ಗೋರಕ್ಷಕರಿಂದ ನಾಲ್ವರಿಗೆ ಹಿಗ್ಗಾಮುಗ್ಗ ಥಳಿತ

Update: 2016-08-10 13:18 GMT

ಅಲಿಗಡ,ಆ.10: ಗೋರಕ್ಷಣೆಯ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲ ರಾಜ್ಯಗಳಿಗೆ ಸೂಚಿಸಿ ಕೇಂದ್ರ ಗೃಹ ಸಚಿವಾಲಯವು ಕಳೆದ ಸಂಜೆ ನಿರ್ದೇಶವೊಂದನ್ನು ಹೊರಡಿಸಿದ ಬೆನ್ನಿಗೇ ಗೋಕಳ್ಳರೆಂದು ಶಂಕಿಸಿ ನಾಲ್ವರನ್ನು ಬಜರಂಗ ದಳ ಕಾರ್ಯಕರ್ತರು ಥಳಿಸಿದ ಘಟನೆ ನಗರದ ಹೊರವಲಯದ ಜಿರೋಲಿ ಗ್ರಾಮದಲ್ಲಿ ನಡೆದಿದೆ.

 ಕೋಣವೊಂದನ್ನು ಸಾಗಿಸುತ್ತಿದ್ದ ಮೆಟಡೋರ್ ವಾಹನವನ್ನು ನಿಲ್ಲಿಸಲು ಬಜರಂಗ ದಳದ ಜಿಲ್ಲಾಧ್ಯಕ್ಷ ಕೇದಾರ ಸಿಂಗ್ ನೇತೃತ್ವದ ಗುಂಪು ಪ್ರಯತ್ನಿಸಿತ್ತು. ಚಾಲಕ ವಾಹನವನ್ನು ನಿಲ್ಲಿಸದೆ ಮುಂದಕ್ಕೋಡಿಸಿದಾಗ ಗುಂಪು ಜಿರೋಲಿಯಲ್ಲಿನ ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿಯನ್ನು ನೀಡಿತ್ತು. ಅಲ್ಲಿ ರಸ್ತೆಗೆ ತಡೆಯೊಡ್ಡಿರುವುದನ್ನು ಗಮನಿಸಿದ ಮೆಟಡೋರ್‌ನಲ್ಲಿದ್ದ ನಾಲ್ವರು ಹೊರಕ್ಕೆ ಹಾರಿ ಪರಾರಿಯಾಗಲು ಯತ್ನಿಸಿದ್ದರು. ಆದರೆ ಅವರನ್ನು ಹಿಡಿದ ಗುಂಪು ಪೊಲೀಸರಿಗೊಪ್ಪಿಸುವ ಮುನ್ನ ಅವರನ್ನು ಹಿಗ್ಗಾಮುಗ್ಗಾ ಥಳಿಸಿದೆ. ಈ ನಾಲ್ವರೂ ಗೋಕಳ್ಳರೆಂದು ಬಜರಂಗ ದಳವು ಆರೋಪಿಸಿದೆ.

ಹಲ್ಲೆಗೊಳಗಾದ ವ್ಯಕ್ತಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News