ಮಾಯಾವತಿ ಮಾನಹಾನಿ ವಿವಾದ : ದಯಾಶಂಕರ್ ನಾಲಗೆಗೆ 50 ಲಕ್ಷ ರೂ. ಬಹುಮಾನ!

Update: 2016-07-21 13:19 GMT

ಹೊಸದಿಲ್ಲಿ, ಜು.21: ಬಿಎಸ್ಪಿ ನಾಯಕಿ ಮಾಯಾವತಿಯವರ ವಿರುದ್ಧ ಮಾನ ಹಾನಿಕರ ಹೇಳಿಕೆ ವಿರುದ್ಧ ದಯಾಶಂಕರ ಸಿಂಗ್‌ಗೆ ಮಾಯಾವತಿಯವರ ಪಕ್ಷವು ಅಷ್ಟೇ ಅವಿವೇಕದ, ವಿರುದ್ಧ ಪ್ರತಿಕ್ರಿಯೆಯನ್ನು ನೀಡಿದೆ.

ಚಂಡಿಗಡದ ಬಿಎಸ್ಪಿ ಅಧ್ಯಕ್ಷೆ ಜನ್ನತ್ ಜಹಾನ್ ‘ದಯಾಶಂಕರ ಸಿಂಗರ ನಾಲಿಗೆ ಕತ್ತರಿಸಿದವರಿಗೆ’ ರೂ. 50 ಲಕ್ಷ ಬಹುಮಾನ ಘೋಷಿಸಿದ್ದಾರೆ. ಅದಾಗಿ, ಕೆಲವೇ ತಾಸುಗಳಲ್ಲಿ ಉತ್ತರಪ್ರದೇಶದ ಬಿಎಸ್ಪಿ ಶಾಸಕಿ ಉಷಾ ಚೌಧರಿ, ಸಿಂಗ್‌ರ ವಂಶವಾಹಿಯಲ್ಲಿ ದೋಷವಿದ್ದು, ಅವರು ಹಾದರಕ್ಕೆ ಹುಟ್ಟಿದವರೆಂದು ನಾಲಿಗೆ ಹರಿಯಬಿಟ್ಟಿದ್ದಾರೆಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರಪ್ರದೇಶವು ಚುನಾವಣೆಗೆ ಸಿದ್ಧವಾಗುತ್ತಿದ್ದು, ಕಳೆದ ಚುನಾವಣೆಯನ್ನು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್‌ರಿಗೆ ಸೋತಿದ್ದ ಮಾಯಾವತಿ, ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಯೇರುವ ಆಸೆಯಲ್ಲಿದ್ದಾರೆ. ಅವರಿಗೆ ದಲಿತರೇ ಅತಿ ದೊಡ್ಡ ಬೆಂಬಲವಾಗಿದ್ದಾರೆ.
ನಿನ್ನೆಯಷ್ಟೇ ಈ ವಿವಾದದಲ್ಲಿ ತನಗೆ ಬೆಂಬಲ ನೀಡಿದ ಬಿಜೆಪಿ ಸಹಿತ ಎಲ್ಲ ಪಕ್ಷಗಳಿಗೂ ಕೃತಜ್ಞತೆ ಸಲ್ಲಿಸಿದ್ದ ಮಾಯಾವತಿ, ದಯಾಶಂಕರ ಸಿಂಗ್‌ರ ಉಚ್ಚಾಟನೆಯು ಬಿಜೆಪಿಯ ಅಪರ್ಯಾಪ್ತ ಕ್ರಮವಾಗಿದೆ. ಅದು ಸಾಕಾಗದು. ಅವರನ್ನು 36 ತಾಸುಗಳೊಳಗೆ ಬಂಧಿಸುವ ಭರವಸೆಯನ್ನು ತನಗೆ ನೀಡಲಾಗಿತ್ತು. ಅದಕ್ಕಾಗಿಯೇ ಬಿಎಸ್ಪಿ ಇಂದು ಮುಂಜಾನೆ ಲಕ್ನೊದಲ್ಲಿ ನಡೆಯಲಿದ್ದ ಭಾರೀ ಪ್ರತಿಭಟನೆಯನ್ನು ಹಿಂದೆಗೆಯಲು ಪಕ್ಷ ಒಪ್ಪಿಕೊಂಡಿತ್ತೆಂದು ಪ್ರತಿಪಾದಿಸಿದ್ದಾರೆ.
 ತನ್ನನ್ನು ಜನರು ಕೇವಲ ಸೋದರಿಯೆಂದು ಮಾತ್ರ ಪರಿಗಣಿಸಿಲ್ಲ. ಬದಲಿಗೆ ತಾನೊಬ್ಬಳು ದೇವಿಯೆಂದು ಗೌರವಿಸುತ್ತಾರೆಂದು ಉಷಾ ಚೌಧರಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News