ನಿರ್ಲಕ್ಷ್ಯದ ವಾಹನ ಚಾಲನೆ: ಕೇರಳದ ದಾದಿಗೆ ಇಂಗ್ಲೆಂಡ್‌ನಲ್ಲಿ 5 ವರ್ಷ ಜೈಲು

Update: 2016-07-17 07:35 GMT

   ತೊಡುಪುಯ,ಜುಲೈ 17: ಕೇರಳದ ತೊಡುಪುಯ ಎಂಬಲ್ಲಿನ ದಾದಿಯೊಬ್ಬರಿಗೆ ನಾಟಿಂಗ್‌ಹ್ಯಾಮ್ ನ್ಯಾಯಾಲಯವೊಂದು ಐದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ವರದಿಯಾಗಿದೆ. 2014 ನವೆಂಬರ್‌ನಲ್ಲಿ ಲೆಸ್ಟರ್‌ಗೆ ಸಮೀಪದಲ್ಲಿ ನಡೆದ ಅಪಘಾತದಲ್ಲಿ ಒಬ್ಬರು ಮೃತರಾಗಿದ್ದು ಅನೇಕ ಮಂದಿ ಗಾಯಗೊಂಡಿದ್ದರು.ಮೊಬೈಲ್‌ಫೋನ್‌ನಲ್ಲಿ ಮಾತಾಡುತ್ತಾ ವಾಹನ ಚಾಲನೆ ಮಾಡುತ್ತಿದ್ದುದು ಸಾಬೀತಾಗಿದೆ. ದಾದಿಯ ಕಾರು ಢಿಕ್ಕಿಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತರಾಗಿದ್ದು, ಹಲವು ಮಂದಿ ಗಾಯಗೊಂಡಿದ್ದರೆನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರ ಸಾಕ್ಷ್ಯ ಮತ್ತು ಮೊಬೈಲ್ ಫೋನ್‌ನ ದಾಖಲೆಗಳನ್ನು ನಾಶಪಡಿಸಿದ್ದು ದಾದಿಗೆ ಶಿಕ್ಷೆ ನೀಡಲು ನ್ಯಾಯಾಲಯಕ್ಕೆ ಸಹಕಾರಿಯಾಗಿತ್ತು ಎನ್ನಲಾಗಿದೆ. ನಿರ್ಲಕ್ಷ್ಯದ ಚಾಲನೆ, ಕಾನೂನು ವ್ಯವಸ್ಥೆಯನ್ನು ಬುಡಮೇಲು ಗೊಳಿಸಲು ಶ್ರಮಿಸಿದ್ದು, ಮೊಬೈಲ್ ದಾಖಲೆಯನ್ನು ನಾಶಪಡಿಸಿದ್ದು ಇತ್ಯಾದಿ ಆರೋಪಗಳನ್ನು ಮೂವತ್ತೆಂಟು ವರ್ಷದ ಈ ದಾದಿಯ ವಿರುದ್ಧ ಹೊರಿಸಲಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News