ಮೌಢ್ಯ ನಿಷೇಧ ಕಾಯ್ದೆಗೆ ‘ಮುಹೂರ್ತ’ ಕೂಡಿ ಬಂದಿಲ್ಲ

Update: 2016-07-13 17:10 GMT

ಇಗೋ ಮೌಢ್ಯ!

‘‘ಮೌಢ್ಯ ನಿಷೇಧ ಕಾಯ್ದೆಯಲ್ಲಿ ಈಗಾಗಲೇ ಭಾರತೀಯ ದಂಡ ಸಂಹಿತೆಯಲ್ಲಿ (ಐಇ) ಇಲ್ಲದ್ದು ಏನಿದೆ? ಅದು ಬಹಳ ಞಚಿಜಿಜ್ಠಟ್ಠ ಕಾಯ್ದೆ’’ - ಹೀಗೆಂದು ಮೌಢ್ಯ ನಿಷೇಧ ಕಾಯ್ದೆಯನ್ನು ಮಹಾರಾಷ್ಟ್ರದಲ್ಲಿ ವಿರೋಧಿಸಿದವರು ಇಂದಿನ ಮುಖ್ಯಮಂತ್ರಿಯೂ, ಅಂದಿನ ಪ್ರತಿಪಕ್ಷ ನಾಯಕರೂ ಆಗಿದ್ದ ದೇವೇಂದ್ರ ಫಡ್ನವೀಸ್. ಮುಂದೆ ದಾಭೋಲ್ಕರ್ ಅವರ ಹತ್ಯೆಯ ಬಳಿಕ, 2013 ಡಿಸೆಂಬರ್ ತಿಂಗಳಲ್ಲಿ ಮಹಾರಾಷ್ಟ್ರ ಸರಕಾರ ಈ ಶಾಸನವನ್ನು ಜಾರಿಗೆ ತಂದಿತು.
ಕರ್ನಾಟಕದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕದ ಕರಡು 2013ರಲ್ಲೇ ಸಿದ್ಧಗೊಂಡಿದ್ದರೂ, ಇನ್ನೂ ವಿಧಾನಮಂಡಲ ಹೊಕ್ಕು ಹೊರಬರಲು ಅದಕ್ಕೆ ‘‘ಮುಹೂರ್ತ’’ ಬಂದಿಲ್ಲ. ಮಹಾರಾಷ್ಟ್ರದಲ್ಲಿ ಆದದ್ದು, ಕರ್ನಾಟಕದಲ್ಲಿ ಯಾಕೆ ಆಗೋದಿಲ್ಲ ಎಂದು ಹುಡುಕಿ ಹೊರಟಾಗ ಕಾಣಸಿಕ್ಕಿದ ಅಂಶಗಳಿವು:
1. ಕರ್ನಾಟಕ - ಮಹಾರಾಷ್ಟ್ರಗಳ ಎರಡೂ ಕಾಯ್ದೆಗಳೂ ಬಹುತೇಕ ಒಂದೇ ವಿಧದ್ದೇ ಆಗಿದ್ದು, ಈಗಾಗಲೇ ಭಾರತೀಯ ದಂಡಸಂಹಿತೆಯ ಬೇರೆ ಕಲಮುಗಳಲ್ಲಿ ಅಪರಾಧ ಎಂದು ವಿಧಿಸಲಾಗಿರುವ ವಿಚಾರಗಳೇ ಈ ಕಾಯ್ದೆಯಲ್ಲೂ ಇವೆ.
2. ಮಹಾರಾಷ್ಟ್ರದ ಕಾಯ್ದೆ ಸ್ವಲ್ಪವಿಶಾಲ ತಳಹದಿ ಹೊಂದಿದ್ದು, ಯಾವುದೆಲ್ಲ ಈ ಕಾಯ್ದೆಯ ಅಡಿ ಬರುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದೆ. ಕರ್ನಾಟಕದ ಕರಡು, ಮಹಾರಾಷ್ಟ್ರದ ಕಾಯ್ದೆಯ ಹಾದಿಯಲ್ಲೇ ಇದ್ದರೂ ಅನುಷ್ಠಾನಕ್ಕೆ ಕುರಿತಾದಂತೆ ಮಹಾರಾಷ್ಟ್ರದ್ದಕ್ಕಿಂತ ಹೆಚ್ಚು ಖಚಿತವಾದ ಹಾದಿಯನ್ನು ಹೊಂದಿದೆ.
3. ಕರ್ನಾಟಕದ ಕರಡಿನಲ್ಲಿ ಮಹಾರಾಷ್ಟ್ರದ ಕಾಯ್ದೆಗೆ ಹೊರತಾಗಿ ನಿರ್ದಿಷ್ಟವಾಗಿರುವ ಮತ್ತು ಹೆಚ್ಚಿನಂಶ ಇದನ್ನು ವಿರೋಧಿಸುತ್ತಿರುವವರ ಕೆಂಗಣ್ಣಿಗೆ ಗುರಿಯಾಗಿರುವ ಅಂಶಗಳೆಂದರೆ: ಸಿಡಿ ಆಚರಣೆ, ಮಕ್ಕಳನ್ನು ಮುಳ್ಳುಗಳ ಮೇಲೆ ಎಸೆಯುವುದು, ದುರ್ಬಲ ವರ್ಗದ ಮಹಿಳೆಯರ ಮೇಲೆ ಓಕುಳಿ ನೀರೆರಚುವುದು, ಪ್ರಾಣಿ ಹಿಂಸೆ, ಮಡೆಸ್ನಾನ, ಪಾದರಕ್ಷೆ ತಲೆಯ ಮೇಲೆ ಒಯ್ಯುವುದು, ಆಹಾರ ವಿತರಣೆಯಲ್ಲಿ ಜಾತಿ-ಪಂಕ್ತಿ ಭೇದ, ಭವಿಷ್ಯ ಹೇಳಿ ಆರ್ಥಿಕ ಹಾನಿ ಮಾಡುವುದು.
ಯಾವುದು ವಿರೋಧದ ಮೂಲ?
ಕರ್ನಾಟಕದ ಕರಡಿನಲ್ಲಿ ನಿರ್ದಿಷ್ಟವಾಗಿ ಹೇಳಿರುವ ಅಂಶಗಳೆಲ್ಲ ಅಮಾನವೀಯವಾಗಿದ್ದರೂ, ರಾಜ್ಯದಲ್ಲಿ ಅಲ್ಲಲ್ಲಿ ಬೇರೆ ಬೇರೆ ಮುಸುಕುಗಳಲ್ಲಿ ಇನ್ನೂ ಆಚರಣೆಯಲ್ಲಿರುವುದು; ಈ ಬಗ್ಗೆ ವಾದ ವಿವಾದಗಳು ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ನಾಗರಿಕ ಸಮಾಜ ನಿಜವಾಗಿಯೂ ನಾಗರಿಕ ಅನ್ನಿಸಿಕೊಳ್ಳಲು ಇವತ್ತಲ್ಲ ನಾಳೆ ಇವು ಜಾರಿಗೆ ಬರಲೇ ಬೇಕು ಎಂಬುದರಲ್ಲಿ ಸಂಶಯ ಇಲ್ಲ.
 ಆದರೆ, ಈ ಕರಡನ್ನು ರಾಜಕೀಯ ನೆಲೆಯಲ್ಲಿ ವಿರೋಧಿಸುವವರು ಈ ಅಂಶಗಳನ್ನು ನೇರವಾಗಿ ಎತ್ತದೆ, ಧಾರ್ಮಿಕ ಆಚರಣೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ, ಜನರಲ್ಲಿ ಚರ್ಚೆ ಮಾಡದೇ ಯಾರೋ ಕೆಲವರು ತಯಾರಿಸಿದ ಕಾಯ್ದೆ ಎಂದೆಲ್ಲ ಚಿಛಿಠಿಜ್ಞಿಜ ಚ್ಟಟ್ಠ್ಞ ಠಿಛಿ ಚ್ಠಿ ನಡೆಸಿದ್ದಾರೆ. ಜೊತೆಗೆ, ಆಳುವ ಪಕ್ಷದಲ್ಲೇ ಈ ಕಾಯ್ದೆಯ ಬಗ್ಗೆ ಅನುಮಾನಗಳು, ಅಸಮಾಧಾನಗಳೂ ಇದ್ದಂತಿದೆ.

ಒಂದು ರಾಜಿ ಪಂಚಾಯಿತಿ!
                     ಈ ಇಗೋಗಳ ಸಂಘರ್ಷದಲ್ಲಿ, ಮಾನವೀಯ ಕಾಯ್ದೆಯೊಂದು ಹೊರಬರದೇ ನನೆಗುದಿಗೆ ಬೀಳುವ ಸ್ಥಿತಿ ಇದು. ಇದಕ್ಕೆ ಸರಳ ಪರಿಹಾರ ಎಂದರೆ, ಹೆಚ್ಚಿನಂಶ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿರುವಷ್ಟು ಅಂಶಗಳನ್ನು ಕರ್ನಾಟಕದಲ್ಲೂ ತಕ್ಷಣ ಜಾರಿಗೆ ತರುವುದು. ಅದಕ್ಕೆ ಯಾವುದೇ ಪಕ್ಷದ ತಕರಾರು ಇರಲಾರದು. ಅದಾದ ಮೇಲೆ, ಹಂತ ಹಂತವಾಗಿ ಉಳಿದ ಅಮಾನವೀಯ ಅಂಶಗಳನ್ನು ಕಾಯ್ದೆಗೆ ಸೇರಿಸಲು ಅವಕಾಶ ಯಾವತ್ತಿಗೂ ಇದೆ. ಕರಡು ಈಗ ಎತ್ತಿರುವ ನಿರ್ದಿಷ್ಟ ಅಂಶಗಳ ಬಗ್ಗೆ ಮುಂದೆ ಒಂದೊಂದಾಗಿ ಚರ್ಚೆ ನಡೆದರೆ, ಯಾವುದು ಮಾನವೀಯ ಯಾವುದು ಅಮಾನವೀಯ ಎಂದು ನೇರಾನೇರ ಹೊರಬರುವ ಅವಕಾಶ ಇರುವಾಗ, ಈ ಮುಸುಕು ಹಾಕಿ ಗುದ್ದಾಡುವ ಗೊಡವೆ ಯಾಕೆ?

ಕೃಪೆ: ಅವಧಿ

Writer - ರಾಜಾರಾಂ ತಲ್ಲೂರು

contributor

Editor - ರಾಜಾರಾಂ ತಲ್ಲೂರು

contributor

Similar News

ನಾಸ್ತಿಕ ಮದ