ಅಜಿತ್ ಜೈನ್,ಅನುರಾಗ್ ಆಚಾರ್ಯಗೆ ಗೌರವಾನ್ವಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿ

Update: 2016-07-31 18:21 GMT

ಖರಗಪುರ,ಜು.31: ಅದ್ವಿತೀಯ ವೃತ್ತಿಪರ ಸಾಧನೆಗಳಿಗಾಗಿ ಗೂಗಲ್ ಸ್ಕಾಲರ್‌ನ ಸಹಸಂಸ್ಥಾಪಕ ಅನುರಾಗ್ ಆಚಾರ್ಯ ಮತ್ತು ಬರ್ಕ್‌ಶೈರ್ ಹಾಥ್‌ವೇದ ಸಿಇಒ ವಾರನ್ ಬಫೆಟ್ ಅವರ ಸಂಭಾವ್ಯ ಉತ್ತರಾಧಿಕಾರಿ ಅಜಿತ್ ಜೈನ್ ಅವರಿಗೆ ರವಿವಾರ ಖರಗಪುರ ಐಐಟಿಯ ಅತ್ಯುನ್ನತ ಗೌರವಾನ್ವಿತ ಹಳೆಯ ವಿದ್ಯಾರ್ಥಿ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು.

ಐಐಟಿಯ 62ನೇ ಘಟಿಕೋತ್ಸವ ಸಮಾರಂಭದಲ್ಲಿ ಜೈನ್ ಮತ್ತು ಆಚಾರ್ಯ ಸೇರಿದಂತೆ ಏಳು ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಗಳನ್ನು ಪ್ರದಾನಿಸಲಾಯಿತು. ಜೈನ್ ಮತ್ತು ಆಚಾರ್ಯ ಅವರಿಗೆ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗದ್ದರಿಂದ ಅವರ ಅನುಪಸ್ಥಿತಿಯಲ್ಲಿಯೇ ಪ್ರಶಸ್ತಿಗಳನ್ನು ನೀಡಲಾಯಿತು.

 1972ರಲ್ಲಿ ಖರಗಪುರ ಐಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದ ಜೈನ್ ಅವರು ಪ್ರಸ್ತುತ ಅಮೆರಿಕದಲ್ಲಿ ಬರ್ಕ್‌ಶೈರ್ ಹಾಥ್‌ವೇ ಇನ್ಶೂರೆನ್ಸ್ ಸಮೂಹದ ಮರುವಿಮಾ ವಿಭಾಗದ ಅಧ್ಯಕ್ಷರಾಗಿದ್ದು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾಗಿರುವ ಬಫೆಟ್ ಅವರ ಸಂಭಾವ್ಯ ಉತ್ತರಾಧಿಕಾರಿ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.
ಆಚಾರ್ಯ ಅವರು ಈ ಐಐಟಿಯ 1987ರ ತಂಡದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News