500 ಕಿ.ಮೀ.ಗೂ ಅಧಿಕ ಮೆಟ್ರೋ ರೈಲುಮಾರ್ಗ ಕಾಮಗಾರಿ ಪ್ರಗತಿಯಲ್ಲಿ : ವೆಂಕಯ್ಯ ನಾಯ್ಡು

Update: 2016-08-03 14:23 GMT

ಹೊಸದಿಲ್ಲಿ,ಆ.3: ದೇಶಾದ್ಯಂತ 500 ಕಿ.ಮೀ.ಗೂ ಹೆಚ್ಚಿನ ಮೆಟ್ರೋ ರೈಲುಮಾರ್ಗ ನಿರ್ಮಾಣ ಕಾಮಗಾರಿಯು ನಡೆಯುತ್ತಿದೆ. ಹಣಕಾಸಿನ ಲಭ್ಯತೆ ಮತ್ತು ಕಾರ್ಯಸಾಧ್ಯತೆಯನ್ನು ಅವಲಂಬಿಸಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ನಗರ ಸಾರಿಗೆಯ ಅಭಿವೃದ್ಧಿಗೆ ವಿಶಾಲವಾದ ಆಯಾಮವನ್ನು ಒದಗಿಸಿರುವ ರಾಷ್ಟ್ರೀಯ ನಗರ ಸಾರಿಗೆ ನೀತಿಯಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಉದ್ದೇಶ ಸರಕಾರಕ್ಕಿಲ್ಲ ಎಂದರು.
ಸುಮಾರು 316 ಕೀ.ಮೀ.ಉದ್ದದ ಮೆಟ್ರೋ ರೈಲು ಮಾರ್ಗ ಸದ್ಯ ಕಾರ್ಯಾಚರಿಸುತ್ತಿದ್ದು, 500 ಕಿ.ಮೀ.ಗೂ ಅಧಿಕ ಉದ್ದದ ಕಾಮಗಾರಿ ಪ್ರಗತಿಯಲ್ಲಿದೆ. ಇವುಗಳಲ್ಲಿ ರಾಜ್ಯ ಸರಕಾರಗಳು ಮತ್ತು ಖಾಸಗಿ ಸಂಸ್ಥೆಗಳಿಂದ ತಮ್ಮ ಸ್ವಂತ ವ್ಯವಸ್ಥೆಯಡಿ ಪ್ರವರ್ತಿತ ಮೆಟ್ರೋ/ಮೊನೊ ರೈಲು ಸೇರಿವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News