ಭಾರತದಲ್ಲಿ ಶೇ.73ರಷ್ಟು ಪೇಟೆಂಟ್ ಮನವಿಗಳು ವಿದೇಶಿಯರಿಂದ!

Update: 2016-08-01 18:27 GMT

ಬೆಂಗಳೂರು, ಆ.1: ಭಾರತದಲ್ಲಿ ಪೇಟೆಂಟ್‌ಗಳಿಗಾಗಿ ಸಲ್ಲಿಸಿದ ಪ್ರತಿ 10 ಮನವಿಗಳಲ್ಲಿ 7 ಮನವಿಗಳನ್ನು ವಿದೇಶಿಯರು ಯಾ ವಿದೇಶಿ ಸಂಸ್ಥೆಗಳು ಸಲ್ಲಿಸುತ್ತವೆ ಎಂಬ ಮಾಹಿತಿಯನ್ನು ಪೇಟೆಂಟ್ ಡಿಸೈನ್ಸ್ ಆ್ಯಂಡ್ ಟ್ರೇಡ್ ಮಾರ್ಕ್ಸ್ ಕಂಟ್ರೋಲರ್ ಜನರಲ್ ಅವರು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯಕ್ಕೆ ಸಲ್ಲಿಸಿರುವ ಮಾಹಿತಿ ತಿಳಿಸುತ್ತದೆ. ದೇಶದಲ್ಲಿ 2013 ಹಾಗೂ 2016ರ ನಡುವೆ ಪೇಟೆಂಟ್‌ಗಳಿಗಾಗಿ ಒಟ್ಟು 1.45 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆಯೆಂಬ ಮಾಹಿತಿಯೂ ಲಭ್ಯ್ಯವಾಗಿದೆ. ಈ ಒಟ್ಟು ಅರ್ಜಿಗಳಲ್ಲಿ 1.05 ಅರ್ಜಿಗಳನ್ನು (ಶೇ.73) ವಿದೇಶಿ ವ್ಯಕ್ತಿಗಳು ಯಾ ಸಂಸ್ಥೆಗಳು ಸಲ್ಲಿಸಿವೆ. ಭಾರತೀಯರು ಯಾ ಭಾರತೀಯ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳು ಕೇವಲ 39,318 ಯಾ ಒಟ್ಟು ಅರ್ಜಿಗಳ ಶೇ.27ರಷ್ಟು ಆಗಿದೆಯೆಂದು ಕಂಟ್ರೋಲರ್ ಜನರಲ್ ನೀಡಿದ ಮಾಹಿತಿ ತಿಳಿಸುತ್ತದೆ.

ಡಿಸೆಂಬರ್ 2015ರ ವರೆಗಿನ ಲಭ್ಯ ದಾಖಲೆಗಳ ಪ್ರಕಾರ ದೇಶದಲ್ಲಿ ಸಲ್ಲಿಕೆಯಾಗಿರುವ ಒಟ್ಟು ಪೇಟೆಂಟ್ ಅರ್ಜಿಗಳಲ್ಲಿ ಶೇ.86ರಷ್ಟು ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿಯಾಗಿವೆ. ಸಾಮಾನ್ಯವಾಗಿ ದೇಶದಲ್ಲಿ ಪೇಟೆಂಟ್ ಪಡೆಯಲು ಅರ್ಜಿದಾರನೊಬ್ಬ ಐದು ವರ್ಷ ಕಾಯಬೇಕಾಗುತ್ತದೆ. ಆದರೆ ಫಾರ್ಮಾ ಹಾಗೂ ಬಯೋ ಕೆಮಿಸ್ಟ್ರಿ ಕ್ಷೇತ್ರಗಳಲ್ಲಿ ಇಷ್ಟೊಂದು ಸಮಯದಲ್ಲಿ ಮಾಡಿರುವ ಸಂಶೋಧನೆಗಳು ವ್ಯರ್ಥವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News