ಹಿಂದುಳಿದ ವರ್ಗ, ಅಲ್ಪಸಂಖ್ಯಾತರನ್ನು ಮೋದಿ ಸರಕಾರ ಬೇಟೆಯಾಡುತ್ತಿದೆ:ಮುಸ್ಲಿಂ ಲೀಗ್

Update: 2016-07-22 08:26 GMT

ಹೊಸದಿಲ್ಲಿ,ಜುಲೈ 22: ಮೋದಿ ಸರಕಾರ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವಿಭಾಗದಜನರನ್ನು ಬೇಟೆಯಾಡುತ್ತಿದ್ದುಇದನ್ನು ಪ್ರತಿರೋಧಿಸಲಿಕ್ಕಾಗಿ ದೇಶೀಯ ಮಟ್ಟದಲ್ಲಿ ಒಕ್ಕೂಟವೊಂದನ್ನು ರಚಿಸಲು ದಿಲ್ಲಿಯಲ್ಲಿ ಸೇರಿದ ಮುಸ್ಲಿಂ ಲೀಗ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.ದೇಶದ ಬಹುತ್ವಕ್ಕೆ ವಿರುದ್ಧ ಚಟುವಟಿಕೆಗಳನ್ನು ತಡೆಯಲಿಕ್ಕಾಗಿ ಎಡ ಪಕ್ಷಗಳು ಸಹಿತ ಸಮಾನ ಚಿಂತನಾಗತಿಯ ಜನರೊಂದಿಗೆ ವಿಷಯಾಧಾರಿತ ಸಹಕಾರ ನೀಡಲು ತಾನು ಸಿದ್ಧ ಎಂದು ಲೀಗ್ ಈ ಸಭೆಯಲ್ಲಿ ಘೋಷಿಸಿದೆ ಎಂದು ವರದಿಯಾಗಿದೆ.

 ಹಿಂದುಳಿದ ವಿಭಾಗ, ಅಲ್ಪಸಂಖ್ಯಾತರನ್ನು ದೇಶದ ವಿವಿಧ ಕಡೆಗಳಲ್ಲಿ ದಮನಿಸಲಾಗುತ್ತಿದ್ದು ಅವರು ಅಸ್ತಿತ್ವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ಬೆಟ್ಟು ಮಾಡಿ ಲೀಗ್ ಕಾರ್ಯಕಾರಿಣಿ ಎಂಟು ಠರಾವುಗಳನ್ನು ಈ ವಿಷಯದಲ್ಲಿ ಮುಂದಿಟ್ಟಿದೆ ಎಂದು ತಿಳಿದು ಬಂದಿದೆ. ಸಮಾನ ಸಿವಿಲ್ ಕೋಡ್ ಹೇರುವ ಯತ್ನದ ಮೂಲಕ ಸಮಾಜದಲ್ಲಿ ಒಡಕು ಸೃಷ್ಟಿಸುವುದರ ವಿರುದ್ಧ ಸಮಾನ ಚಿಂತನಾಗತಿಯವರ ಅಖಿಲಭಾರತ ಮಟ್ಟದ ಸಭೆ ಕರೆಯಲು ಲೀಗ್ ಕಾರ್ಯಕಾರಿಣಿ ನಿರ್ಧರಿಸಿದೆ.ಸಮಾನ ಸಿವಿಲ್ ಕೋಡ್ ವಿರೋಧಿ ದಿನವನ್ನು ಆಚರಿಸಲು ನಿರ್ಧರಿಸಿದೆ ಮತ್ತು ತಮ್ಮತಮ್ಮ ವಿಶ್ವಾಸ ರಕ್ಷಣೆ ಮಾಡಿಕೊಳ್ಳುವ ಸ್ವಾತಂತ್ರ್ಯಕ್ಕೆ ಹಾನಿಯಾದ ಸಂವಿಧಾನದ 44ನೆ ಪರಿಚ್ಛೇದವನ್ನು ರದ್ದುಪಡಿಸಲು ಆಗ್ರಹಿಸಲು ಲೀಗ್ ರಾಷ್ಪ್ರೀಯ ಕಾರ್ಯಕಾರಿಣಿ ನಿರ್ಧರಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News