ಕೇರಳಿಗರನ್ನು ಪ್ರಶಂಸಿಸಿದ ನ್ಯಾ. ಕಾಟ್ಜುಗೆ ಕೃತಜ್ಞತೆ ಸಲ್ಲಿಸಿದ ಮುಖ್ಯಮಂತ್ರಿ ಪಿಣರಾಯಿ

Update: 2016-08-13 06:30 GMT

ತಿರುವನಂತಪುರಂ, ಆ.13: ಫೇಸ್‌ಬುಕ್‌ನಲ್ಲಿ ಕೇರಳೀಯರ ಕುರಿತು ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ನ್ಯಾಯಾಮೂರ್ತಿ ಮಾರ್ಕಾಂಡೇಯ ಕಾಟ್ಜುಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೃತಜ್ಞತೆ ಸಲ್ಲಿಸಿದ್ದಾರೆಂದು ವರದಿಯಾಗಿದೆ. "ದೇಶ, ಮತ ಭೇದಭಾವಗಳನ್ನು ತೋರಿಸದೆ ಎಲ್ಲರನ್ನೂ ಸ್ವೀಕರಿಸುವ ಪ್ರಜಾಪ್ರಭುತ್ವ ಕೇರಳದಲ್ಲಿದೆ" ಎಂದು ಕಾಟ್ಜುಗೆಕೃತಜ್ಞ ಸಲ್ಲಿಸುತ್ತಾ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳೀಯರು ನೈಜ ಭಾರತೀಯರು. ದೇಶ ಅವರನ್ನು ನೋಡಿ ಕಲಿಯಬೇಕೆಂದ ಕಾಟ್ಜು ಫೇಸ್‌ಬುಕ್‌ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು. " ಸಮಾಜದಲ್ಲಿರುವ ಎಲ್ಲರನ್ನೂ ಒಪ್ಪಿ, ಬದುಕಲು ನಾವು ಕಲಿಯಬೇಕಿದೆ. ಅದನ್ನು ಅತ್ಯಂತ ಉತ್ತಮವಾಗಿ ಕೇರಳೀಯರು ಮಾಡುತ್ತಿದ್ದಾರೆ ಎಂದೂ ಕಾಟ್ಜು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕೇರಳ ಮುಖ್ಯಮಂತ್ರಿ "ಕೇರಳದಲ್ಲಿ ದಲಿತರು ತಾರತಮ್ಯ ಅನುಭವಿಸಿಲ್ಲ ಎಂಬ ಕಾಟ್ಜುರ ಹೇಳಿಕೆ ಐತಿಹಾಸಿಕ ಹಿನ್ನೆಲೆಯಲ್ಲಿ ತಪ್ಪಾಗುತ್ತದೆ" ಎಂದು ಬೊಟ್ಟು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ " ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳದಿದ್ದರೆ ಜಮೀನುದಾರರ ಗದ್ದೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಮುಷ್ಕರ ಹೂಡಿದ್ದ ಕಂಡಲದ ಕೃಷಿ ಕಾರ್ಮಿಕರು ಮತ್ತು ಮಾನಮುಚ್ಚುವ ಹಕ್ಕಿಗಾಗಿ ಹೋರಾಟ ನಡೆಸಿದ್ದ ಚಾನ್ನಾರ್ ಮಹಿಳೆಯರು ಕೇರಳದ ಪ್ರಗತಿಶೀಲ ಮನಸ್ಸುಗಳ ಶಿಲ್ಪಿಗಳೆಂದು" ಗತ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

  ಇದೇವೇಳೆ, ಬೇರೆಬೇರೆ ವಿಭಾಗಗಳ ಧ್ವನಿಯನ್ನು ಸಮಾನವಾಗಿ ಆಲಿಸುವುದಕ್ಕೆ ಅಗತ್ಯ ಸಂದರ್ಭ ಸೃಷ್ಟಿಸುವ ತನ್ನ ಬದ್ಧತೆಯನ್ನು ಮುಖ್ಯಮಂತ್ರಿ ಸಾರ್ವಜನಿಕರಿಗೆ ತಿಳಿಸಿದ್ದಾರೆ. "ಇದು ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ಕುರಿತು ಮಾತಾಡುವಾಗ ಹೆಚ್ಚು ಪ್ರಸಕ್ತ ಎನಿಸಿಕೊಳ್ಳುವ ವಿಚಾರವಾಗಿದೆ. ಕೇರಳದ ಸಾಧನೆಗಳನ್ನು ಭಾರತಾದ್ಯಂತ ಹರಡಲು ಸಾಧ್ಯವಾದಾಗ ಮಾತ್ರವೇ ಸಂವಿಧಾನ ಶಿಲ್ಪಿಗಳ ಕನಸಿನ ಭಾರತ ಸೃಷ್ಟಿಯಾಗಲು ಸಾಧ್ಯ" ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News