ಬೇಹು ಸಂಸ್ಥೆಗಳಿಂದ ಎಚ್ಚರಿಕೆ: 3 ಚೀನಿ ಪತ್ರಕರ್ತರಿಗೆ ಭಾರತದಿಂದ ಗೇಟ್‌ಪಾಸ್

Update: 2016-07-24 03:19 GMT

ಹೊಸದಿಲ್ಲಿ, ಜು.24: ಬೇಹುಗಾರಿಕೆ ಆರೋಪದಲ್ಲಿ ಚೀನಾದ ಮೂವರು ಹಿರಿಯ ಪತ್ರಕರ್ತರನ್ನು ಗಡೀಪಾರು ಮಾಡಲು ಭಾರತ ನಿರ್ಧರಿಸಿದೆ. ಗಡೀಪಾರಿಗೆ ಒಳಗಾದ ಪತ್ರಕರ್ತರು ಚೀನಾದ ಅಧಿಕೃತ ಕ್ಸಿನ್ಹುವಾ ಸುದ್ದಿಸಂಸ್ಥೆಯ ಪ್ರತಿನಿಧಿಗಳು ಎಂದು ತಿಳಿದುಬಂದಿದೆ. ಭಾರತದ ಗುಪ್ತಚರ ವಿಭಾಗ ಈ ಪತ್ರಕರ್ತರ ವಿರುದ್ಧ ಬೇಹುಗಾರಿಕೆ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

ಕ್ಸಿನ್ಹುವಾ ಸುದ್ದಿಸಂಸ್ಥೆಯ ದಿಲ್ಲಿ ಬ್ಯೂರೊ ಮುಖ್ಯಸ್ಥ ವೂ ಕ್ಯಾಂಗ್ ಹಾಗೂ ಮುಂಬೈನ ಇಬ್ಬರು ಸಹೋದ್ಯೋಗಿಗಳಾದ ಲು ತಂಗ್ ಹಾಗೂ ಶೆ ಯೊಂಗಾಗ್ ಅವರನ್ನು ಜುಲೈ 31ರ ಒಳಗೆ ದೇಶ ಬಿಡುವಂತೆ ಸೂಚಿಸಲಾಗಿದೆ.

ಚೀನಿ ಪತ್ರಕರ್ತರನ್ನು ಗಡೀಪಾರು ಮಾಡಿರುವುದು ಇದೇ ಮೊದಲು. ಚೀನಿ ಪತ್ರಕರ್ತರು ಇತರರನ್ನು ಅನುಕರಿಸಿದ ಮತ್ತು ನಿರ್ಬಂಧಿತ ಪ್ರದೇಶಗಳಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಗುಪ್ತಚರ ವಿಭಾಗ ಈ ಎಚ್ಚರಿಕೆ ನೀಡಿತ್ತು. ಇವರ ವೀಸಾ ರದ್ದು ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News