ಸೇನಾವೈದ್ಯರ ನಿವೃತ್ತಿ ವಯಸ್ಸಿನ ಏರಿಕೆ ಕುರಿತು ಸರಕಾರಕ್ಕೆ ಸುಪ್ರೀಂ ನೋಟಿಸ್

Update: 2016-07-29 15:38 GMT

ಹೊಸದಿಲ್ಲಿ,ಜು.29: ಪ್ರಧಾನಿ ನರೇಂದ್ರ ಮೋದಿಯವರ ಬಹಿರಂಗ ಪ್ರಕಟಣೆಯ ಹಿನ್ನೆಲೆಯಲ್ಲಿ ತಮ್ಮ ನಿವೃತ್ತಿ ವಯಸ್ಸನ್ನು 58ರಿಂದ 65ವರ್ಷಗಳಿಗೆ ಹೆಚ್ಚಿಸುವಂತೆ ಕೋರಿ ಎಂಟು ಸೇನಾ ವೈದ್ಯರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರಕ್ಕೆ ನೋಟಿಸನ್ನು ಹೊರಡಿಸಿದೆ.
ಈ ತಿಂಗಳು ನಿವೃತ್ತಿಗೊಳ್ಳುತ್ತಿರುವ ಈ ವೈದ್ಯರ ಅರ್ಜಿಗೆ ಉತ್ತರಿಸುವಂತೆ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪೀಠವು ಸರಕಾರ ಮತ್ತು ಸೇನೆಗೆ ಸೂಚಿಸಿತು.
ತಮ್ಮ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲು ಪ್ರಧಾನಿಯವರ ಬಹಿರಂಗ ಪ್ರಕಟಣೆಯ ಬಳಿಕ ಸರಕಾರದ ಮೇ 13ರ ಅಧಿಸೂಚನೆಯನ್ನು ಅನುಸರಿಸುವಂತೆ ರಕ್ಷಣಾ ಮತ್ತು ಆರೋಗ್ಯ ಸಚಿವಾಲಯಗಳು ಹಾಗೂ ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾ ನಿರ್ದೇಶಕರಿಗೆ ನಿರ್ದೇಶ ನೀಡುವಂತೆ ಕರ್ನಲ್ ದರ್ಜೆಯ ಈ ವೈದ್ಯರು ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಈ ಅಧಿಸೂಚನೆಯನ್ನು ಅರೆ ಮಿಲಿಟರಿ ಪಡೆಗಳು ಅನುಸರಿಸುತ್ತಿವೆ ಎನ್ನುವುದನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News