ ವಿಷಯದಲ್ಲಿ ದೇವರಾಜ ಅರಸರ ಮಾನವೀಯ ಮುಖ ಕಂಡುಬಂದರೆ, ಎಂಪಿಎಂ ಕಾರ್ಖಾನೆಯನ್ನು ಸರಕಾರದ ಸ್ವಾಮ್ಯಕ್ಕೆ ತೆಗೆದುಕೊಳ್ಳುವ ದೃಢ ನಿರ್ಧಾರದಲ್ಲಿ ಕೈಗಾರಿಕಾಭಿವೃದ್ಧಿ, ಆರ್ಥಿಕತೆ, ನಿರುದ್ಯೋಗ ನಿವಾರಣೆಯ ದೂರದೃಷ್ಟಿ ಗೋಚರಿಸುತ್ತದೆ. ಒಂದಕ್ಕೊಂದು ತದ್ವಿರುದ್ಧ, ಆದರೆ ಎರಡೂ ಜನಪರ.


ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಮೈಸೂರು ಪೇಪರ್ ಮಿಲ್(ಎಂಪಿಎಂ) ಖಾಸಗಿಯವರ ಒಡೆತನದಲ್ಲಿತ್ತು. ಸರಕಾರದ ಸ್ವಾಮ್ಯಕ್ಕೆ ತೆಗೆದುಕೊಳ್ಳುವಲ್ಲಿ ದೇವರಾಜ ಅರಸರು ತೋರಿದ ಧೈರ್ಯ ಮತ್ತು ಇಚ್ಛಾಶಕ್ತಿ ಅಮೋಘವಾದುದು. ಎಂಪಿಎಂ ಕಾರ್ಖಾನೆಯಲ್ಲಿ ಸುಮಾರು ಶೇ. 48 ಶೇರ್‌ಗಳನ್ನು ಜಲಾನ್ ಎಂಬುವವರು ಹೊಂದಿದ್ದರು. ಆ ಶೇರ್‌ಗಳನ್ನು ಖರೀದಿಸಿ, ಕಾರ್ಖಾನೆಯನ್ನು ಸರಕಾರಿ ಸ್ವತ್ತನ್ನಾಗಿ ಮಾರ್ಪಡಿಸಬೇಕು, ಅಭಿವೃದ್ಧಿ ಪಡಿಸಬೇಕು ಎಂದು ಅರಸು ನಿರ್ಧರಿಸಿದರು. ಜಲಾನ್‌ರ ಬಳಿಗೆ, ಸರಕಾರದ ವತಿಯಿಂದ ನಾನು ಮತ್ತು ಅಂದಿನ ಇಂಡಸ್ಟ್ರೀಸ್ ಸೆಕ್ರೆಟರಿ ಕೆಎಸ್‌ಎಲ್ ಮೂರ್ತಿ ಮಾತುಕತೆಗೆ ಹೋದೆವು. ಮೊದಲಿಗೆ ಅವರು ಒಂದು ಶೇರ್‌ಗೆ 20 ರೂ. ಅಂದರು. ನಾನು 18 ರೂ.ಗಳೆಂದೆ. ಹೀಗೆ ಹಗ್ಗ ಜಗ್ಗಾಟ ನಡೆಯುತ್ತಿತ್ತು. ಅದಕ್ಕೆ ಅವರು ನಿಮ್ಮ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ ಎಂದರು. ಆ ಸಮಯದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು, ಮುಂಬೈನಲ್ಲಿದ್ದರು. ಅಲ್ಲಿಗೇ ೆನ್ ಮಾಡಿ, ವಿಷಯ ತಿಳಿಸಿದೆ. ಅದಕ್ಕೆ ಅರಸರು ‘‘ಒಂದು ಶೇರ್‌ಗೆ 20 ರೂ. ಆದರೂ ಪರವಾಗಿಲ್ಲ, ಖರೀದಿಸಿ’’ ಎಂದರು. ನಾನು ಜಲಾನ್‌ರಿಗೆ, ಸಿಎಂ ಒಪ್ಪಿದ್ದಾರೆ ಎಂದೆ. ಅದಕ್ಕವರು ಒಂದೇ ದಿನದಲ್ಲಿ ಹಣ ಕೊಡಬೇಕು ಎಂದರು. ಅದರ ಮೊತ್ತ ಹೆಚ್ಚೂಕಡಿಮೆ ಒಂದು ಕೋಟಿಯಾಗುತ್ತಿತ್ತು. ಆನ್ ಸ್ಪಾಟ್ 96 ಲ್ಯಾಕ್ಸ್ ಸಂಥಿಂಗ್ ಎಲ್ಲಿಂದ ತರುವುದು? ನಾನು ಎರಡು ದಿನ ಟೈಮ್ ಕೊಡಿ ಅಂದೆ. ಅವರು ಬಿಲ್‌ಕುಲ್ ಆಗಲ್ಲ ಎಂದರು.

ಆಗ ಮತ್ತೆ ಅರಸರನ್ನು ಸಂಪರ್ಕಿಸಿದೆ, ಅವರು ಯಾರಿಗೋ ಹೇಳಿ ವ್ಯವಸ್ಥೆ ಮಾಡಿಸಿದರು. ಆಮೇಲೆ ಅದಕ್ಕೆ ಐಡಿಬಿಐನಿಂದ ದೊಡ್ಡ ಮೊತ್ತದ ಸಾಲ ತಂದರು, ಭಾರೀ ಕೈಗಾರಿಕೆಯಾಗುವಂತೆ ಅಭಿವೃದ್ಧಿ ಪಡಿಸಿದರು. ಅದರಿಂದ ಸಾವಿರಾರು ಜನಕ್ಕೆ ಉದ್ಯೋಗ ಸಿಕ್ಕಿತು. ಆಗ ನ್ಯೂಸ್ ಪ್ರಿಂಟ್ ಕೋಟಾ ಸಿಸ್ಟಮ್ ಇತ್ತು. ಎಂಪಿಎಂ ಪೇಪರ್‌ಗೆ ಭಾರೀ ಬೇಡಿಕೆ ಕ್ರಿಯೇಟ್ ಆಯಿತು. ಚೆನ್ನಾಗಿಯೂ ನಡೆಯಿತು. ಅದಕ್ಕಿಂತ ಮುಖ್ಯವಾಗಿ ಖಾಸಗಿ ಒಡೆತನದಲ್ಲಿದ್ದ ಒಂದು ದೊಡ್ಡ ಸಂಸ್ಥೆ ಸರಕಾರಿ ಸ್ವಾಮ್ಯಕ್ಕೆ ಬಂತು. ಅದಕ್ಕೆ ಅರಸರ ವಿಷನ್ ಕಾರಣ.

ನಮ್ಮ ಮಾತಿಗೂ ಬೆಲೆ ಇತ್ತು
ಒಂದು ದಿನ ವಿಧಾನಸೌಧದ ಕಚೇರಿಯ ಕೆಲಸದಲ್ಲಿ ಬ್ಯುಸಿಯಾಗಿದ್ದೆ. ಹೊಸದಾಗಿ ಕೆಲಸಕ್ಕೆ ಸೇರಿದ್ದ ಐಎಎಸ್ ಅಕಾರಿ ಗೋಕುಲ್‌ರಾಂ ಬಂದರು. ‘‘ಸರ್, ಸಿಎಂ ನೋಡಬೇಕಾಗಿತ್ತು’’ ಎಂದರು. ನಾನು ‘‘ಏನ್ ವಿಷಯ’’ ಎಂದೆ. ಅದಕ್ಕವರು, ‘‘ಗೊತ್ತಿಲ್ಲ ಸಾರ್, ಸಿಎಂ ನೋಡಲಿಕ್ಕೆ ಹೇಳಿದ್ದಾರೆ’’ ಎಂದರು. ‘‘ಸರಿ ಕೂತಿರಿ’’ ಎಂದು ಹೇಳಿ ಮುಖ್ಯಮಂತ್ರಿಗಳ ಚೇಂಬರ್‌ಗೆ ಹೋದೆ.

‘‘ಸರ್, ಐಎಎಸ್ ಆಫೀಸರ್ ಗೋಕುಲ್‌ರಾಂ ಬಂದಿದ್ದಾರೆ, ನಿಮ್ಮನ್ನು ನೋಡಬೇಕಂತೆ...’’ ಎಂದೆ. ಗೋಕುಲ್‌ರಾಂ ಹೆಸರು ಹೇಳುತ್ತಿದ್ದಂತೆ ಅರಸು ‘‘ಹಾ... ಹೌದು.. ಬಂದು ನೋಡಲಿಕ್ಕೆ ಹೇಳಿದ್ದೆ... ಅದೇನೋ ಆತ ಚನ್ನಪಟ್ಟಣದಲ್ಲಿ ಅಧ್ವಾನ ಮಾಡಿಟ್ಟಿದ್ದಾನಂತೆ... ಏನಾಗಿದೆ ಇವರಿಗೆಲ್ಲ... ಸ್ವಲ್ಪ ಗಾಳಿ ಬಿಡಿಸಬೇಕು’’ ಎಂದರು. ಮಾತು ಗಡುಸಾಗಿತ್ತು. ಪರಿಸ್ಥಿತಿ ಅರ್ಥವಾಯಿತು. ನಾನು, ‘‘ಸರ್, ಗೋಕುಲ್ ರಾಂ... ಈಗಿನ್ನು ಜ್ಯೂನಿಯರ್ ಆಫೀಸರ್.. ತಪ್ಪು ಮಾಡೋದು ಸಹಜ... ಬುದ್ಧಿ ಮಾತು ಹೇಳಿದರೆ ತಿದ್ದಿಕೋತಾರೆ... ಬೈಯ್ದರೆ ನೈತಿಕ ಸ್ಥೆರ್ಯ ಕಳೆದುಕೊಳ್ಳುತ್ತಾರೆ’’ ಅಂದೆ. ಅದಕ್ಕೆ ಅರಸು ಯೋಚಿಸಿ, ‘ಹೌದಾ.. ಸರಿ ಹಾಗಾದರೆ’ ಅಂದರು. ಗೋಕುಲ್ ರಾಂ ಹೋಗಿ ಮೀಟ್ ಮಾಡಿ ಬಂದರು. ನಾನು, ‘ಸಾಹೇಬ್ರು ಏನಂದ್ರು’ ಅಂದೆ. ‘ಇಲ್ಲ, ಏನನ್ನೂ ಕೇಳಲಿಲ್ಲ’ ಅಂದರು. ಗೋಕುಲ್ ರಾಂ ಗಿರಿಜನ ಸಮುದಾಯಕ್ಕೆ ಸೇರಿದವರು. ಅವರ ಮೇಲೆ ಕೆಲವರು ಸಲ್ಲದ ದೂರು ನೀಡಿ, ಇಕ್ಕಟ್ಟಿಗೆ ಸಿಲುಕಿಸಲು ನೋಡಿದ್ದರು. ಬೈಯ್ಯಬೇಡಿ ಎಂದು ನಾನು ಕೇಳಿಕೊಂಡ ತಕ್ಷಣ ಅರಸರು ಒಪ್ಪಿ ಆಗಲಿ ಎಂದದ್ದು ಅವರ ದೊಡ್ಡ ಗುಣ.

Writer - ನಿರೂಪಣೆ: ಬಸು ಮೇಗಲ್ಕೇರಿ

contributor

Editor - ನಿರೂಪಣೆ: ಬಸು ಮೇಗಲ್ಕೇರಿ

contributor

Similar News