ಸಮಾನತೆ-ಉತ್ತರದಾಯಿತ್ವ ಹೊಸ ಶಿಕ್ಷಣ ನೀತಿಯ ಆದ್ಯತೆ: ಜಾವಡೇಕರ್

Update: 2016-08-13 18:29 GMT

ಹೈದರಾಬಾದ್, ಆ.13: ಹೊಸ ಶಿಕ್ಷಣ ನೀತಿಯು ಪ್ರಮಾಣ, ಗುಣಮಟ್ಟ ಹಾಗೂ ಸಮಾನತೆಯೊಂದಿಗೆ ಹೊಣೆಗಾರಿಕೆ, ಸಂಶೋಧನೆ ಹಾಗೂ ಬದಲಾವಣೆಗಳ ಮೇಲೆ ಗಮನಹರಿಸಲಿದೆ ಎಂದಿರುವ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್, ಇಲ್ಲಿ ಸಂವಿಧಾನದ ಪ್ರಸ್ತಾಪಗಳಿಗೆ ಯಾವುದೇ ಚ್ಯುತಿ ಬಾರದೆಂದು ತಿಳಿಸಿದ್ದಾರೆ.

ಇಲ್ಲಿನ ಮುರ್ಶೀರಾಬಾದ್‌ನ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಅವರು, ಹೊಸ ಶಿಕ್ಷಣ ನೀತಿಯನ್ನು ಪ್ರಮಾಣ, ಗುಣಮಟ್ಟ, ಸಮಾನತೆ, ಹೊಣೆಗಾರಿಕೆ, ಸಂಶೋಧನೆ ಹಾಗೂ ಬದಲಾವಣೆಗಳ ತಳಹದಿಯ ಮೇಲೆ ರಚಿಸಲಾಗುವುದು. ಹೊಸ ಶಿಕ್ಷಣ ನೀತಿಗೆ ಸಂಬಂಧಿಸಿ ಸಂವಿಧಾನದಲ್ಲಿ ಬದಲಾವಣೆಯಾಗಬಹುದೆಂದು ಕೆಲವರು ಮೊದಲೇ ಸಂಶಯವೆತ್ತುತ್ತಿದ್ದಾರೆ. ಅಂತಹದೇನೂ ಆಗದೆಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಗುರುವಾರ ವಿಪಕ್ಷಗಳು, ಕರಡು ನೀತಿಯು ಆರೆಸ್ಸೆಸ್ ಕಡತಗಳಿಂದ ತೆಗೆದಂತಿದೆಯೆಂದು ಕಿಡಿಕಾರಿದ್ದವು.
ಹೊಸ ನೀತಿಯು ಎಲ್ಲರಿಗೂ ಗುಣಮಟ್ಟದ ಶಿಕ್ಷಣದ ಕುರಿತು ಗಮನಹರಿಸಲಿದೆ ಎಂದ ಜಾವಡೇಕರ್, ಕರಡಿನ ಕುರಿತು ಅಭಿಪ್ರಾಯ ಹಾಗೂ ಟೀಕೆಗಳನ್ನು ಆಹ್ವಾನಿಸಲಾಗಿದೆ. ಅದಕ್ಕೆ ಸೆ.15ರ ವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದರು.
ತನ್ನ ಬಾಲ್ಯ ಕಾಲದಲ್ಲಿ ತನ್ನದು ಬಡಕುಟುಂಬವಾಗಿತ್ತು. ಒಂದು ದಿನ ಪತ್ರಿಕೆಯನ್ನು ಕೊಳ್ಳಲೂ ಸಾಧ್ಯವಿರಲಿಲ್ಲ. ತಾನು ನೆರೆ ಮನೆಗಳಿಗೆ ಹೋಗಿ ಪತ್ರಿಕೆ ಓದುತ್ತಿದ್ದೇನೆಂದು ಅವರು, ವಿದ್ಯಾರ್ಥಿಗಳೊಂದಿಗೆ ಮಾತುಕತೆಯ ವೇಳೆ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News