ಹೆರಿಗೆ ರಜೆ 26 ವಾರಗಳಿಗೆ ವಿಸ್ತರಣೆ: ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ

Update: 2016-08-11 15:33 GMT

ಹೊಸದಿಲ್ಲಿ,ಆ.11: 26 ವಾರಗಳ ಹೆರಿಗೆ ರಜೆಗೆ ಅವಕಾಶ ಕಲ್ಪಿಸುವ ಮಸೂದೆಗೆ ಗುರುವಾರ ರಾಜ್ಯಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಹಸಿರು ನಿಶಾನೆ ತೋರಿಸಿದರು. ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ತಂದೆ-ತಾಯಿ ಇಬ್ಬರೂ ಹಂಚಿಕೊಳ್ಳುವಂತಾಗಲು ಪಿತೃತ್ವ ರಜೆಗೂ ನಿಯಮಗಳನ್ನು ರೂಪಿಸಬೇಕೆಂದು ಕೆಲವು ಸದಸ್ಯರು ಕೋರಿದರು.
ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ಮಂಡಿಸಿದ ಹೆರಿಗೆ ಲಾಭ(ತಿದ್ದುಪಡಿ) ಮಸೂದೆ,2016 ಧ್ವನಿಮತದೊಂದಿಗೆ ಅಂಗೀಕಾರಗೊಂಡಿತು.
ಎರಡು ಮಕ್ಕಳ ಜನನಕ್ಕೆ ಸೀಮಿತವಾಗಿ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲು ಈ ಮಸೂದೆಯು ಅವಕಾಶ ಕಲ್ಪಿಸಿದ್ದು, ಸಂಘಟಿತ ಕ್ಷೇತ್ರದ ಸುಮಾರು 18 ಲಕ್ಷ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ.
10 ಅಥವಾ ಅದಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳಿರುವ ಎಲ್ಲ ಸಂಸ್ಥೆಗಳಿಗೆ ಈ ಕಾನೂನು ಅನ್ವಯವಾಗುತ್ತದೆ ಎಂದು ಬಂಡಾರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News