ಕಾಶ್ಮೀರದಲ್ಲಿ ಪತ್ರಿಕಾ ಕಚೇರಿಗಳ ಮೇಲೆ ಪೊಲೀಸ್ ದಾಳಿ

Update: 2016-07-16 08:44 GMT

ಶ್ರೀನಗರ, ಜು.16:ಮೊಬೈಲ್ ದೂರವಾಣಿ ಮತ್ತು ಅಂತರ್ಜಾಲ ಸೇವೆ ವಂಚಿತ ಕಾಶ್ಮೀರದಲ್ಲಿ ದಿನಪತ್ರಿಕೆಗಳನ್ನು ಓದುವ ಸ್ವಾತಂತ್ರ‍್ಯಕ್ಕೆ ಸರಕಾರ ಕಡಿವಾಣ ಹಾಕಿದ್ದು, ಶುಕ್ರವಾರ ತಡರಾತ್ರಿ ಉರ್ದು ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಮುದ್ರಣಾಲಯಗಳ ಮೇಲೆ   ದಾಳಿ ಮಾಡಿ ಪತ್ರಿಕೆಗಳನ್ನು  ವಶಪಡಿಸಿಕೊಂಡಿದ್ದಾರೆ.

 ಮುದ್ರಣ ಕಚೇರಿಗಳ ಸಿಬ್ಬಂದಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 
'ಗ್ರೇಟರ್ ಕಾಶ್ಮೀರ್' ಪತ್ರಿಕೆಯ ಮುದ್ರಣ ಪ್ಲೇಟ್ ಗಳನ್ನು,'ಇಂಗ್ಲಿಷ್ ದಿನಪತ್ರಿಕೆ, ಕಾಶ್ಮೀರ್ ರೀಡರ್' ,ಉರ್ದು ದಿನಪತ್ರಿಕೆ 'ಕಾಶ್ಮೀರ್ ಉಜ್ಮಾ'ದ 50 ಸಾವಿರ ಮುದ್ರಿತ ಪ್ರತಿಗಳನ್ನು ವಶಪಡಿಸಿಕೊಂಡು ಮುದ್ರಣ ಕಚೇರಿಗಳನ್ನು ಮುಚ್ಚಿಸಿದ್ದಾರೆ ಎನ್ನಲಾಗಿದೆ.
 ಎರಡು ಘಂಟೆಗೆ ರಂಗ್ರೇತ್ ನ ಕೆಟಿ ಮುದ್ರಣ ಕಚೇರಿ ಮೇಲೆ ದಾಳಿ ಮಾಡಿ ಎಂಟು ಮಂದಿ ಸಿಬಂದಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  
ಕಾಶ್ಮೀರ್ ರೀಡರ್, ತಮೀಲ್ ಈ ಇರ್ಷಾದ್, ಕಾಶ್ಮೀರ್ ಟೈಮ್ಸ್, ಕಾಶ್ಮೀರ್ ಒಬ್ಸರ್ವರ್, ದ ಕಾಶ್ಮೀರ್ ಮಾನಿಟರ್, ಬ್ರೈಟರ್ ಕಾಶ್ಮೀರ್, ಕಾಶ್ಮೀರ್ ಏಜ್ ಪತ್ರಿಕೆಗಳನ್ನು ಮುದ್ರಿಸದಂತೆ ಪೊಲೀಸರು ತಡೆಯೊಡ್ಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News