ಗೋಹತ್ಯೆ ತಡೆಗೆ ಈಗಿರುವ ಕಾನೂನೇ ಸಾಕು

Update: 2016-07-09 18:09 GMT

ಮಥುರಾ, ಜು.9: ಗೋ ಹತ್ಯೆಯನ್ನು ಈಗಿರುವ ಕಾನೂನುಗಳ ಮೂಲಕವೇ ತಡೆಯಬಹುದೆಂದು ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯ್ಕೆ ಅಭಿಪ್ರಾಯಿಸಿದ್ದಾರೆ.

1935ರಲ್ಲಿ ಮದನಮೋಹನ ಮಾಳ ವೀಯರಿಂದ ಸ್ಥಾಪಿಸಲ್ಪಟ್ಟಿರುವ ಹಾಸಾನಂದ್ ಗೋಚರ್ ಭೂಮಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಗೋಹತ್ಯೆ ವಿರೋಧಿ ಕಾನೂನನ್ನು ಅಕ್ಷರಶಃ ಜಾರಿಗೆ ತಂದರೆ, ಗೋಹತ್ಯೆಯನ್ನು ತಡೆಯಬಹುದು. ಅದಕ್ಕೆ ಜನರೂ ಸಹಕಾರ ನೀಡಬೇಕು. ಆಗ ಭಾರತವು ನಿಜವಾಗಿಯೂ ಕೃಷಿಯ ದೇಶವಾಗಬಹುದೆಂದರು.
ಇದಕ್ಕೆ ಮೊದಲು, ಧವುರೇರಾ ಗ್ರಾಮದ ಮಹಿಳೆಯೊಬ್ಬಳು ನೀರಿನ ಕೊರತೆ ಹಾಗೂ ಬಯಲು ಶೌಚಗಳ ಸಮಸ್ಯೆಯ ಬಗ್ಗೆ ರಾಜ್ಯಪಾಲರಿಗೆ ದೂರು ನೀಡ ಬಯಸಿದ್ದಳು. ಆದರೆ, ಆಕೆಯನ್ನು ತಡೆಯಲಾಯಿತು. ಇದರಿಂದ ರೊಚ್ಚಿಗೆದ್ದ ಮಹಿಳೆ ಪ್ರತಿಭಟನಾರ್ಥವಾಗಿ ತನ್ನಲ್ಲಿದ್ದ ಮಣ್ಣಿನ ಕೊಡವನ್ನು ಒಡೆದು ಅಲ್ಲಿಂದ ನಿರ್ಗಮಿಸಿದಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News