ದಬ್ಬಾಳಿಕೆ ಸಾಕು ದಲಿತರ ಆತ್ಮಗೌರವ ರಕ್ಷಿಸಬೇಕು

Update: 2016-07-23 18:29 GMT

ಳೆದ 20 ವರ್ಷಗಳಿಂದ ಸತ್ತ ಹಸು ಹಾಗೂ ಪ್ರಾಣಿಗಳಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದೇನೆ. ಈ ಕೆಲಸದಲ್ಲಿ ಯಾವ ವೈಭವವೂ ಇಲ್ಲ. ನನ್ನ ಬೆನ್ನ ಮೇಲೆ ಈಗಲೂ 50 ಕೆ.ಜಿ. ತೊಗಲು ಇದೆ. ನಮ್ಮಿಂದ ಯಾರು ಕೂಡಾ ಒಂದು ಲೋಟ ನೀರನ್ನೂ ಕುಡಿಯುವುದಿಲ್ಲ. ಇದಕ್ಕಾಗಿ ವಿಷಾದ ಇಲ್ಲ. ನಿಮಗೆ ನೀರು ಕುಡಿಯಲು ಮನಸ್ಸಿಲ್ಲದಿದ್ದರೆ ಕುಡಿಯಬೇಡಿ.

ಅರುವತ್ತರ ಹೊಸ್ತಿಲಲ್ಲಿರುವ ವಿಜಯ್ ದೇವನ್ ಹೇಳುವಂತೆ ಅವರಿಗೆ ಯಾವ ಜಾತಿಯೂ ಇಲ್ಲ; ಧರ್ಮ ವೂ ಇಲ್ಲ. ಆದರೆ ತನ್ನ ತಂದೆ ಹಾಗೂ ತಾಯಿ ಬ್ರಾಹ್ಮಣ ರು ಎಂದು ಹೇಳುವಾಗ ಮನಸ್ಸು ತಿವಿಯುತ್ತದೆ.ಬ್ರಾಹ್ಮಣ ಕುಟುಂಬದ ಒಬ್ಬ ಈ ವೃತ್ತಿಯನ್ನು 1982ರಲ್ಲಿ ಅಪ್ಪಿಕೊಳ್ಳುವ ಛಾತಿ ಬೆಳೆಸಿಕೊಂಡದ್ದು, ಭಾರತೀಯ ಸಮಾಜದ ಜಾತಿ ಪದ್ಧತಿಯ ವಿಷವನ್ನು ತೊಡೆದು ಹಾಕುವ ಸಲುವಾಗಿ ಎನ್ನುವುದು ಕಲ್ಪನೆಗೂ ನಿಲುಕದ್ದು. ಗೋ ಪಹರೆ ಬಗೆಗೆ ದೇಶಾದ್ಯಂತ ಎದ್ದಿರುವ ವಿವಾದದ ನಡುವೆಯೂ ವಿಜಯ್ ದೀವನ್ ಅವರನ್ನು ಪರಿಚಯಿ ಸಬೇಕು ಎಂಬ ಯೋಚನೆ ಬಂದದ್ದು ಇದೇ ಕಾರಣಕ್ಕೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ವಿಜಯ್ ದೇವನ್ ತಮ್ಮ ನಿರ್ಧಾರವನ್ನು ಕುಟುಂಬದವರಿಗೆ ತಿಳಿಸಿದರು. ಅವರಿಗೆ ಅಂತಹ ದೊಡ್ಡ ಪ್ರತಿರೋಧವೇನೂ ಎದುರಾಗಲಿಲ್ಲ. ಯುವಕರಿದ್ದಾಗಲೇ ಗಾಂಧಿಯವರ ಅನುಯಾಯಿ ಆದರು. ತೀರಾ ಸಹಾನುಭೂತಿಯ ಯುವಕ, ಸಮಾಜ ಸುಧಾರಕ ವಿನೋಬಾ ಭಾವೆಯವರ ಹುಟ್ಟೂರಿ ನಲ್ಲಿ ಜೀವನ ಸಾಗಿಸುವ ಸಲುವಾಗಿ ಮುಂಬೈ ಮಹಾ ನಗರದಿಂದ 100 ಕಿಲೋಮೀಟರ್ ದೂರದ ಗಾಗೊಡೆ ಗ್ರಾಮಕ್ಕೆ ಬಂದರು. ತಮ್ಮ ಜೀವನದ ಉಳಿದ ಭಾಗವನ್ನು ಅಲ್ಲೇ ಕಳೆದರು.

ಈ ಕೆಲಸದಿಂದಾಗಿ ಅಸ್ಪಶ್ಯತೆಯನ್ನು ದಲಿತರ ಮೇಲೆ ಹೇರಲಾಗಿದೆ. ಈ ಕಾರಣದಿಂದ ಅವರು ಇದನ್ನು ತೊರೆಯಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಗಾಂಧಿ ಕೂಡಾ ಇದರಲ್ಲಿ ನಂಬಿಕೆ ಇಟ್ಟಿದ್ದರು. ವಿನೋಬಾ ಭಾವೆ ಕೂಡಾ ಹಾಗೆ ಮಾಡಿದರು. ಆದರೆ ಯಾರಾ ದರೂ ಆ ಬಗ್ಗೆ ಕೆಲಸ ಮಾಡಬೇಕು. ಆದ್ದರಿಂದ ನಾನು ಮಾಡುತ್ತಿದ್ದೇನೆ ಎಂದರು. ವಿಜಯ್ ದೇವರ್ ಅವರು ಹೇಳುತ್ತಿದ್ದುದನ್ನು ಕೇಳಿದಾಗ, ಯಾವ ಸಮಾಜವಾದದ ದಪ್ಪ ಪುಸ್ತಕ ಓದುವುದೂ ಬೇಡ ಎನಿಸಿತು. ದನದ ಚರ್ಮದ ಕೆಲಸ ಮಾಡುವುದರಲ್ಲಿ ಯಾವ ಗೌರವವೂ ಇಲ್ಲ. ಇದು ಆದಾಯ ಗಳಿಸಿಕೊಟ್ಟರೂ, ಯಾವ ಗೌರವ ವೂ ಇಲ್ಲದ್ದನ್ನು ದಲಿತರು ಏಕೆ ಮಾಡಬೇಕು? ಸತ್ತ ದನದ ಚರ್ಮವನ್ನು ಬೇರೆಯವರು ತೆಗೆಯಬೇಕು ಎಂದು ಮೇಲ್ವರ್ಗದವರು ಬಯಸುತ್ತಾರೆ ಎಂದಾದರೆ ಅವರು ಕೂಡಾ ಅದನ್ನು ಮಾಡಬೇಕೆಂದು ದೇವನ್ ಹೇಳಿದರು.

ದನದ ತೊಗಲು ಗ್ರಾಮಗಳ ನೈಸರ್ಗಿಕ ಆಸ್ತಿ ಎನ್ನುವುದನ್ನು ಖಚಿತಪಡಿಸಬೇಕು. ಪ್ರತೀ ದನದ ಕೊಟ್ಟಿಗೆ ಪಕ್ಕವೂ ಒಂದು ಚರ್ಮಶಾಲೆ ಇರಬೇಕು ಎಂದು ಗಾಂಧೀಜಿ ಹೇಳುತ್ತಿದ್ದರು. ಪ್ರತೀ ವರ್ಷ ಪ್ರತೀ ಗ್ರಾಮದಲ್ಲಿ 10 ರಿಂದ 12 ಹಸುಗಳು ಸಾಯುತ್ತವೆ. ಇವುಗಳ ಚರ್ಮ ಗ್ರಾಮ ಆರ್ಥಿಕತೆಯ ಒಂದು ಭಾಗ. ಕಚ್ಚಾ ತೊಗಲು 700 ರೂಪಾಯಿಗೆ ಮಾರಾಟವಾ ಗುತ್ತದೆ. ಅದನ್ನು ಸುಣ್ಣದೊಂದಿಗೆ ಸಂಸ್ಕರಿಸಿದಾಗ ಅದರ ವೌಲ್ಯ 2,000 ರೂಪಾಯಿ ಆಗುತ್ತದೆ. ಮಹಾ ರಾಷ್ಟ್ರದಲ್ಲಿ 40 ಸಾವಿರ ಗ್ರಾಮಗಳಿವೆ. ಅಂದರೆ ಸುಮಾರು 40 ಕೋಟಿ ಆದಾಯ ಇದರಿಂದ ಬರುತ್ತದೆ. ಈ ಚರ್ಮದಿಂದ ಶೂ ಹಾಗೂ ಇತರ ವಸ್ತುಗಳನ್ನು ತಯಾರಿಸಲಾಗುತ್ತದೆ. ಈ ಆದಾಯವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎನ್ನುವುದು ಅವರ ವಾದ.
ನಾನು ಪ್ರಾಣಿ ಸಂರಕ್ಷಣಾ ಚಳವಳಿ ಮಾಡುವಷ್ಟು ಪ್ರಾಣಿಪ್ರೇಮಿಯಲ್ಲ. ಮಹಾರಾಷ್ಟ್ರದಲ್ಲಿ ಬಹುತೇಕ ಬ್ರಾಹ್ಮಣರು ಮಾಂಸ ಭಕ್ಷಕರು. ಹಾಗಿದ್ದ ಮೇಲೆ ಅವರೇಕೆ ಮಾಂಸ ಕತ್ತರಿಸಿ ಮಾರುವುದಿಲ್ಲ? ಅದನ್ನು ಮಾಡುವವರಿಗೆ ಏಕೆ ಜಾತಿ ವ್ಯವಸ್ಥೆಯ ಅತ್ಯಂತ ಕ್ರೂರ ಶಿಕ್ಷೆ ನೀಡಲಾಗಿದೆ? ಸಮಾಜಕ್ಕೆ ಒಳಿತಾಗುವ ಕಾರ್ಯದ ಘನತೆಯನ್ನು ಏಕೆ ಕಿತ್ತುಕೊಳ್ಳಲಾಯಿತು? ಜನ ಮೀನು ತಿನ್ನುತ್ತಾರೆ. ಮೀನು ಹಿಡಿಯುವವರು ಯಾರು? ಬೆಸ್ತ ಕುಟುಂಬದವರು. ಆದರೆ ಮೇಲ್ವರ್ಗದವರೇಕೆ ಬೆಸ್ತ ಹೆಣ್ಣುಮಕ್ಕಳನ್ನು ಮದುವೆಯಾಗುವುದಿಲ್ಲ? ಹಲವು ಮಂದಿ ಮರಣ ದಂಡನೆಯನ್ನು ಬೆಂಬಲಿಸುತ್ತಾರೆ. ಆದರೆ ನೇಣುಗಂಬಕ್ಕೆ ಏರಿಸುವವರು ಯಾರು ಗೊತ್ತೇ? ಮೇಲ್ವರ್ಗದ ಯಾರಾದರೂ ಪಾಶ ವಿಧಿಸುವ ಕೆಲಸ ಮಾಡುತ್ತಾರೆಯೇ? ದಯವಿಟ್ಟು ಹುಡುಕಿ. ಮಾತಂಗ ಸಮುದಾಯದವರು ಈ ಕೆಲಸ ಮಾಡುತ್ತಾರೆ. ಮರಣ ದಂಡನೆ ಪ್ರತಿಪಾದಕರು ಇಂಥ ಮಾತಂಗ ಸಮುದಾಯದವರನ್ನು ಮದುವೆಯಾಗುತ್ತಾರೆಯೇ? ಹೀಗೆ ಪ್ರಶ್ನೆಗಳ ಸುರಿಮಳೆ ಹರಿಸಿದರು.

ವಿಜಯ್ ದೇವನ್ ಅವರ ಈ ಪ್ರಬಲ ಭಾವನೆಗಳು ಹಾಗೂ ಅಭಿವ್ಯಕ್ತಿಗಳು ಅನುಭವದಿಂದ ಸ್ಫೂರ್ತಿ ಪಡೆದ ವುಗಳಾಗಿದ್ದು, ತೀರಾ ಅಮೂಲ್ಯ. ದನದ ತೊಗಲಿನ ಪ್ರಶ್ನೆ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ. ಹಿಂದುತ್ವ ರಾಜಕೀಯ ದವರು ದಲಿತರನ್ನು ಹಿಂಸಿಸಲು ಇದು ಒಂದು ನೆಪ. ಇದು ನಿಲ್ಲಬೇಕು. ದಲಿತರು ಸತ್ತ ಹಸುಗಳ ಚರ್ಮ ಸುಲಿಯುವುದು ನಿಲ್ಲಿಸಬೇಕು. ಆ ಕೆಲಸವನ್ನು ಸಮಾಜದ ಇತರರಿಗೆ ಬಿಟ್ಟುಬಿಡಬೇಕು. ಮೊದಲು ಅವರು ಬಹಿಷ್ಕೃತರಾದರು; ಈಗ ಆ ಕಾರಣಕ್ಕಾಗಿ ಹತ್ಯೆಯಾ ಗುತ್ತಿದ್ದಾರೆ. ಇದನ್ನು ಸ್ವತಂತ್ರ ಭಾರತ ಸಹಿಸಬಾರದು ಎನ್ನುವುದು ಅವರ ಅಭಿಮತ.

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News