ಸತೀಶ್‌ ಸಿ ಮಾಥುರ್ ಮಹಾರಾಷ್ಟ್ರದ ಹೊಸ ಡಿಜಿಪಿ

Update: 2016-07-30 09:07 GMT

ಮುಂಬೈ, ಜು.30: ಹಿರಿಯ ಐಪಿಎಸ್‌ ಅಧಿಕಾರಿ ಸತೀಶ್ ಸಿ. ಮಾಥುರ್‌ ಅವರು ಮಹಾರಾಷ್ಟ್ರ ಪೊಲೀಸ್ ಇಲಾಖೆಯ  ನೂತನ ಡಿಜಿಪಿಯಾಗಿ ನೇಮಕಗೊಂಡಿದ್ದಾರೆ.
1981ರ ಐಪಿಎಸ್‌ ತಂಡದ ಅಧಿಕಾರಿ ಮಾಥುರ್‌ ಅವರು ಪ್ರವೀಣ್‌ ದೀಕ್ಷಿತ್‌ಗೆ ಉತ್ತರಾಧಿಕಾರಿಯಾಗಲಿದ್ದಾರೆ. ದೀಕ್ಷಿತ್‌ ಡಿಜೆಪಿ ಹುದ್ದೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ  ಸತೀಶ್ ಅವರನ್ನು ಸರಕಾರ ಡಿಜಿಪಿ ಹುದ್ದೆಗೆ ನೇಮಕ ಮಾಡಿದೆ.
ಪ್ರಸ್ತುತ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಹೆಚ್ಚುವರಿ ಡಿಜಿಪಿ ಆಗಿರುವ ಸತೀಶ್‌  ಅವರು ಎನ್‌ಎಸ್ ಜಿಯಲ್ಲಿ ತರಬೇತಿ ಪಡೆದ ಮೊದಲ ಐಪಿಎಸ್‌ ಅಧಿಕಾರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News