ಸರಕಾರಿ ಜಮೀನು ಕಬಳಿಸುತ್ತಿರುವ ನಕಲಿ ಗೋರಕ್ಷಕರು: ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಬಹಿರಂಗ

Update: 2016-08-10 16:48 GMT

ಜೈಪುರ, ಆ.10: ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕರ ಬಗ್ಗೆ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ನಕಲಿ ಗೋ ರಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ‘ಗೋ ಶಾಲೆಯ ಹೆಸರಿನಲ್ಲಿ ನಕಲಿ ಗೋ ರಕ್ಷಕರು ಸರಕಾರಿ ಜಮೀನನ್ನು ಅತಿಕ್ರಮಿಸುತ್ತಿದ್ದಾರೆ ’ಎಂದು ಬಹಿರಂಗಪಡಿಸಿದ್ದಾರೆ.

      ಗೋ ರಕ್ಷಣೆಗಾಗಿ ಎಂದು ಹೇಳಿಕೊಳ್ಳುವ ‘ಸಮಾಜ ಕಂಟಕರು ’ ಸರಕಾರಿ ಜಮೀನನ್ನು ಪಡೆದು, ತಕ್ಷಣವೇ ಅವರು ಗೋ ಶಾಲೆಗಾಗಿ ಸರಕಾರ ಜಮೀನು ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ರಾಜೇ ತಿಳಿಸಿದ್ದಾರೆ.

     ಆದಾಗ್ಯೂ, 5ಲಕ್ಷ ಗೋವುಗಳು ಮತ್ತು ಎತ್ತುಗಳಿರುವ 1,606 ನೋಂದಾಯಿತ ಗೋಶಾಲೆಗಳಿದ್ದರೂ, ರಾಜ್ಯ ಸರಕಾರ ಇಂತಹ ಹಲವು ಅರ್ಜಿಗಳನ್ನು ಸ್ವೀಕರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

         ಜಮೀನಿನ ಜೊತೆ, ದಿನವೊಂದಕ್ಕೆ ದೊಡ್ಡ ಜಾನುವಾರುಗಳಿಗೆ ರೂ.70ರಂತೆ ಹಾಗೂ ಚಿಕ್ಕ ಜಾನುವಾರುಗಳಿಗೆ ರೂ.35ರಂತೆ ಗೋಶಾಲೆಗಳು ಬರ ಭತ್ತೆಯನ್ನು ಪಡೆದಿವೆ.ಹೊಸದಾಗಿ ಗೋ ರಕ್ಷಕರು ಎಂದು ಹೇಳಿಕೊಳ್ಳುವವರು ಅತಿಕ್ರಮಿತ ಭೂಮಿ ಅಥವಾ ಗೋಮಾಳದಲ್ಲಿ ಬೀದಿ ಜಾನುವಾರುಗಳಿಗಾಗಿ ಗೋ ಶಾಲೆಯನ್ನು ನಿರ್ಮಾಣ ಮಾಡಲು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News