ಕೇರಳದ ಮಾಜಿ ಶಾಸಕರನ್ನು ಮಕ್ಕಳೇ ಹೊರಗಟ್ಟಿದರು: ಮುಪ್ಪಿನಲ್ಲಿ ಗಾಂಧಿಭವನವೇ ಗತಿ!

Update: 2016-07-28 07:43 GMT

ಪತ್ತನಾಪುರಂ,ಜುಲೈ 28: ಕೇರಳದ ವಾಯೂರ್‌ನ ಮಾಜಿ ಶಾಸಕರಾದ ಅಡ್ವೊಕೇಟ್ ಕಡಯಣಿಕ್ಕಾಡ್ ಪುರುಷೋತ್ತಮ ಪಿಳ್ಳೆಗೆ ವಾರ್ಧಕ್ಯದಲ್ಲಿ ಪತ್ತನಾಪುರದ ಗಾಂಧಿಭವನವೇ ಆಸರೆ ಎಂಬಂತಾಗಿದೆ. ಮಕ್ಕಳು ಅವರನ್ನು ಕೈಬಿಟ್ಟಿದ್ದು, ಒಂದು ಕಾಲದಲ್ಲಿ ಕೇರಳದ ರಾಜಕೀಯದಲ್ಲಿ ಗಮನಸೆಳೆದಿದ್ದ ಈ ಸಿಪಿಐ ನಾಯಕ ಈಗ ಅನಾಥರಾಗಿಬಿಟ್ಟಿದ್ದಾರೆ ಎಂದು ವರದಿಯಾಗಿದೆ.ಮಕ್ಕಳು ನಿರ್ಲಕ್ಷಿಸಿದ ಸ್ಥಿತಿಯಲ್ಲಿ ಹಲವು ಕಡೆ ಅಲೆದಾಡುತ್ತಿದ್ದುದನ್ನುಕಂಡು ಸಿಪಿಐ ಸ್ಥಳೀಯ ನಾಯಕರು ಅವರನ್ನು ಪತ್ತನಾಪುರಂ ಗಾಂಧಿಭವನಕ್ಕೆ ಸೇರಿಸಿದ್ದಾರೆ. ಮಕ್ಕಳು ಮನೆಯಿಂದ ಹೊರಗೆ ಹಾಕಿದ್ದಾರೆ. ಹೋಗಲು ಬೇರೆ ಜಾಗವಿಲ್ಲ ಎಂದು ಪಿಳ್ಳೆ ಹೇಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಈ ನಡುವೆ ದೂರೊಂದರ ಹಿನ್ನೆಲೆಯಲ್ಲಿ ಕನಯಣಿಕ್ಕಾಡ್ ಪುರುಷೋತ್ತಮನ್ ಪಿಳ್ಳೆಯವರ ಸ್ಥಿತಿಗತಿಯನ್ನು ತನಿಖೆ  ಮಾಡಿವರದಿ ನೀಡಬೇಕೆಂದು ತಿರುವನಂತಪುರಂ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎನ್ನಲಾಗಿದೆ. ವರದಿ ಸಿಕ್ಕಿದ ಕೂಡಲೇ ಅವರ ಮಕ್ಕಳ ವಿರುದ್ಧ ಕಾನೂನುಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆಂದು ತಿಳಿದು ಬಂದಿದೆ

  . ಪುರುಷೋತ್ತಮ ಪಿಳ್ಳೆಗೆ ಇಬ್ಬರು ಗಂಡು ಮಕ್ಕಳಿಗೆ ನಿಮ್ಮ ತಂದೆ ಇಲ್ಲಿದ್ದಾರೆ ಅವರನ್ನು ಕರೆದುಕೊಂಡು ಹೋಗಿ ಎಂದು ಹಲವು ಬಾರಿ ಗಾಂಧಿಭವನದ ಕಾರ್ಯಕರ್ತರು ಕರೆಮಾಡಿ ತಿಳಿಸಿದರೂ ಇಬ್ಬರು ಗಂಡು ಮಕ್ಕಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲ ಎನ್ನಲಾಗಿದೆ.

   ಕಳೆದವಾರ ಪುನಲ್ಲೂರು ಸರಕಾರಿ ಆಸ್ಪತ್ರೆಯಲ್ಲಿ ಪುರುಷತ್ತೋಮನ್ ಪಿಳ್ಳೆಗೆ ಚಿಕಿತ್ಸೆ ನೀಡಲಾಗಿತ್ತು. ಅವರಿಗೆ ಈಗ ಎಂಬತ್ತೇಳು ವರ್ಷ ವಯಸ್ಸಾಗಿದೆ. ಮಾತಾಡಲಿಕ್ಕೂ ಆಗದಷ್ಟು ಅವರು ನಿಶ್ಶಕ್ತರಾಗಿದ್ದಾರೆ. ಇದೇ ವೇಳೆ ಅವರ ಮಗಳು ತನ್ನ ಪತಿಯೊಂದಿಗೆ ಗಾಂಧಿ ಭವನಕ್ಕೆ ಒಂದು ಸಲ ಬಂದಿದ್ದು ಅವರನ್ನು ಭೇಟಿ ಮಾಡಿಹೋಗಿದ್ದಾರೆ. ಅವರ ಮಗಳು ೆ ತಂದೆಯನ್ನು ತಾನು ಕರೆದುಕೊಂಡು ಹೋದರೆ ಸಮಸ್ಯೆಯಾಗಬಹುದು ಎಂದು ಸಹೋದರರಿಗೆ ಹೆದರಿ ಹೇಳುತ್ತಿದ್ದಾರೆಂದು ವರದಿ ತಿಳಿಸಿದೆ.

   ರೋಗಿಯಾದ ಇವರನ್ನು ಗಾಂಧಿಭವನದ ಕಾರ್ಯಕರ್ತರೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ. ಅವರಿಗೆ ಈ ನಡುವೆ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಒಂದು ತಿಂಗಳು ಚಿಕಿತ್ಸೆ ಕೊಡಿಸಲಾಗಿತ್ತು. ಆಗಲೂ ಗಾಂಧಿಭವನದ ಕಾರ್ಯಕರ್ತರು ಈ ವಿಷಯವನ್ನು ಅವರ ಗಂಡು ಮಕ್ಕಳಿಗೆ ಫೋನ್ ಮುಖಾಂತರ ತಿಳಿಸಿದ್ದರು. ಮಾತ್ರವಲ್ಲ ಮಕ್ಕಳ ಕುರಿತು ಪತ್ರಿಕೆಯಲ್ಲಿ ಜಾಹೀರಾತನ್ನು ನೀಡಲಾಯಿತು. ಇದೇ ವೇಳೆ ಪಿಳ್ಳೆ ಮಕ್ಕಳನ್ನು ನೋಡಬೇಕೆಂದು ಬಯಸುತ್ತಿದ್ದಾರೆಂದು ಫೋನ್ ಮಾಡಿ ತಿಳಿಸಿದ ದಾದಿಯೊಂದಿಗೆ ರಾಜ್ಯದ ವಕೀಲರ ಸಂಘದ ನಾಯಕರಾದ ಅವರ ಪುತ್ರ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಗಾಂಧಿಭವನದ ಅಧ್ಯಕ್ಷ ಪುನಲ್ಲೂರ್ ಸೋಮರಾಜನ್ ತಿಳಿಸಿದ್ದಾರೆ. ಪಿಳ್ಳೆ ತನಗೆ ಸಿಗುವ ಶಾಸಕರ ಪಿಂಚಣಿ ಪಡೆಯಲು ಗಾಂಧಿಭವನಕ್ಕೆ ಅನುಮತಿ ನೀಡಿದ್ದರು. ಆದರೆ ಅದನ್ನು ಪಡೆದುಕೊಂಡಿಲ್ಲ ಎಂದು ಗಾಂಧಿಭವನ ಅಧ್ಯಕ್ಷ ಪುನಲ್ಲೂರ್ ಸೋಮರಾಜನ್ ತಿಳಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News