ವೈದ್ಯಕೀಯ ವಿದ್ಯಾರ್ಥಿ ಸಹಿತ ಇಬ್ಬರ ಬಂಧನ

Update: 2016-07-06 10:30 GMT

   ಚೆನ್ನೈ, ಜು.6: ಟೆರೇಸ್‌ನಿಂದ ನಾಯಿಯನ್ನು ಕೆಳಗೆ ಎಸೆದು ವಿಕೃತ ಆನಂದ ಪಟ್ಟಿದ್ದ ವೈದ್ಯಕೀಯ ವಿದ್ಯಾರ್ಥಿ ಹಾಗೂ ಆತನ ಸ್ನೇಹಿತನನ್ನು ತಮಿಳುನಾಡು ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ಚೆನ್ನೈನ ಖಾಸಗಿ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಗೌತಮ್ ಎಸ್. ಹಾಗೂ ನಾಯಿಯನ್ನು ಕೆಳಗೆ ಎಸೆಯುವ ದೃಶ್ಯವನ್ನು ಸೆರೆ ಹಿಡಿದಿದ್ದ ಗೌತಮ್ ಸ್ನೇಹಿತ ಆಶೀಷ್ ಪಾಲ್‌ರನ್ನು ಪ್ರಾಣಿ ದಯಾ ಸಂಘಟನೆಗಳು ಮಂಗಳವಾರ ನೀಡಿರುವ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಪ್ರಧಾನ ಆರೋಪಿ ಗೌತಮ್‌ರನ್ನು ಶ್ರೀಪೆರುಂಬುದೂರ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುತ್ತದೆ. ಈ ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.

ನಾಯಿ ಬಚಾವ್!

ನಾಯಿಯನ್ನು ಟೆರೇಸ್‌ನಿಂದ ಎಸೆಯುವ ವಿಡಿಯೋ ವೈರಲ್‌ನಂತೆ ಹರಿದಾಡುತ್ತಿದ್ದು, ಅದೃಷ್ಟವಶಾತ್ ಟೆರೇಸ್‌ನಿಂದ ಕೆಳಗೆ ಬಿಸಾಡಲ್ಪಟ್ಟಿದ್ದ ನಾಯಿಗೆ ಏನೂ ಆಗಿಲ್ಲ.

ನಾಯಿಯನ್ನು ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಸೇರಿಸಲಾಗಿದ್ದು, ನಾಯಿ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News