ಅಧಿಕ ವೌಲ್ಯದ ವಂಚನೆ: ಸಿಬಿಐ ನೋಡಲ್ ಏಜೆನ್ಸಿ

Update: 2016-08-07 18:27 GMT

ಹೊಸದಿಲ್ಲಿ, ಆ.7: ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 50 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಂಚನೆಗಳು ಆದಲ್ಲಿ ಬ್ಯಾಂಕ್‌ಗಳು ವರದಿ ಮಾಡಲು ಸಿಬಿಐಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಈ ಸಂಬಂಧ ಹೇಳಿಕೆ ನೀಡಿ, ಬ್ಯಾಂಕ್‌ಗಳು ನೇರವಾಗಿ ಸಿಬಿಐಗೆ ದೂರು ಸಲ್ಲಿಸಲು ಸೂಕ್ತ ಅವಕಾಶ ಇಲ್ಲ ಎಂದು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ, ಈ ಆದೇಶ ಹೊರಬಿದ್ದಿದೆ.

ಸಿಬಿಐ ಇಂಥ ವಂಚನೆಗಳ ಬಗ್ಗೆ ದೂರು ಸಲ್ಲಿಸಲು ಕೇಂದ್ರೀಯ ಏಜೆನ್ಸಿಯಾಗಿರುತ್ತದೆ ಎಂದು ಕೇಂದ್ರ ವಿಚಕ್ಷಣಾ ಆಯುಕ್ತ ಕೆ.ವಿ.ಚೌಧರಿ ವಿವರಿಸಿದರು.

ಬ್ಯಾಂಕ್‌ಗಳಿಗೆ 50 ಕೋಟಿಗಿಂತ ದೊಡ್ಡ ಮೊತ್ತದ ವಂಚನೆಯಾಗಿದ್ದರೆ, ಈ ಸಂಬಂಧ ದೂರು ಸ್ವೀಕರಿಸಲು ಸಿಬಿಐನಲ್ಲಿ ಜಂಟಿ ನಿರ್ದೇಶಕ ಮಟ್ಟದ ಒಬ್ಬ ಅಧಿಕಾರಿಯನ್ನು ನಿಯೋಜಿಸಲಾಗುವುದು. ಇಂಥ ವರದಿಯನ್ನು ಸ್ವೀಕರಿಸಿದ ಬಳಿಕ, ಅಧಿಕಾರಿ ಸಿಬಿಐನ ಭ್ರಷ್ಟಾಚಾರ ವಿರೋಧಿ ದಳ, ಆರ್ಥಿಕ ಅಪರಾಧಗಳ ವಿಭಾಗ ಅಥವಾ ಬ್ಯಾಂಕ್ ಭದ್ರತಾ ಮತ್ತು ವಂಚನೆ ಘಟಕಕ್ಕೆ ತನಿಖೆ ಕೈಗೊಳ್ಳಲು ಶಿಫಾರಸು ಮಾಡಬಹುದು ಎಂದು ಅಧಿಕೃತ ಮೂಲಗಳು ಹೇಳಿವೆ. ಈ ಅಧಿಕಾರಿ ಕಾನೂನು ಜಾರಿ ನಿರ್ದೇಶನಾಲಯದ ತನಿಖೆಗೂ ಶಿಫಾರಸು ಮಾಡಬಹುದಾಗಿದೆ. ಸಿಬಿಐ 2015ರಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿ ವೌಲ್ಯದ ಒಟ್ಟು 171 ಬ್ಯಾಂಕ್ ವಂಚನೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಿದೆ. ಇವುಗಳಲ್ಲಿ ಮದ್ಯದ ದೊರೆ ವಿಜಯ ಮಲ್ಯ ಅವರ 9,000 ಕೋಟಿ ರೂಪಾಯಿ ವಂಚನೆ ಪ್ರಕರಣವೂ ಒಂದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News