ಮಹಿಳಾ ನ್ಯಾಯಾಧೀಶೆಯ ವಸತಿಯಿಂದ ಹಾಡಹಗಲೇ 200 ಪವನ್ ಚಿನ್ನ, ಹಣ ಕಳ್ಳತನ

Update: 2016-08-12 06:39 GMT

ಚೆನ್ನೈ, ಆ.12: ಸೇದಾಪೇಟ್ ಸೆಶನ್ಸ್ ಕೋರ್ಟಿನ ನ್ಯಾಯಾಧೀಶೆ ಸೀಜಾರ ವಸತಿಯಿಂದ ಹಾಡಹಗಲೇ200 ಪವನ್ ಚಿನ್ನ ಮತ್ತು ಹಣ ಕಳವು ನಡೆದ ಘನೆ ವರದಿಯಾಗಿದೆ. ಗುರುವಾರ ಬೆಳಗ್ಗೆ 10-11 ಗಂಟೆಯ ನಡುವೆ ನ್ಯಾಯಾಧೀಶೆ ಹಾಗೂ ಕುಟುಂಬ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಒಂದು ಗಂಟೆ ಕಳೆದು ಅವರೆಲ್ಲ ಮನೆಗೆ ಮರಳಿದಾಗ ಕ್ವಾಟ್ರರ್ಸ್‌ನ ಬಾಗಿಲನ್ನು ಒಡೆದುಹಾಕಿ, ಬೀರಿನಲ್ಲಿಟ್ಟಿದ್ದ 200ಪವನ್ ಚಿನ್ನ ಮತ್ತು ಹಣ ಕಳ್ಳತನವಾಗಿದ್ದು ಪತ್ತೆಯಾಗಿತ್ತು ಎನ್ನಲಾಗಿದೆ. ಎಷ್ಟು ಹಣ ಇತ್ತು ಎಂಬ ಲೆಕ್ಕವನ್ನು ಪೊಲೀಸರು ಬಹಿರಂಗ ಪಡಿಸಿಲ್ಲ. ಸಿಸಿಟಿವಿಯಲ್ಲಿ ದಾಖಲಾದ ಇಬ್ಬರು ವ್ಯಕ್ತಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸೀಜಾ ಇರುವ ಅಪಾರ್ಟ್‌ಮೆಂಟ್‌ನಲ್ಲಿ ಇತರ ನ್ಯಾಯಾಧೀಶರ ಮನೆಗಳೂ ಇವೆ. 24 ಗಂಟೆ ಪೊಲೀಸ್ ಕಾವಲಿರುವ ನ್ಯಾಯಾಧೀಶರುಗಳ ವಸತಿಯಲ್ಲಿ ಕಳ್ಳತನವಾಗಿರುವುದು ನಗರದಲ್ಲಿ ಭೀತಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಇನ್ನೊಂದು ಘಟನೆಯಲ್ಲಿ ನೈವೇಲಿಯ ಜ್ಯುವೆಲ್ಲರಿಯಲ್ಲಿ ಕಳ್ಳತನವಾಗಿದ್ದು, 1.5 ಕಿಲೊ ಚಿನ್ನ, 20ಕಿಲೊ ಬೆಳ್ಳಿ ಹಾಗೂ ಹಣ ಕಳ್ಳರು ಕದ್ದೊಯ್ದಿದ್ದಾರೆ ಎಂದು ತಿಳಿದು ಬಂದಿದೆ. ಇದೇವೇಳೆ ಕೋಟ್ಯಂತರ ರೂಪಾಯಿ ಮೌಲ್ಯದ ಲಾಕರನ್ನು ಒಡೆದು ಕಳ್ಳರು ದೋಚಿದ್ದಾರೆ. ಜ್ಯುವೆಲ್ಲರಿ ಮಾಲಕ ಸುರೇಶ್ ನೀಡಿದ ದೂರಿನ ಪ್ರಕಾರ ಕಡಲ್ಲೂರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ವರ್ಷವೂ ಇದೇ ಅಂಗಡಿಯಿಂದ ಎರಡು ಕಿಲೊ ಚಿನ್ನ ಕಳ್ಳತನವಾಗಿದ್ದು, ಈ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ಕಳ್ಳತನವಾದ ಚಿನ್ನವನ್ನು ವಶಪಡಿಸಿಕೊಂಡಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News