ಬಿಜೆಪಿ ನಾಯಕನಿಂದ ಆಝಂಖಾನ್‌ರ ಪತ್ನಿ,ಪುತ್ರಿಯ ವಿರುದ್ಧ ಅವಹೇಳನಕಾರಿ ಹೇಳಿಕೆ!

Update: 2016-08-03 11:55 GMT

ಲಕ್ನೊ,ಆ.3: ಬುಲಂದ್‌ಶಹರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸಮಾಜವಾದಿ ಪಕ್ಷದನಾಯಕ ಆಝಂಖಾನ್ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿಯ ಐಪಿ ಸಿಂಗ್ ಎಂಬವರು ತೀರಾ ಅವಹೇಳನಕಾರಿ ಹೇಳಿಕೆಯನ್ನು ಶೇರ್ ಮಾಡಿದ್ದಾರೆ. ಒಂದುವೇಳೆ ಆಝಂಖಾನ್‌ರ ಪತ್ನಿ, ಪುತ್ರಿಯ ಮೇಲೆ ಗ್ಯಾಂಗ್‌ರೇಪ್ ಆಗಿದ್ದರೆ ಅವರ ಕಣ್ಣು ತೆರೆಯುತ್ತಿತ್ತು ಎಂದು ಐಪಿ ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

 " ಮಿಸ್ಟರ್ ಆಝಂಖಾನ್‌ರಿಗೆ ತನ್ನ  ಪತ್ನಿ ಮತ್ತು ಪುತ್ರಿಯೊಂದಿಗೆ ಗ್ಯಾಂಗ್ ರೇಪ್ ನಡೆದಿದ್ದರೆ ಆಗ ಅವರ ಕಣ್ಣುತೆರೆಯುತ್ತಿತ್ತು. ಬುಲಂದ್‌ಶಹರ್ ಐವೇಯಲ್ಲಿ ತಾಯಿಮಗಳೊಂದಿಗೆ ನಡೆದ ಗ್ಯಾಂಪ್ ರೇಪ್ ಕುರಿತು ಕ್ಷುಲ್ಲಕ ಮಾತು ಆಡುತ್ತಿರಲಿಲ್ಲ" ಎಂದು ಐಪಿ ಸಿಂಗ್ ಟ್ವೀಟ್‌ನಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ.

 ಬುಲಂದ್‌ಶಹರ್ ಹೈವೆಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಆಝಂ ಖಾನ್ ರಾಜಕೀಯ ಷಡ್ಯಂತ್ರ ಎಂದು ಸೂಚಿಸಿ "ಅಲ್ಲಿ ನಡೆದ ಗ್ಯಾಂಗ್ ರೇಪ್ ವಿಪಕ್ಷಗಳ ಸಂಚು ಆಗಿರಲೂ ಬಹುದು. ವೋಟಿಗಾಗಿ ಜನರು ಯಾವ ಮಟ್ಟಕ್ಕೂಇಳಿಯಲು ಸಿದ್ಧರಿದ್ದಾರೆ" ಎಂದು ಹೇಳಿದ್ದರು. ಅವರ ಹೇಳಿಕೆ ವಿವಾದ ಆದ ಬಳಿಕ "ತಾನು ಹಾಗೆ ಹೇಳಿಲ್ಲ. ಚುನಾವಣೆಯ ಸಮಯದಲ್ಲಿ ಈ ಘಟನೆ ನಡೆದಿದ್ದು ಹೆಚ್ಚಿನ ತನಿಖೆಯ ಆವಶ್ಯಕತೆ ಇದೆ ಎಂದು ತಾನು ಹೇಳಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಕೇಶವಮೂರ್ತಿ ಆಝಂಖಾನ್‌ರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ರನ್ನು ಆಗ್ರಹಿಸಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News