ಕೇರಳದಲ್ಲಿ ಮಾದಕ ವಸ್ತು ಬಳಕೆಯಲ್ಲಿ ವೃದ್ಧಿ!: ಅಬಕಾರಿ ಸಚಿವ

Update: 2016-07-15 09:40 GMT

ತಿರುವನಂತಪುರಂ,ಜುಲೈ 15: ಪಾನನಿರೋಧ ಜಾರಿಗೆ ಬಂದ ನಂತರ ಕೇರಳದಲ್ಲಿ ಮಾದಕವಸ್ತು ಬಳಕೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಅಬಕಾರಿ ಸಚಿವ ಟಿಪಿ ರಾಮಕೃಷ್ಣನ್ ಹೇಳಿದ್ದಾರೆಂದು ವರದಿಯಾಗಿದೆ. ಈ ವಿಷಯವನ್ನು ಅವರು ಕೇರಳ ವಿಧಾನಸಭೆಯಲ್ಲಿ ತಿಳಿಸಿದ್ದು ಅಬಕಾರಿ ಇಲಾಖೆ 2013 ರಿಂದ ದಾಖಲಿಸಿಕೊಂಡ ಪ್ರಕರಣಗಳ ಆಧಾರದಲ್ಲಿ ಈ ಮಾಹಿತಿ ನೀಡಿದ್ದಾರೆಂದು ವರದಿತಿಳಿಸಿದೆ.

2013-2014ರಲ್ಲಿ ಇಂತಹ 860 ಪ್ರಕರಣಗಳು ರಾಜ್ಯದಲ್ಲಿ ಅಬಕಾರಿ ಇಲಾಖೆ ದಾಖಲಿಸಿಕೊಂಡಿದೆ. 2014-15ರಕ್ಕಾಗುವಾಗ ಇದು 1021ರಷ್ಟು ಹೆಚ್ಚಳವಾಯಿತು. 2015-16ರಲ್ಲಿ 1704 ಕ್ಕೆ ತಲುಪಿದ್ದು 614 ಕೆಜಿ ಗಾಂಜಾವನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರುತಿಳಿಸಿದ್ದಾರೆಂದು ವರದಿತಿಳಿಸಿದೆ.

ಮಾದಕವಸ್ತು ಬಳಕೆಯಲ್ಲದೆ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿಯೂ ಭಾರೀ ವೃದ್ಧಿಯಾಗಿದೆ. ಬಿವರೇಜ್ ಶಾಪ್‌ಗಳಲ್ಲಿ ಬಿಯರ್ ಮಾರಾಟದಲ್ಲಿ ಶೇ.61ರಷ್ಟು ಹೆಚ್ಚಳವಾಗಿದೆ ಎಂದುಸಚಿವರುತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News